ಲಕ್ನೋ(ಮೇ.23): ಕೋವಿಡ್ ವ್ಯಾಕ್ಸಿನೇಷನ್ ಬಗ್ಗೆ ಪ್ರತಿಪಕ್ಷಗಳು ನಕಲು ಅಭ್ಯಾಸ ಮಾಡುತ್ತಿದ್ದಾರೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆರೋಪಿಸಿದ್ದಾರೆ. ಈ ಮೊದಲು ಲಸಿಕೆಗಳನ್ನು ವಿರೋಧಿಸುತ್ತಿದ್ದವರು ಈಗ ಅವುಗಳನ್ನು ಉಚಿತವಾಗಿ ಪಡೆಯಲು ಮುಂದಾಗುತ್ತಿದ್ದಾರೆ ಎಂದು ಹೇಳಿದ್ದಾರೆ.
ಅಖಿಲೇಶ್ ಯಾದವ್ ಅವರ ತವರೂರಾದ ಇಟವಾ ಜಿಲ್ಲೆಯ ಸೈಫೈಗೆ ಭೇಟಿ ನೀಡಿದಾಗ ಮುಖ್ಯಮಂತ್ರಿ ಈ ಹೇಳಿಕೆ ನೀಡಿದ್ದಾರೆ. ಈ ವರ್ಷದ ಆರಂಭದಲ್ಲಿ ಕೋವಿಡ್ ಲಸಿಕೆಗಳನ್ನು ವಿರೋಧಿಸಿ ಯಾದವ್ ಅವರು "ಬಿಜೆಪಿ ಲಸಿಕೆ" ಎಂದು ಕರೆದು ಚುಚ್ಚುಮದ್ದನ್ನು ಹಾಕಿಸಿಕೊಳ್ಳುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದು ಭಾರಿ ಟೀಕೆಗೊಳಗಾಗಿತ್ತು.
undefined
ಯಾಸ್ ಚಂಡಮಾರುತ: ಜನರ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಲು ಮೋದಿ ಸೂಚನೆ!
ಕಾಂಗ್ರೆಸ್ ವಕ್ತಾರ ಸಲ್ಮಾನ್ ನಿಯಾಜಿ ಕೂಡ ಲಸಿಕೆಯನ್ನು "ವಂಚನೆ" ಎಂದು ಕರೆದಿದ್ದರೆ, ಕಾಂಗ್ರೆಸ್ ನ ಮತ್ತೊಬ್ಬ ನಾಯಕ ರಶೀದ್ ಅಲ್ವಿ ಅವರು ಶ್ರೀ ಯಾದವ್ ಅವರನ್ನು ಬೆಂಬಲಿಸಿ ಮಾತನಾಡಿದ್ದರು.
ಈ ಮೊದಲು ಲಸಿಕೆಯನ್ನು ವಿರೋಧಿಸುತ್ತಿದ್ದವರು, ಈಗ ಅದನ್ನು ಪಡೆಯುತ್ತಿದ್ದಾರೆ. ಅವರು ಅದನ್ನು ಉಚಿತವಾಗಿ ಕೇಳುತ್ತಿದ್ದಾರೆ. ಇದು ಅವರ ದ್ವಂದ್ವ ಸ್ವರೂಪವನ್ನು ತೋರಿಸುತ್ತದೆ. ಲಸಿಕೆ ಒಂದು ಸುರಕ್ಷತೆಯಾಗಿರುವುದರಿಂದ ಜನರು ಈಗ ಬೆಂಬಲಕ್ಕೆ ಬಂದಿದ್ದಾರೆ. ಎಲ್ಲರೂ ಲಸಿಕೆ ಪಡೆಯುವಂತೆ ಕೋರುತ್ತೇನೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.