Men Vs Women: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಗಂಡ-ಹೆಂಡತಿ ನಡುವಿನ ತಮಾಷೆಯ ರೀಲ್ಸ್‌ಗಳು ಗಮನ ಸೆಳೆಯುತ್ತಿವೆ. ಇದೀಗ ಇಂತಹುವುದೇ ಒಂದು ವಿಡಿಯೋ ವೈರಲ್ ಆಗಿದೆ.
Boys Vs Girls: ಇಂದು ಗಂಡನಿಷ್ಟೇ ಸಮಾನವಾಗಿ ಮಹಿಳೆಯರು ಕೆಲಸ ಮಾಡುತ್ತಾರೆ. ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಆದ್ರೆ ಮಹಿಳೆ ಮತ್ತು ಪುರುಷ ನಡುವಿನ ವ್ಯತ್ಯಾಸ ಏನು ಎಂಬುದರ ಕುರಿತು ಕೆಲವು ರೀಲ್ಸ್‌ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಸೋಶಿಯಲ್ ಮೀಡಿಯಾದಲ್ಲಿ ಗಂಡ ಮತ್ತು ಹೆಂಡ್ತಿ ನಡುವಿನ ತಮಾಷೆಯ ರೀಲ್ಸ್‌ಗಳು ಬಹುತೇಕ ಎಲ್ಲರ ಗಮನಕ್ಕೂ ಬಂದಿರುತ್ತವೆ. ಈ ವಿಡಿಯೋಗಳು ತಮಾಷೆಯಾಗಿದ್ರೂ ಭಾಗಶಃ ನಿಜ ಎಂದು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಹಾಗೆ ಇದು ನಮ್ಮಿಂದ ಸಾಧ್ಯವಿಲ್ಲ ಎಂದು ಮಹಿಳೆಯರು ಸಹ ಒಪ್ಪುತ್ತಾರೆ.
ಯಾವುದೇ ಸಮಾರಂಭ/ಮದುವೆ ಇದ್ರೆ ಮಹಿಳೆಯರು ಸಿದ್ಧವಾಗಲು ಕನಿಷ್ಠ1 ಗಂಟೆಯಾದ್ರೂ ಬೇಕಾಗುತ್ತದೆ. ಆದರೆ ಪುರುಷರು ಹಾಗಲ್ಲ, ಒಂದು ಶರ್ಟ್-ಪ್ಯಾಂಟ್ ಹಾಕೊಂಡು 5 ರಿಂದ 10 ನಿಮಿಷದಲ್ಲಿ ರೆಡಿಯಾಗುತ್ತಾರೆ. ಕಡಿಮೆ ಸಮಯದಲ್ಲಿ ರೆಡಿಯಾಗೋದು ಮಹಿಳೆಯರಿಂದ ಸಾಧ್ಯವಾಗಲ್ಲ. ಇನ್ನು ಮಹಿಳೆಯರು ಪ್ರತಿಯೊಂದು ಕೆಲಸವೂ ಅಚ್ಚುಕಟ್ಟು ಆಗಿರಬೇಕೆಂದು ಬಯಸುತ್ತಾರೆ. ಎಲ್ಲದರಲ್ಲಿಯೂ ಕ್ರಮಬದ್ಧತೆಯನ್ನು ಹೊಂದಿರುತ್ತಾರೆ. ಯಾವುದೇ ಒಂದು ವಸ್ತು ಮಿಸ್ ಆದ್ರೂ ಮಹಿಳೆಯರು ಒಪ್ಪಿಕೊಳ್ಳಲ್ಲ. ಆದ್ರೆ ಪುರುಷರು ಹಾಗಲ್ಲ, ಎಲ್ಲದಕ್ಕೂ ಮತ್ತು ಎಲ್ಲಾ ಜಾಗದಲ್ಲಿಯೂ ಅಡ್ಜಸ್ಟ್ ಆಗುತ್ತಾರೆ.
ಇದನ್ನೂ ಓದಿ: ಆಹಹಾ ಏನೋ ಘಮ ಘಮ ಬರ್ತಿದೆ: ಅಡುಗೆ ಕೋಣೆಯ ಕಿಟಿಕಿಯಲ್ಲಿಇಣುಕಿದ ಸಿಂಹದ ವೀಡಿಯೋ ವೈರಲ್
ವೈರಲ್ ವಿಡಿಯೋದಲ್ಲಿ ಏನಿದೆ?
ಇತ್ತೀಚಿನ ವಿಡಿಯೋವೊಂದರಲ್ಲಿ ವ್ಯಕ್ತಿಯೊಬ್ಬ ಬೆಳಗ್ಗೆ 7.55 ನಿಮಿಷದವರೆಗೂ ಹಾಸಿಗೆಯಲ್ಲಿರುತ್ತಾನೆ. ನಂತರ ಮರುಕ್ಷಣವೇ ಅಂದ್ರೆ ಬೆಳಗ್ಗೆ 8 ಗಂಟೆಗೆ ವೆಲ್ ಡ್ರೆಸ್ ಧರಿಸಿ ನಿಂತಿರುತ್ತಾನೆ. ಅದೇ ಈ ಕೆಲಸ ಹುಡುಗಿಯರಿಂದ ಇದು ಸಾಧ್ಯವಿಲ್ಲ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋ ನೋಡಿದ ಪುರುಷ ನೆಟ್ಟಿಗರು, ಇದು ನೂರಕ್ಕೆ ನೂರರಷ್ಟು ಸತ್ಯವಾದ ಮಾತು. 7.55ಕ್ಕೆ ನಿದ್ದೆಯಿಂದ 8 ಗಂಟೆಗೆ ರೆಡಿಯಾಗಿ ಹೊರಗಡೆ ಬರಲು ಪುರುಷರಿಂದ ಮಾತ್ರ ಸಾಧ್ಯ ಎಂದು ಕಮೆಂಟ್ ಮಾಡಿದ್ದಾರೆ. ಇದೇ ವಿಡಿಯೋಗೆ ಕಮೆಂಟ್ ಮಾಡಿರುವ ಮಹಿಳಾ ನೆಟ್ಟಿಗರು, ಸ್ನಾನ ಮಾಡದೇ ಹೊರಗಡೆ ಕೊಳಕಾಗಿ ಬರಲು ಪುರುಷರಿಂದ ಮಾತ್ರ ಸಾಧ್ಯ ಎಂದು ಕಾಲೆಳೆದಿದ್ದಾರೆ. ಇದೇ ರೀತಿಯ ವಿಡಿಯೋಗಳು ಮದುವೆಗೆ ತಯಾರಿಯಾಗುವ ಕಂಟೆಂಟ್ ಹೊಂದಿರುತ್ತವೆ.
ಸೃಜನ್ ಲೋಕೇಶ್ ವಿಡಿಯೋ
ಇದೇ ರೀತಿಯ ಕಂಟೆಂಟ್ ಹೊಂದಿರುವ ವಿಡಿಯೋವನ್ನು ಸೃಜನ್ ಲೋಕೇಶ್ ಯುಟ್ಯೂಬ್‌ನಲ್ಲಿದೆ. ಪೂಜೆಗೆ ಬೆಳಗ್ಗೆ 10 ಗಂಟೆಗೆ ಹೋಗೋಣ ಎಂದು ಸೃಜನ್ ಲೋಕೇಶ್ ಹೇಳುತ್ತಾರೆ. ಸೃಜನ್ ಲೋಕೇಶ್ ಮತ್ತು ಗಿರಿಜಾ ಲೋಕೇಶ್ ಅರ್ಧ ಗಂಟೆಗೂ ಮುಂಚೆಯೇ ರೆಡಿಯಾಗಿರುತ್ತಾರೆ. ಆದ್ರೆ ಗಿರಿಜಾ ಲೋಕೇಶ್ ಸೀರೆ ಮೇಲೆ ಕಷಾಯ ಬೀಳುತ್ತೆ. ಹೀಗೆ ಒಬ್ಬರ ನಂತರ ಒಬ್ಬರು ಸೀರೆ ಬದಲಿಸುತ್ತಾ ಹೋಗುತ್ತಾರೆ. ಬೆಳಗ್ಗೆ 10 ಗಂಟೆಯ ಪೂಜೆಗೆ ಸೃಜನ್ ಲೋಕೇಶ್ ಅವರ ಅಮ್ಮ ಮತ್ತು ಹೆಂಡತಿ ಮಧ್ಯಾಹ್ನ 2.30ಕ್ಕೆ ರೆಡಿಯಾಗುತ್ತಾರೆ. ಈ ವಿಡಿಯೋ 1.5 ಮಿಲಿಯನ್ ವ್ಯೂವ್ ಪಡೆದುಕೊಂಡಿದೆ.
ಇದನ್ನೂ ಓದಿ: ದಂಪತಿಗಳು ಮಲಗಿದ್ರೆ ಸಾಕು ತನ್ನಿಂದ ತಾನೇ ಬೌನ್ಸ್ ಆಗಲಿದೆ ಬೆಡ್, 'ಇಷ್ಟೆಲ್ಲಾ ಸೋಂಬೇರಿ ಇರಬಾರದು' ಎಂದ ನೆಟ್ಟಿಗರು!