ಈ ವರ್ಷಾಂತ್ಯಕ್ಕೆ ಭಾರತದಲ್ಲಿ ನಡೆಯುವ 35 ಲಕ್ಷ ಮದುವೆಗಳಿಗೆ ಖರ್ಚಾಗಲಿದೆ ಇಷ್ಟು ಹಣ

By Kannadaprabha NewsFirst Published Sep 22, 2024, 8:19 AM IST
Highlights

ಈ ವರ್ಷದ ಅಂತ್ಯಕ್ಕೆ ಅಂದ್ರೆ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ 35 ಲಕ್ಷಕ್ಕೂ ಅಧಿಕ ಮದುವೆಗಳು ನಡೆಯಲಿವೆ ಎಂದು ಅಂದಾಜಿಸಲಾಗಿದೆ. ಇದಕ್ಕಾಗಿ  ಲಕ್ಷ ಲಕ್ಷ ಕೋಟಿ ಹಣ ಖರ್ಚು ಆಗಲಿದೆ.

ನವದೆಹಲಿ: ಭಾರತದಲ್ಲಿ ನವೆಂಬರ್‌-ಡಿಸೆಂಬರ್‌ನಲ್ಲಿ 35 ಲಕ್ಷ ವಿವಾಹಗಳು ನೆರವೇರುವ ನಿರೀಕ್ಷೆಯಿದೆ. ಇದಕ್ಕಾಗಿ 4.25 ಲಕ್ಷ ಕೋಟಿ ರು.ನಷ್ಟು ವೆಚ್ಚ ಆಗುವ ಸಾಧ್ಯತೆ ಇದೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ (ಸಿಎಐಟಿ) ವರದಿ ಹೇಳಿದೆ.

ಇದಕ್ಕೂ ಮುನ್ನ ಈ ವರ್ಷ ಜನವರಿ 15 ಮತ್ತು ಜುಲೈ15 ರ ನಡುವೆ 42 ಲಕ್ಷಕ್ಕೂ ಹೆಚ್ಚು ವಿವಾಹಗಳು ನಡೆದಿವೆ. ಇದು ಅಂದಾಜು ₹5.5 ಲಕ್ಷ ಕೋಟಿ ವೆಚ್ಚವನ್ನು ಸೃಷ್ಟಿಸಿದೆ ಎಂದೂ ಸಮೀಕ್ಷೆ ಹೇಳಿದೆ.

Latest Videos

2023-24ರಲ್ಲಿ 60 ಮುಹೂರ್ತದ ದಿನಗಳಿದ್ದವು. ಆದರೆ 24-25ರ ಅವಧಿಯಲ್ಲಿ ಅದಕ್ಕಿಂತ ಕಮ್ಮಿ (49) ಮುಹೂರ್ತಗಳಿವೆ. ಕಳೆದ ಸಾಲಿಗಿಂತ 11ರಷ್ಟು ಕಡಿಮೆ ಮುಹೂರ್ತಗಳಿದ್ದರೂ ಮದುವೆ ವೆಚ್ಚ ಮಾತ್ರ ಕಡಿಮೆ ಆಗಿಲ್ಲ ಎಂದು ವರದಿ ಹೇಳಿದೆ. ಭಾರತದಲ್ಲಿ ವರ್ಷಕ್ಕೆ ಸುಮಾರು 1 ಕೋಟಿ ಮದುವೆ ಸಮಾರಂಭಗಳು ನಡೆಯುತ್ತವೆ. ದೇಶವು ಮದುವೆ ಮಾರುಕಟ್ಟೆಯಲ್ಲಿ ವಿಶ್ವದ 2ನೇ ಅತಿದೊಡ್ಡ ರಾಷ್ಟ್ರವಾಗಿದೆ.

ಸೆಲೆಬ್ರಿಟಿ ವೆಡ್ಡಿಂಗ್ ಅಂದ್ರೆ ಎಷ್ಟು ದುಡ್ಡು ಖಾಲಿಯಾಗುತ್ತೆ, ಇವರು ಹೇಳ್ತಾರೆ ಕೇಳಿ!

ವೆಚ್ಚ ಏಕೆ ಹೆಚ್ಚಳ?:

ಇತ್ತೀಚಿನ ದಿನಗಳಲ್ಲಿ ಮದುವೆಯ ವೆಚ್ಚ ಹೆಚ್ಚಳಕ್ಕೆ, ಬದಲಾಗಿರುವ ಜನರ ಆದ್ಯತೆ/ಅಭಿರುಚಿಗಳು ಕಾರಣವಾಗಿವೆ. ಬಹುಖಾದ್ಯದ ಫುಡ್‌ ಕೌಂಟರ್‌ಗಳು, ಡ್ರೋನ್‌ ಮೂಲಕ ಮದುವೆಯ ಚಿತ್ರೀಕರಣ, ಪ್ರಿ-ವೆಡ್ಡಿಂಗ್‌ ಫೋಟೋ ಶೂಟ್‌, ಆಡಿಯೋ ಮೂಲಕ ಆಮಂತ್ರಣ ಕಳಿಸುವುದು, ಆರ್ಕೆಸ್ಟ್ರಾ ಏರ್ಪಡಿಸುವುದು, ಅತಿಥಿಗಳಿಗೆ ವಿಶಿಷ್ಟ ಕಾಣಿಕೆ ನೀಡುವುದು, ಮದುವೆ ಮಂಟಪವನ್ನು ಅತ್ಯಾಧುನಿಕ 3ಡಿ ತಂತ್ರಜ್ಞಾನ ಬಳಸಿ ಸಿಂಗರಿಸುವುದು- ಇವು ಹೊಸ ನಮೂನೆಯ ವೆಚ್ಚಗಳಾಗಿವೆ. ಹೀಗಾಗಿಯೇ ಮದುವೆ ವಚ್ಚ ಏರಿಕೆ ಆಗಿದೆ.

ಚಿನ್ನ ಲೇಪಿತ ಕಾಂಜೀವರಂ ಸೀರೆ ಧರಿಸಿದ್ದ ಐಶ್ವರ್ಯಾ ರೈ, ಅಭಿಷೇಕ್‌-ಐಶ್‌ ಮದುವೆಗೆ ಖರ್ಚಾಗಿದ್ದೆಷ್ಟು?

click me!