ಕಣ್ಣ ಮುಂದೆ ಜಿಂಕೆಗಳ ಹಿಂಡೆ ಇದ್ದರೂ ಕ್ಯಾರೇ ಅನ್ನದ ಹುಲಿ... ವಿಡಿಯೋ ವೈರಲ್

By Suvarna News  |  First Published Feb 2, 2022, 2:43 PM IST
  • ರಾಜ ಗಾಂಭೀರ್ಯದಲ್ಲಿ ನಡೆದು ಹೋದ ಹುಲಿ ವಿಡಿಯೋ ವೈರಲ್‌
  • ನಾಗರಹೊಳೆ ಅಭಯಾರಣ್ಯದ ವಿಡಿಯೋ
  • 2016 ರ ವಿಡಿಯೋ ಈಗ ವೈರಲ್‌

ತನಗೆ ಹಸಿವಾಗದೇ ಹೋದರೆ ಯಾವ ಪ್ರಾಣಿಯೂ ಮತ್ತೊಂದರ ಮೇಲೆ ದಾಳಿ ನಡೆಸದು. ಹೊಟ್ಟೆ ತುಂಬಿದಲ್ಲಿ ಅದು ತನ್ನ ಆಹಾರ ಕಣ್ಣೆದುರೇ ಓಡಾಡಿದರು ಕ್ಯಾರೇ ಎನ್ನದು. ಇದಕ್ಕೊಂದು ಉತ್ತಮ ಉದಾಹರಣೆ ನಾಗರಹೊಳೆ ಅಭಯರಾಣ್ಯದ ಈ ವಿಡಿಯೋ.  ವಿಡಿಯೋದಲ್ಲಿ ತೋರಿಸುವಂತೆ ನೂರಾರು ಜಿಂಕೆಗಳು ಕಾಡಿನಲ್ಲಿ ಅಲೆದಾಡುತ್ತಿರುತ್ತವೆ. ಅವುಗಳ ಎದುರೇ ಬರುವ ಹುಲಿ ತನಗೂ ಅವುಗಳಿಗೂ ಯಾವುದೇ ಸಂಬಂಧವಿಲ್ಲದಂತೆ ರಾಜ ಗಾಂಭೀರ್ಯ ನಡೆಯ ಮೂಲಕ ಮುಂದೆ ಸಾಗುತ್ತದೆ. ಆದರೆ ಜಿಂಕೆಗಳು ಮಾತ್ರ ಆತಂಕದಿಂದ ಅತ್ತಿತ್ತ ಚದುರಿ ಓಡಲು ಪ್ರಯತ್ನಿಸುತ್ತವೆ. 

2016 ರ ಸೆಪ್ಟೆಂಬರ್‌  17 ರಂದು ಸೆರೆಯಾದ ನಾಗರಹೊಳೆ ಅಭಯಾರಣ್ಯದಲ್ಲಿ ಸೆರೆಯಾದ ವಿಡಿಯೋ ಇದಾಗಿದ್ದು,  ವೈರಲ್‌ ಹಗ್‌ ಎಂಬ ಯೂಟ್ಯೂಬ್‌ ಚಾನೆಲ್‌ 2019ರ ಮಾರ್ಚ್‌  29 ರಂದು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು, ಈಗ ಸಾಮಾಜಿಕ ಜಾಲತಾಣದೆಲ್ಲೆಡೆ ವೈರಲ್‌ ಆಗುತ್ತಿದೆ. 

Tap to resize

Latest Videos

 

ಹಿಂದೆ ರಾಜೀವ್ ಗಾಂಧಿ (Rajiv Gandhi) ರಾಷ್ಟ್ರೀಯ ಉದ್ಯಾನವನ ಎಂದು ಕರೆಯಲ್ಪಡುತ್ತಿದ್ದ ಕರ್ನಾಟಕದ ನಾಗರಹೊಳೆ (Nagarahole) ಹುಲಿ ಸಂರಕ್ಷಿತ ಪ್ರದೇಶದಲ್ಲಿ ಈ ಘಟನೆ ನಡೆದಿದೆ.  ಈ ಸ್ಥಳವು ಪ್ರಾಜೆಕ್ಟ್ ಟೈಗರ್ ಮತ್ತು ಪ್ರಾಜೆಕ್ಟ್ ಎಲಿಫೆಂಟ್ ಅಡಿಯಲ್ಲಿ ವನ್ಯಜೀವಿ ಸಂರಕ್ಷಣೆಯ ಪ್ರಮುಖ ಕೇಂದ್ರವಾಗಿದೆ. ಹುಲಿ ಮತ್ತು ಜಿಂಕೆಗಳಲ್ಲದೆ, ಈ ಸ್ಥಳವು ಚಿರತೆ (leopard), ನೈಋತ್ಯ ಲಾಂಗೂರ್, ಏಷ್ಯಾಟಿಕ್ ಆನೆ (Asiatic Elephant), ಗೌರ್, ಸ್ಲೋತ್ ಕರಡಿ ಮತ್ತು ಇನ್ನೂ ಅನೇಕ ಪ್ರಾಣಿಗಳಿಗೆ ತನ್ನ ಒಡಲಲ್ಲಿ ಆಶ್ರಯ ನೀಡಿದೆ. 

ಕಾಡಿನಲ್ಲಿ ಜಿಂಕೆಗಳ ಹಿಂಡು ಚಲಿಸುತ್ತಿರುವುದು ವಿಡಿಯೋದಲ್ಲಿದೆ. ಕೆಲವೇ ಕ್ಷಣಗಳಲ್ಲಿ, ಒಂದು ಹುಲಿ ವಿರುದ್ಧ ದಿಕ್ಕಿನಿಂದ  ಹಿಂಡಿನ ಕಡೆಗೆ ಹೋಗುತ್ತದೆ. ಆದಾಗ್ಯೂ, ತನ್ನ ಸಾಮಾನ್ಯ ನಡವಳಿಕೆಯ ಬದಲಿಗೆ, ಈ ಹುಲಿ ಶಾಂತವಾಗಿ ಏನನ್ನೂ ಮಾಡದೆ ಗುಂಪನ್ನು ಹಾದು ಹೋಗುತ್ತದೆ. ಕೆಲವು ಕುತೂಹಲಕಾರಿ ಜಿಂಕೆಗಳು ಹುಲಿಯನ್ನು ವಿಚಲಿತಾರಿ ನೋಡುತ್ತಾ ನಿಂತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

Wildlife: ನೀರು ಕುಡಿಯುತ್ತಿದ್ದ ಕಾಡೆಮ್ಮೆ ಬೆನ್ನಟ್ಟಿ ಹುಲಿ ಬೇಟೆ, ಮೈ ಜುಂ ಎನಿಸುವ ಅಪರೂಪದ ದೃಶ್ಯ

ರಾಜಸ್ತಾನ (Rajasthan)ದ ಅಲ್ವಾರ್ (Alwar) ನಲ್ಲಿರುವ  ಸರಿಸ್ಕಾ ಹುಲಿ ಸಂರಕ್ಷಿತಾರಣ್ಯದಲ್ಲಿ ಹುಲಿಗಳೆರಡು ಸರಸವಾಡುವ ದೃಶ್ಯವೊಂದು ವಿಡಿಯೋದಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಕಳೆದ ವರ್ಷ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.ಹವ್ಯಾಸಿ ಫೋಟೋಗ್ರಾಪರ್‌ ಒಬ್ಬರು ಈ ಸುಂದರ  ಕ್ಷಣವನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಮಹೇಶ್‌ ಶರ್ಮಾ ಎಂಬ ಟ್ವಿಟ್ಟರ್‌ ಖಾತೆದಾರರು ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಇಲ್ಲಿವರೆಗೆ 8 ಸಾವಿರಕ್ಕೂ ಹೆಚ್ಚು ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. 

Mahindra Xylo ಬನ್ನೇರುಘಟ್ಟದಲ್ಲಿ ಪ್ರವಾಸಿಗರಿದ್ದ ಸಫಾರಿ ಗಾಡಿಯನ್ನು ಎಳೆದಾಡಿದ ಹುಲಿ... ಆನಂದ್‌ ಮಹೀಂದ್ರಾ ಹೇಳಿದ್ದೇನು..!

ಎರಡು ಹುಲಿಗಳು ಪರಸ್ಪರ ಒಂದರ ಮುಖವನ್ನು ಒಂದು ನೆಕ್ಕುತ್ತಿರುವುದು ವಿಡಿಯೋದಲ್ಲಿದೆ.  ವೀಡಿಯೊದ ಆರಂಭದಲ್ಲಿ ಹುಲಿ ಕಾಡಿನೊಳಗೆ ಮಣ್ಣಿನ ರಸ್ತೆಯಲ್ಲಿ ಕುಳಿತಿರುವುದನ್ನು ಕಾಣಬಹುದು. ಶೀಘ್ರದಲ್ಲೇ, ಮತ್ತೊಂದು ದೊಡ್ಡ ಹುಲಿ ಇದರತ್ತ ಧಾವಿಸಿ ಬರುತ್ತದೆ. ಅದು ಹತ್ತಿರವಾಗುತ್ತಿದ್ದಂತೆ, ಕುಳಿತಿದ್ದ ಹುಲಿ ತಕ್ಷಣವೇ ಎದ್ದು ನಿಲ್ಲುತ್ತದೆ. ಪ್ರೀತಿಯ ಪ್ರದರ್ಶನದಲ್ಲಿ, ಎರಡೂ ಹುಲಿಗಳು ತಮ್ಮ ಮುಖಗಳನ್ನು ಪರಸ್ಪರ ಉಜ್ಜಲು ಪ್ರಾರಂಭಿಸಿದವು. ನಂತರ ಒಟ್ಟಿಗೆ ಕುಳಿತು ಎರಡೂ ಹುಲಿಗಳು ಮೂಕ ಸಂಭಾಷಣೆಯಲ್ಲಿ ತೊಡಗಿವೆ. 

click me!