1700 ಲಸಿಕೆ ಕದ್ದ ಕಳ್ಳ | ಕದ್ದ ವ್ಯಾಕ್ಸೀನ್ ಡೋಸ್‌ಗಳನ್ನು ಮರಳಿ ತಂದಿಟ್ಟ | ಜೊತೆಗಿತ್ತು ಒಂದು ಮೆಸೇಜ್
ಜಿಂದ್(ಏ.23): ಹರಿಯಾಣದ ಜಿಂದ್‌ನಲ್ಲಿ ಕಳ್ಳತನವಾಗಿದ್ದ ಕೊರೋನಾ ವೈರಸ್‌ನ 1700 ಡೋಸ್ ಲಸಿಕೆಗಳನ್ನು ಕಳ್ಳ ಮರಳಿ ಒಪ್ಪಿಸಿದ್ದಾನೆ. ಲಸಿಕೆ ಇದ್ದಂತಹ ಬ್ಯಾಗ್‌ನನ್ನು ತಂದು ಬಿಟ್ಟು ಹೋಗಿದ್ದಾನೆ ಕದ್ದಿದ್ದ ವ್ಯಕ್ತಿ. ಹಾಗೆಯೇ ಅದರ ಜೊತೆಗೇ ಒಂದು ಚೀಟಿ ಮತ್ತು ಸಂದೇಶವೂ ಇತ್ತು.
ಕ್ಷಮಿಸಿ, ಇದು ಕೊರೋನಾದ ಔಷಧಿ ಎಂದು ತಿಳಿದಿರಲಿಲ್ಲ ಎಂದು ಹಿಂದಿಯಲ್ಲಿ ಬರೆದಿದ್ದ ಚೀಟಿಯೂ ವ್ಯಾಕ್ಸೀನ್ ಬ್ಯಾಗ್ ಜೊತೆ ಪತ್ತೆಯಾಗಿದೆ. ವ್ಯಾಕ್ಸೀನ್ ಕದ್ದ ವ್ಯಕ್ತಿ ಯಾರೆಂಬುದು ತಿಳಿದುಬಂದಿಲ್ಲ.
undefined
ಆಕ್ಸಿಜನ್ ತುಂಬಿಸಲು ಟ್ಯಾಂಕರ್‌ಗಳನ್ನು ಏರ್‌ಲಿಫ್ಟ್ ಮಾಡಿಸಿದ IAF
ಲಸಿಕೆ ಕದ್ದ ವ್ಯಕ್ತಿಯನ್ನು ಹುಡುಕುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕೊವಿಶೀಲ್ಡ್ ಮತ್ತು ಕೊವ್ಯಾಕ್ಸೀನ್ ಇದ್ದ ಬ್ಯಾಗ್ ಜಿಂದ್ ಜನರಲ್ ಆಸ್ಪತ್ರೆಯಿಂದ ಕಳುವಾಗಿತ್ತು. ಇದು ದೇಶಾದ್ಯಂತ ಭಾರೀ ಸುದ್ದಿ ಮಾಡಿತ್ತು.
ಗುರುವಾರ ಮಧ್ಯಾಹ್ನ 12.30 ರ ಸುಮಾರಿಗೆ ಆ ವ್ಯಕ್ತಿ ಬ್ಯಾಗ್‌ನೊಂದಿಗೆ ಹಿಂದಿರುಗಿ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯ ಹೊರಗಿನ ಚಹಾ ಅಂಗಡಿಯಲ್ಲಿ ಒಬ್ಬ ವ್ಯಕ್ತಿಗೆ ಕೊಟ್ಟು ಹೋಗಿದ್ದ. ಅಪರಿಚಿತ ಶಂಕಿತ ವ್ಯಕ್ತಿಯು ತಾನು ಪೊಲೀಸರಿಗೆ ಆಹಾರವನ್ನು ತಲುಪಿಸುತ್ತಿದ್ದೇನೆ ಎಂದು ಹೇಳಿ ಓಡಿಹೋಗಿದ್ದ.
ನಿರ್ಬಂಧಗಳೊಂದಿಗೆ ಹರಿಯಾಣ ಸರ್ಕಾರವು ಎಲ್ಲಾ ಸಾರ್ವಜನಿಕ ಗುಂಪುಗೂಡುವಿಕೆಗೆ ನಿಷೇಧವನ್ನು ಘೋಷಿಸಿದೆ. ಪ್ರತಿದಿನ ಸಂಜೆ 6 ಗಂಟೆಯೊಳಗೆ ಎಲ್ಲಾ ಅಂಗಡಿಗಳನ್ನು ಮುಚ್ಚುವಂತೆ ಸರ್ಕಾರ ಆದೇಶಿಸಿದೆ. ಶುಕ್ರವಾರದಿಂದ ಈ ನಿರ್ಬಂಧಗಳು ಅನ್ವಯವಾಗುತ್ತವೆ ಎಂದು ಹರಿಯಾಣ ಸರ್ಕಾರ ಹೇಳಿದೆ.