ಪಾಕ್‌ಗೆ ತಕ್ಕ ಸಮಯದಲ್ಲಿ ದಿಟ್ಟಉತ್ತರ: ಜ| ರಾವತ್‌ ಗುಡುಗು!

By Suvarna NewsFirst Published Jul 4, 2021, 9:57 AM IST
Highlights

* ಡ್ರೋನ್‌ ದಾಳಿಯೂ ‘ಕದನ ವಿರಾಮ ಉಲ್ಲಂಘನೆ’

* ಪಾಕ್‌ಗೆ ತಕ್ಕ ಸಮಯದಲ್ಲಿ ದಿಟ್ಟಉತ್ತರ: ಜ| ರಾವತ್‌ ಗುಡುಗು

* ನಮ್ಮ ಆಸ್ತಿಗೇನಾದರೂ ಹಾನಿಯಾದರೆ ತಕ್ಕ ಶಾಸ್ತಿ

ನವದೆಹಲಿ(ಜು.04): ‘ಭಾರತದ ಸೇನಾ ಆಸ್ತಿಪಾಸ್ತಿಗಳ ವಿರುದ್ಧ ಡ್ರೋನ್‌ನಂತಹ ‘ಹೈಬ್ರಿಡ್‌ ದಾಳಿ’ ನಡೆಸಿದರೆ ಇದಕ್ಕೆ ತಕ್ಕ ಪ್ರತ್ಯುತ್ತರವನ್ನು ಭಾರತ ನೀಡಲಿದೆ. ಉತ್ತರದ ಸಮಯ ಹಾಗೂ ಸ್ಥಳವನ್ನು ಅನುಕೂಲಕರ ಸಂದರ್ಭದಲ್ಲಿ ಭಾರತ ನಿರ್ಧರಿದಲಿದೆ ಎಂದು ಸೇನಾ ಸಶಸ್ತ್ರಪಡೆಗಳ ಮುಖ್ಯಸ್ಥ ಜ| ಬಿಪಿನ್‌ ರಾವತ್‌ ಗುಡುಗಿದ್ದಾರೆ.

ಶುಕ್ರವಾರ ವೆಬಿನಾರ್‌ ಒಂದರಲ್ಲಿ ಮಾತನಾಡಿದ ಅವರು, ‘ನಮಗೆ ಅವರ (ಪಾಕಿಸ್ತಾನ) ಉದ್ದೇಶವೇನು ಎಂಬುದು ಗೊತ್ತಿಲ್ಲ. ಆದರೆ ಅವರು ನಮ್ಮ ಆಸ್ತಿಪಾಸ್ತಿಗಳ ಮೇಲೆ ದಾಳಿ ಮಾಡಿ ಹಾನಿಯೇನಾದರೂ ಮಾಡಿದರೆ ನಮ್ಮ ಸಶಸ್ತ್ರಪಡೆಗಳ ಉತ್ತರವೇ ವಿಭಿನ್ನವಾಗಿರುತ್ತದೆ. ರಾಜಕೀಯ ಇಚ್ಛಾಶಕ್ತಿ ಇದೆ. ನಮ್ಮ ಸಶಸ್ತ್ರಪಡೆಗಳು ಸನ್ನದ್ಧವಾಗಿವೆ’ ಎಂದು ಪಾಕಿಸ್ತಾನದ ಹೆಸರೆತ್ತದೇ ಹೇಳಿದರು.

‘ಹೈಬ್ರಿಡ್‌ ಯುದ್ಧನೀತಿ ಮೂಲಕ ನಮ್ಮ ಆಸ್ತಿಪಾಸ್ತಿಗಳಿಗೇನಾದರೂ ಹಾನಿಯಾದರೆ, ರಾಷ್ಟ್ರೀಯ ಭದ್ರತೆಗೆ ಧಕ್ಕೆ ಬಂದರೆ ಅದಕ್ಕೆ ಕಠಿಣ ಸಂದೇಶ ನೀಡಬೇಕಿದೆ. ಯಾವ ಉತ್ತರ ನೀಡಬೇಕು ಎಂಬ ಹಕ್ಕನ್ನು ನಾವು ಉಳಿಸಿಕೊಂಡಿದ್ದೇವೆ. ಸಮಯ, ಸಂದರ್ಭ ಬಂದಾಗ ಪ್ರತಿಕ್ರಿಯೆ ನೀಡುತ್ತೇವೆ’ ಎಂದರು.

ಭಾರತ-ಪಾಕ್‌ ಕದನ ವಿರಾಮದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಗಡಿಯಾಚಿನ ಭಯೋತ್ಪಾದನೆ ನಿಂತರೆ ಮಾತ್ರ ಸಾಲದು. ಪರೋಕ್ಷವಾಗಿ (ಡ್ರೋನ್‌ ಮೂಲಕ) ನಮ್ಮ ಮೇಲೆ ಅವರು ದಾಳಿ ಮಾಡಿದರೂ ಅದು ಯುದ್ಧವಿರಾಮ ಉಲ್ಲಂಘನೆಗೆ ಸಮ’ ಎಂದರು.

click me!