ಚೀನಾ ಅತಿಕ್ರಮಣಕ್ಕೆ ಉಪಗ್ರಹ ಸಾಕ್ಷಿ ಇದೆ: ಜೈಶಂಕರ್‌

By Kannadaprabha News  |  First Published Jan 4, 2023, 10:59 AM IST

ಚೀನಾದ ಸೇನಾಪಡೆಗಳೇ ಮೊದಲು ಭಾರತದ ಮೇಲೆ ಅತಿಕ್ರಮಣಕ್ಕೆ ಪ್ರಯತ್ನಿಸಿವೆ ಎಂಬುದಕ್ಕೆ ಉಪಗ್ರಹಗಳ ಬಲವಾದ ಸಾಕ್ಷಿ ಇದೆ. ಹಾಗಾಗಿ ಈ ಕುರಿತಾಗಿ ಚೀನಾ ಭಾರತದ ಮೇಲೆ ಆರೋಪ ಮಾಡಲು ಸಾಧ್ಯವಿಲ್ಲ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಸೋಮವಾರ ಹೇಳಿದ್ದಾರೆ.


ವಿಯೆನ್ನಾ: ಚೀನಾದ ಸೇನಾಪಡೆಗಳೇ ಮೊದಲು ಭಾರತದ ಮೇಲೆ ಅತಿಕ್ರಮಣಕ್ಕೆ ಪ್ರಯತ್ನಿಸಿವೆ ಎಂಬುದಕ್ಕೆ ಉಪಗ್ರಹಗಳ ಬಲವಾದ ಸಾಕ್ಷಿ ಇದೆ. ಹಾಗಾಗಿ ಈ ಕುರಿತಾಗಿ ಚೀನಾ ಭಾರತದ ಮೇಲೆ ಆರೋಪ ಮಾಡಲು ಸಾಧ್ಯವಿಲ್ಲ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಸೋಮವಾರ ಹೇಳಿದ್ದಾರೆ.

ಆಸ್ಟ್ರಿಯಾದ ಸ್ಥಳೀಯ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಭಾರತ ಮತ್ತು ಚೀನಾ ಗಡಿಗಳಿಗೆ ಸಂಬಂಧಿಸಿದಂತೆ ಮಾಡಿಕೊಳ್ಳಲಾಗಿರುವ ಒಪ್ಪಂದಗಳನ್ನು ಚೀನಾ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಹಾಗಾಗಿಯೇ ಗಡಿ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ ಎಂದು ಹೇಳಿದ್ದಾರೆ. ‘ಇತ್ತೀಚಿನ ಎಲ್ಲಾ ಘಟನೆಗಳಿಗೂ ಉಪಗ್ರಹಗಳು ಸ್ಪಷ್ಟವಾದ ಸಾಕ್ಷಿಯನ್ನು ಒದಗಿಸುತ್ತವೆ. ಹಾಗಾಗಿ ಗಡಿಯಲ್ಲಿನ ಎಲ್ಲಾ ನಡೆಗಳು ಪಾರದರ್ಶಕವಾಗಿವೆ. ಭಾರತದ ಮೇಲೆ ಚೀನಾ ಸೇನೆ ಮೊದಲು ಅತಿಕ್ರಮಣ ನಡೆಸಿದೆ ಎಂಬುದಕ್ಕೆ ನಮ್ಮ ಬಳಿ ಉಪಗ್ರಹದ ಸಾಕ್ಷಿ ಇದೆ. ಹಾಗಾಗಿ ಭಾರತದ ಮೇಲೆ ಆರೋಪ ಮಾಡಲು ಚೀನಾಗೆ ಅವಕಾಶಗಳಿಲ್ಲ ಎಂದು ಹೇಳಿದ್ದಾರೆ. ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಡಿ.9ರಂದು ಉಭಯ ದೇಶಗಳ ಸೇನೆಯ ನಡುವೆ ಸಂಘರ್ಷ ಏರ್ಪಟ್ಟಿತ್ತು. ಇದಕ್ಕೂ ಮೊದಲು 2020ರಲ್ಲಿ ಗಲ್ವಾನ್‌ನಲ್ಲಿ ಸೇನಾಪಡೆಗಳ ನಡುವೆ ಘರ್ಷಣೆ ನಡೆದಿತ್ತು.

Tap to resize

Latest Videos

ಚೀನಾ ಗಡಿಗೆ ರಾಹುಲ್ ಸೂಚನೆ ಮೇರೆಗೆ ಸೇನೆ ಕಳಿಸಿದ್ದಲ್ಲ: ಜೈಶಂಕರ್‌ ತಿರುಗೇಟು 

Bilawal Bhutto Zardari : ಮೋದಿ ಹೆಸರು ಕೇಳಿದ್ರೆ ಮರಿ ಭುಟ್ಟೊಗೆ ಉರಿ: ಜೈಶಂಕರ್ ಕೊಟ್ಟ ಪೆಟ್ಟಿಗೆ ವಿಲಗುಟ್ಟಿದೆ ಪಾಕಿಸ್ತಾನ

click me!