ದೇಗುಲದಲ್ಲಿ ಕಳ್ಳತನ: ತಾನೇ ಕೊರೆದ ಕನ್ನದೊಳಗೆ ಸಿಲುಕಿಕೊಂಡ ಕಳ್ಳ

By Anusha KbFirst Published Apr 6, 2022, 10:12 AM IST
Highlights
  • ದೇಗುಲ ಕಳ್ಳತನಕ್ಕೆ ಬಂದು ಸಿಕ್ಕಿಬಿದ್ದ ಕಳ್ಳ
  • ದೇಗುಲದ ಗೋಡೆಗೆ  ಕನ್ನ ಕೊರೆದು ಒಳ ನುಸುಳಿದ್ದ
  • ಕದ್ದು ವಾಪಸ್ ಬರುವ ವೇಳೆ ಕನ್ನದೊಳಗೆ ಸಿಲುಕಿಕೊಂಡ

ಆಂಧ್ರಪ್ರದೇಶ(ಏ.6): ದೇವರೇ ನ್ಯಾಯ ನೀಡಿದರಾ ಹೀಗೊಂದು ಪ್ರಶ್ನೆ ಉದ್ಭವಿಸಲು ಕಾರಣವಾಗಿದೆ ಈ ಘಟನೆ. ಆಂಧ್ರಪ್ರದೇಶದ ದೇಗುಲವೊಂದರಲ್ಲಿ ಕಳ್ಳತನ ಮಾಡಲು ನಿರ್ಧರಿಸಿದ ಕಳ್ಳ ದೇಗುಲದ ಗೋಡೆಗೆ ಕನ್ನ ಕೊರೆದು ಒಳ ನುಗ್ಗಿದ ಕಳ್ಳ ದೇಗುಲದಲ್ಲಿದ್ದ ಚಿನ್ನಾಭರಣವನ್ನು ತೆಗೆದುಕೊಂಡು ವಾಪಸ್ ತಾನೇ ಕೊರೆದ ಕನ್ನದ ಮೂಲಕ ಹೊರ ಬರಲು ಯತ್ನಿಸಿದ್ದಾನೆ. ಆದರೆ ವಾಪಸ್‌ ಹೊರ ಬರಲಾಗದೆ ಅಲ್ಲೇ ಸಿಲುಕಿದ್ದಾನೆ. ನಂತರ ಆತ ಸಹಾಯಕ್ಕಾಗಿ ಗ್ರಾಮಸ್ಥರನ್ನು ಕೂಗಿದ್ದು, ಗ್ರಾಮಸ್ಥರು ಬಂದು ಆತನಿಗೆ ನೀರು ನೀಡಿ ಆತನನ್ನು ಆ ತೂತಿನಿಂದ ಎಳೆದು ಹೊರ ತೆಗೆದಿದ್ದಾರೆ. 

ಕರ್ಮಕ್ಕೆ ತಕ್ಕ ಪ್ರತಿಫಲವನ್ನು ಮನುಷ್ಯ ಅನುಭವಿಸುತ್ತಾನೆ. ಆದು ಒಳ್ಳೆಯ ಕರ್ಮವೇ ಆಗಿರಲಿ ಅಥವಾ ಕೆಟ್ಟ ಕರ್ಮವೇ ಆಗಿರಲಿ ಅದಕ್ಕೆ ತಕ್ಕನಾದ ಪ್ರತಿಫಲ ಇದ್ದೇ ಇರುತ್ತದೆ. ಹೀಗೆ ಆಂಧ್ರಪ್ರದೇಶದಲ್ಲಿ ದೇಗುಲದಲ್ಲಿ ಕಳ್ಳತನ ಮಾಡಿದ ಕಳ್ಳನೊರ್ವ ದೇಗುಲದಿಂದ ಹೊರ ಬರಲಾಗದೇ ಗ್ರಾಮಸ್ಥರ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದು ಬಳಿಕ ಗ್ರಾಮಸ್ಥರೇ ಆತನನ್ನು ಆತ ಸಿಲುಕಿಕೊಂಡಿದ್ದ ತೂತಿನಿಂದ ಹೊರ ತೆಗೆದು ರಕ್ಷಣೆ ಮಾಡಿದ್ದಾರೆ. ಆಂಧ್ರಪ್ರದೇಶದ (Andhra Pradesh) ಶ್ರೀಕಾಕುಲಂ (Srikakulam) ಜಿಲ್ಲೆಯ ಕಂಚಿಲಿ ಮಂಡಲದ (Kanchili mandal) ಜಡಿಮುಡಿ(Jadimudi) ಗ್ರಾಮದ ದೇಗುಲವೊಂದರಲ್ಲಿ ಏಪ್ರಿಲ್ 5 ರಂದು ಈ ಘಟನೆ ನಡೆದಿದೆ. 

ಮಂಡ್ಯ : 9 ತಿಂಗಳಲ್ಲಿ 23 ದೇಗುಲದಲ್ಲಿ ಕಳ್ಳತನ

ಕಳ್ಳತನಕ್ಕೆ ಯತ್ನಿಸಿ ಸಿಕ್ಕಿಬಿದ್ದ ವ್ಯಕ್ತಿಯನ್ನು ಪಪರಾವ್‌ (Paparao) ಎಂದು ಗುರುತಿಸಲಾಗಿದೆ. ಸ್ಥಳೀಯರ ಪ್ರಕಾರ ಈತ ದೇಗುಲಕ್ಕೆ ನುಗ್ಗಲು ತೂತೊಂದನ್ನು ಕೊರೆದಿದ್ದ ನಂತರ ಅದರ ಮೂಲಕ ಒಳನುಗ್ಗಿ ಅಮೂಲ್ಯ ವಸ್ತುಗಳನ್ನು ಕದ್ದು ವಾಪಸ್‌ ತಪ್ಪಿಸಿಕೊಳ್ಳುವ ವೇಳೆ ಆ ತೂತಿನೊಳಗೆ ಸಿಲುಕಿಕೊಂಡಿದ್ದ. ನಂತರ ಗ್ರಾಮಸ್ಥರು ಆತನನ್ನು ಬಿಡಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.

ಕಳೆದ ವರ್ಷ ಥಾಣೆಯಲ್ಲಿ ವಿಚಿತ್ರ ಪ್ರಕರಣವೊಂದು ನಡೆದಿತ್ತು. ಕಳ್ಳನೊಬ್ಬ ದೇವಾಲಯದ  ಕಾಣಿಕೆ ಹುಂಡಿಯನ್ನು (Robbery) ಎತ್ತಿಕೊಂಡು ಹೋಗಿದ್ದ, ಆತನ ಕೃತ್ಯ ಸಿಸಿಟಿವಿಯಲ್ಲಿ(CCTV)  ಸೆರೆಯಾಗಿತ್ತು.  ದೇವಾಲಯದ (Temple) ಗುಡಿ ಒಳಕ್ಕೆ ನುಗ್ಗಿದ ಕಳ್ಳ ಅತ್ತಿತ್ತ ನೋಡಿದ್ದ. ಬಳಿಕ ದೇವರಿಗೆ  ಪ್ರಾರ್ಥನೆ ಮಾಡಿ ನಮಸ್ಕರಿಸಿ ಕಾಣಿಕೆ ಹುಂಡಿಗೆ ಕೈ ಹಾಕಿದ್ದಾನೆ. ನನ್ನನ್ನು ಕ್ಷಮಿಸುಬಿಡು ದೇವರೇ ಎಂದು ಕೇಳಿಕೊಂಡಿರಬಹುದು!

Robbery; ದೇವರ ಹುಂಡಿ ಕಳ್ಳತನಕ್ಕೂ ಮುನ್ನ  ನಮಸ್ಕಾರ ಮಾಡಿಕೊಂಡ! ವಿಡಿಯೋ

ಥಾಣೆಯ (Thane) ಹನುಮಾನ್ ದೇವಾಲಯದಲ್ಲಿ ಕಳೆದ ವರ್ಷ ನವೆಂಬರ್ 9 ರಂದು ಈ ಘಟನೆ ನಡೆದಿತ್ತು. ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಖೋಪಾಟ್ ಪ್ರದೇಶದಲ್ಲಿ ನೆಲೆಗೊಂಡಿರುವ ಭಗವಾನ್ ಹನುಮಾನ್ ದೇವಾಲಯಕ್ಕೆ (Hanuman Temple) ಕಳ್ಳ ನುಗ್ಗಿದ್ದಾನೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಳ್ಳ ದೇವರ ಪೋಟೋ ತೆಗೆದುಕೊಂಡಿರುವುದು ಕಂಡು ಬಂದಿದೆ. ನಂತರ ಸುತ್ತ ಮುತ್ತ ಯಾರೂ ಇಲ್ಲದನ್ನು ನೋಡಿ ಕಾಣಿಕೆ ಹುಂಡಿಗೆ ಕೈ ಹಾಕಿದ್ದಾನೆ.

ಪ್ರಾರ್ಥನೆ ಮಾಡಿ ದೇವರಿಗೆ ನಮಿಸುವಂತೆ ನಟಿಸಿ ಏಕಾಏಕಿ ಕಾಣಿಗೆ ಹುಂಡಿಯನ್ನು ಎತ್ತಿಕೊಂಡು ಪರಾರಿಯಾಗಿದ್ದಾನೆ. ಗೌರವ ಮತ್ತು ಭಕ್ತಿಯ ಸಂಕೇತವಾಗಿ ಹನುಮಾನ್ ವಿಗ್ರಹದ ಪಾದಗಳನ್ನು ಮುಟ್ಟುತ್ತಾನೆ. ಸ್ವಲ್ಪ ಸಮಯದ ನಂತರ ದೇವರ ಮುಂದೆ ಇಟ್ಟಿದ್ದ ಕಾಣಿಕೆ ಪೆಟ್ಟಿಗೆಯನ್ನು ಎತ್ತಿಕೊಂಡು ತರಾತುರಿಯಲ್ಲಿ ಅಲ್ಲಿಂದ ಕಾಲು ಕೀಳುತ್ತಾನೆ. ಮಾಹಿತಿ ಆಧರಿಸಿ ಕಾರ್ಯ ನಿರತ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.  ಸುಮಾರು ಒಂದು ಸಾವಿರಕ್ಕೂ ಅಧಿಕ ಕಾಣಿಕೆ ಹಣ ಅದರಲ್ಲಿ ಇತ್ತು ಎಂದು ದೇವಾಲಯದ ಮಂಡಳಿ ಪೊಲೀಸರಿಗೆ ವಿಚಾರ ತಿಳಿಸಿದೆ.  ಶನಿವಾರ ಆರೋಪಿಯನ್ನು ಬಂಧಿಸಿ ಕಳ್ಳತನ ಮಾಡಿದ್ದ ಹಣವನ್ನು ಆತನಿಂದ ಜಪ್ತಿ ಮಾಡಿಕೊಳ್ಳಲಾಗಿದೆ.
 

click me!