ತಿರುಪತಿ ಲಡ್ಡು ಅಪವಿತ್ರ..ಇಡೀ ದೇವಸ್ಥಾನ ಶುದ್ದೀಕರಣಕ್ಕೆ ಮುಂದಾದ ಆಂಧ್ರ ಸರ್ಕಾರ!

By Santosh Naik  |  First Published Sep 21, 2024, 9:10 PM IST

ತಿರುಪತಿ ತಿರುಮಲ ದೇವಸ್ಥಾನದಲ್ಲಿ ಲಡ್ಡು ಪ್ರಸಾದ ಅಪವಿತ್ರವಾಗಿರುವ ವಿಚಾರದ ಬೆನ್ನಲ್ಲೇ, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ದೇವಸ್ಥಾನದ ಶುದ್ಧೀಕರಣಕ್ಕೆ ಸೂಚನೆ ನೀಡಿದ್ದಾರೆ. ಈ ಕುರಿತು ಟಿಟಿಡಿ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದ ಸಿಎಂ, ಪವಿತ್ರೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆಯೂ ಚರ್ಚಿಸಿದ್ದಾರೆ. ಹಿಂದಿನ ಜಗನ್ ಸರ್ಕಾರದ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ.


ಬೆಂಗಳೂರು (ಸೆ.21): ತಿರುಪತಿ ತಿರುಮಲ ದೇವಸ್ಥಾನದ ಪವಿತ್ರ ಪ್ರಸಾದ ಅಪವಿತ್ರವಾಗಿರುವ ವಿಚಾರ ಗಂಭೀರವಾಗಿದೆ. ತಿಮ್ಮಪ್ಪನ ಭಕ್ತರಲ್ಲಿ ಈ ವಿಚಾರ ದೊಡ್ಡ ಮಟ್ಟದ ಘಾಸಿ ಮಾಡಿದ್ದು, ತಿರಪತಿ ದೇವಸ್ಥಾನದಲ್ಲಿ ಲಡ್ಡು ಪ್ರಸಾದ ಖರೀದಿಗೆ ಹೆಚ್ಚಿನ ಭಕ್ತರು ಕಾಣುತ್ತಿಲ್ಲ. ಅದರಲ್ಲೂ ದೇವಸ್ಥಾನದಲ್ಲಿ ಕೂಡ ಭಕ್ತರ ಸಂಖ್ಯೆ ಕಡಿಮೆ ಆಗಿದೆ. ಭಕ್ತಾದಿಗಳಲ್ಲಿ ದೇವಸ್ಥಾನದ ಪಾವಿತ್ರ್ಯತೆ ಹಾಗೂ ನಂಬಿಕೆಯನ್ನು ಉಳಿಸುವ ನಿಟ್ಟಿನಲ್ಲಿ ಆಂಧ್ರ ಪ್ರದೇಶ ಸರ್ಕಾರ ಇಡೀ ದೇವಸ್ಥಾನವನ್ನು ಶುದ್ದೀಕರಣ ಮಾಡುವ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಈ ಕುರಿತಾಗಿ ಟಿಟಿಡಿ ಜೊತೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ತುರ್ತು ಸಭೆ ನಡೆಸಿದ್ದಾರೆ. ಪ್ರಧಾನ ಅರ್ಚಕ,ಪಂಡಿತರು, ಹಿರಿಯ ಅಧಿಕಾರಿಗಳ ಜತೆ ಚರ್ಚೆ ನಡೆದಿದೆ. ತಿರುಪತಿ ಆಡಳಿತ ಭವನದಲ್ಲಿ ಚಂದ್ರಬಾಬು ನಾಯ್ಡು ದೊಡ್ಡ ಮೀಟಿಂಗ್‌ ನಡೆಸಿದ್ದಾರೆ. ಸಿಎಂ ನೇತೃತ್ವದಲ್ಲಿ ಸಭೆಯಲ್ಲಿ ಲಡ್ಡು ಶುದ್ಧೀಕರಣಕ್ಕೆ ನಿರ್ಧಾರ ಮಾಡಲಾಗಿದೆ. ತಿರುಪತಿಯಲ್ಲಿ ಪವಿತ್ರೋತ್ಸವ ಕಾರ್ಯಕ್ರಮಕ್ಕೂ ತೀರ್ಮಾನ ಮಾಡಲಾಗಿದ್ದು,  ಹಿಂದಿನ ಜಗನ್ ಸರ್ಕಾರದ ವಿರುದ್ಧ ಸೂಕ್ತ ತನಿಖೆಗೂ ಒಪ್ಪಿಗೆ ನೀಡಲಾಗಿದೆ.

ತಿರುಪತಿ ತಿಮ್ಮಪ್ಪನಿಗೆ ‘ಪವಿತ್ರೋತ್ಸವ’:  ತಿರುಮಲ ಲಡ್ಡು ಶುದ್ದೀಕರಣ ಮಾತ್ರವಲ್ಲದೆ, ಪವಿತ್ರೋತ್ಸವ ಕಾರ್ಯಕ್ರಮ ಕೂಡ ನಡೆಯಲಿದೆ. ಈ ಕುರಿತಾಗಿ ಶನಿವಾರ  ಅಧಿಕಾರಿಗಳ ಜತೆ ತುರ್ತು ಸಭೆ ನಡೆದಿದೆ. ದೇಶಾದ್ಯಂತ ಇರುವ ದೊಡ್ಡ ಆಧ್ಯಾತ್ಮಿಕ ಚಿಂತಕರು, ಪಂಡಿತರು, ವೇದಶಾಸ್ತ್ರ ವಿದ್ವಾಂಸರ ಜತೆ ಚರ್ಚೆಗೆ ಮುಂದಾದ ಆಂಧ್ರ ಸಿಎಂ ಮುಂದಾಗಿದ್ದಾರೆ. ದೇಶಾದ್ಯಂತ ಇರುವ ವಿವಿಧ ಪೀಠಾಧಿಪತಿಗಳ ಜತೆಗೆ ಮಾತುಕತೆ ನಡೆಸಲಿದ್ದಾರೆ.

ಲಡ್ಡು ಅಪವಿತ್ರಕ್ಕೆ ಸಂಬಂಧಿಸಿದಂತೆ ಯಾವ ರೀತಿ ಶುದ್ಧ ಮಾಡಬೇಕು. ವೆಂಕಟೇಶ್ವರ ಸ್ವಾಮಿಗಾಗಿ ಯಾವ್ಯಾವ ಕಾರ್ಯ ಆಯೋಜಿಸಬೇಕು? ತಿರುಪತಿ ಪ್ರಧಾನ ಅರ್ಚಕರು, ಆಗಮ ಪಂಡಿತರ ಜತೆಗೂ ಚರ್ಚೆ ನಡೆದಿದೆ. ತಿಮ್ಮಪ್ಪನ ಪವಿತ್ರೋತ್ಸವ ಕಾರ್ಯಕ್ರಮಕ್ಕೆ CM ನಾಯ್ಡು ತಯಾರಿ ಮಾಡುತ್ತಿದ್ದು, ಭಕ್ತರ ಮನಸ್ಸಿನಲ್ಲಿ ಮೂಡಿದ ಅಪವಿತ್ರತೆ ಹೋಗಲಾಡಿಸಲು ಚಿಂತನೆ ನಡೆಸಲಾಗಿದೆ. ಅಕ್ಟೋಬರ 14ರ ನಂತರ ತಿರುಪತಿಯಲ್ಲಿ  ಪವಿತ್ರೋತ್ಸವ ಕಾರ್ಯಕ್ರಮ ನಡೆಯುವ ಸಾಧ್ಯತೆ ಇದೆ.

Tap to resize

Latest Videos

undefined

ಈ ನಡುವೆ ಆಂಧ್ರ ಮಾಜಿ ಸಿಎಂ ಜಗನ್‌ ಮೋಹನ್‌ ರೆಡ್ಡಿ ಮತ್ತು ಮಾತನಾಡಿದ್ದು,‘ನಮ್ಮ ಕರ್ಮ ಏನು ಅಂದ್ರೆ,  ಬಿಜೆಪಿ  ನಾಯಕರಿಗೆ ಅರ್ಧಂಬರ್ಧ ತಿಳಿದಿದೆ. ಚಂದ್ರಬಾಬು ನಾಯ್ಡು ಅನ್ನೋ ವ್ಯಕ್ತಿ ಸಂಪೂರ್ಣ ಸುಳ್ಳು, ಮೋಸಗಾರ. ನಾನು ಏನು ಹೇಳುತ್ತಿದ್ದೇನೆ ಅದೆಲ್ಲವೂ ಸತ್ಯ. ಟಿಟಿಡಿ ಬೋರ್ಡ್‌ನಲ್ಲೂ ಕೂಡ  ಬಿಜೆಪಿಗೆ ಸಂಬಂಧಿಸಿದ ಹಿರಿಯ ಮಂತ್ರಿಗೆ ಸಂಬಂಧಿಸಿದ  ಪ್ರತಿನಿಧಿ ಮಂಡಳಿ ಸದಸ್ಯರಾಗಿರುತ್ತಾರೆ. ಈ ಪ್ರಕ್ರಿಯೆ, ವಿಧಾನಗಳು ನಾಯ್ಡುಗೆ ತಿಳಿದಿಲ್ಲವೇ..?' ಎಂದು ಪ್ರಶ್ನೆ ಮಾಡಿದ್ದಾರೆ.

ಅವರಿಗೆ ಗೊತ್ತಿಲ್ಲ ಎಂದರೆ ತಿಳಿದುಕೊಳ್ಳಲು ಹೇಳಿ. ಈ ಬಗ್ಗೆ ತಿಳಿದುಕೊಂಡು.. ಸುಳ್ಳನ್ನೂ ನಾಯ್ಡು ಅನ್ನೋ ವ್ಯಕ್ತಿ ಅಪಪ್ರಚಾರ ಮಾಡ್ತಿದ್ದಾರೆ. ಚಂದ್ರಬಾಬು ನಾಯ್ಡು ಅನ್ನೋ ವ್ಯಕ್ತಿಗೆ  ಅಂಕುಶ ಹಾಕುವಂತ ಧೈರ್ಯವಿದೆಯೇ? ಈ ಬಿಜೆಪಿ ಪಾರ್ಟಿಗೆ ಇದ್ಯಾ ಅಂತ ನಾನು ಕೇಳುತ್ತಿದ್ದೇನೆ. ನಿಜವಾಗಿ BJP ಚಿತ್ತಶುದ್ಧಿ ಇದ್ದರೆ, ನಿಜವಾಗಲೂ ಅವರು ಹಿಂದೂಗಳ ಪ್ರತಿನಿಧಿಗಳಾಗಿದ್ದರೆ,  ಬಿಜೆಪಿಯವರು ಪ್ರಾಮಾಣಿಕರಾಗಿದ್ದರೆ, ಚಂದ್ರಬಾಬು ನಾಯ್ಡುಗೆ ಟೀಕಿಸಬೇಕು. ಚಂದ್ರಬಾಬು ನಾಯ್ಡು ವಿರುದ್ಧ  ಕ್ರಮ ಕೈಗೊಳ್ಳಬೇಕು. ಇಂತಹ ಅನ್ಯಾಯದ ಕೆಲಸ ಮಾಡ್ತಿರೋದು ಧರ್ಮವೇ? ಚಂದ್ರಬಾಬು  ನಾಯ್ಡು ಅವರನ್ನು ಈ ಬಗ್ಗೆ ಕೇಳಿ. ಬಿಜೆಪಿಯವರಿಗೆ ನಿಜವಾಗಲೂ ಪ್ರಾಮಾಣಿಕತೆ ಇದ್ರೆ, ಈ ಕೆಲಸ ಮಾಡಲಿ ಎಂದು ಹೇಳಿದ್ದಾರೆ.

History Of Tirupati Laddu: 308 ವರ್ಷಗಳ ಇತಿಹಾಸದ ತಿರುಪತಿ ಲಡ್ಡುವಿಗೆ ಇದೆಂಥಾ ಅಪಚಾರ!

ಇನ್ನು ಜಗನ್‌ ವಿರುದ್ಧ ಮತ್ತಷ್ಟು ಟೀಕೆ ಮಾಡಿರುವ ಚಂದ್ರಬಾಬು ನಾಯ್ಡು, '320 ರೂಪಾಯಿಗೆ ತುಪ್ಪ ಬರುತ್ತೆ ಅಂತ ಕೊಳೆತ ವಸ್ತು, ತರಕಾರಿ ಪದಾರ್ಥ. ಪ್ರಾಣಿಗಳ ಕೊಬ್ಬು ಸೇರಿ  ಎಲ್ಲವನ್ನೂ ಬಳಸಿದ್ದಾರೆ. ಅಂತಹ ತುಪ್ಪ ತಂದು ದೇವರಿಗೆ ನೈವೇದ್ಯ  ಮಾಡುವಂತ ಸ್ಥಿತಿಗೆ ತಂದಿದ್ದರು. ಈಗ ಮಾತನಾಡುತ್ತಿದ್ದಾರೆ, ನಾನು ತಪ್ಪು ಮಾಡಿಲ್ಲ ಎನ್ನುತ್ತಿದ್ದಾರೆ. ಟೆಂಡರ್ ಕರೆಯಲಾಗಿತ್ತು, ಟೆಂಡರ್‌ ಅನ್ನು ನಿಮ್ಮ ಸರ್ಕಾರ ಕರೆದಿದ್ದು. 350 ರೂಪಾಯಿಗೆ ತುಪ್ಪು ಕೊಡ್ತಾರೆ ಎಂದರೆ ನೀವು ಆಲೋಚನೆ ಮಾಡಬೇಕಿತ್ತು. ಕೆ.ಜಿ ತುಪ್ಪಕ್ಕೆ 500 ರೂಪಾಯಿ ಇದೆ. ಹೀಗಿರುವಾಗ 350 ರೂ. ಅಂತ ಹೇಳಿ. ಕಲಬೆರಕೆ ತುಪ್ಪ ಬಳಸಿದ್ದಾರೆ, ಜನರ 
ಭಾವನೆ ಜತೆಗೆ ಆಟವಾಡಿದ್ದಾರೆ' ಎಂದು ಹೇಳಿದ್ದಾರೆ.

ತಿರುಪತಿ ಲಾಡು ತಯಾರಿಸಲು ದನದ ಕೊಬ್ಬು, ಮೀನೆಣ್ಣೆ ಬಳಕೆ, ಟೆಸ್ಟ್‌ ರಿಪೋರ್ಟ್‌ನಿಂದ ದೃಢ!

ನಾನು ಸಿಎಂ ಆಗಿ ಅಧಿಕಾರಕ್ಕೆ ಬಂದ ಮೊದಲ ದಿನವೇ. ಒಬ್ಬ ಅಧಿಕಾರಿ ಶ್ಯಾಮಲಾರಾವ್  ಅವರನ್ನು ನೇಮಿಸಿದೆ. ಅವರಿಗೆ ಒಂದೇ ಮಾತು ಹೇಳಿ ಕಳುಹಿಸಿದೆ. ಮತ್ತೆ ನಾನು ನಿಮಗೆ ಶಹಬ್ಬಾಸ್‌ ಅನ್ನೋ ಬೇಕು ಎಂದರೆ, ಜನರು ಮೆಚ್ಚುವಂತೆ ಕೆಲಸ ಮಾಡು, ದೇವರ ಸೇವೆ ಮಾಡಲು ಕಳುಹಿಸಿದೆ. ಇಂದು ತಿರುಪತಿ ತುಪ್ಪವನ್ನು ಬದಲಾಯಿಸಿದ್ದಾರೆ. ಕೆಎಂಎಫ್‌ ನಂದಿನಿ  ತುಪ್ಪವನ್ನು ಖರೀದಿಸಿದ್ದಾರೆ. ಇವಾಗ ನೀವು ಪ್ರಸಾದವನ್ನು ತಿಂದಿದ್ದೀರಾ ಅಂತ ಕೇಳುತ್ತಿದ್ದೀನಿ. ಪ್ರಸಾದ ತಿಂದಿದ್ದೀರಾ..? ಮೊದಲಿಗಿಂತ ಈಗ ಚೆನ್ನಾಗಿದ್ಯಾ ಅಂತ ಕೇಳುತ್ತಿದ್ದೀನಿ. ಚೆನ್ನಾಗಿದೆ ಅಂದ್ರೆ ನಿಮ್ಮ ಕೈಯನ್ನು ಮೇಲಕ್ಕೆತ್ತಿ..ಇದು ಸೈಕೋ ಮತ್ತು ನೀವು ಹೇಳುವ  ಮಾತಿಗೆ ಇರುವ ವ್ಯತ್ಯಾಸ..? ಎಂದಿದ್ದಾರೆ.

click me!