'7 ಪೈಸೆ ಪೆಟ್ರೋಲ್‌ ದರ ಹೆಚ್ಚಳ ಅಟಲ್‌ ವಿರೋಧಿಸಿದ್ದು ಹೀಗೆ'

By Suvarna NewsFirst Published Jul 4, 2021, 9:39 AM IST
Highlights

* ಪೆಟ್ರೋಲ್‌ ದರ ದೇಶದ ವಿವಿಧ ಕಡೆ 100 ರು. ದಾಟಿರುವ ಕಾರಣ ವಿಪಕ್ಷಗಳ ವಿಶಿಷ್ಟ ಪ್ರತಿಭಟನೆ

* 7 ಪೈಸೆ ಪೆಟ್ರೋಲ್‌ ದರ ಹೆಚ್ಚಳ ಅಟಲ್‌ ವಿರೋಧಿಸಿದ್ದು ಹೀಗೆ

* ಕೇಂದ್ರ ಸರ್ಕಾರಕ್ಕೆ ವಿಪಕ್ಷಗಳ ಟಾಂಗ್‌

ನವದೆಹಲಿ(ಜು.04): ಪೆಟ್ರೋಲ್‌ ದರ ದೇಶದ ವಿವಿಧ ಕಡೆ 100 ರು. ದಾಟಿರುವ ಕಾರಣ ವಿಪಕ್ಷಗಳು ಶನಿವಾರ ವಿಶಿಷ್ಟಪ್ರತಿಭಟನೆ ನಡೆಸಿವೆ. ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಚಕ್ಕಡಿ ಮೇಲೆ ಸಂಸತ್ತಿಗೆ ಆಗಮಿಸಿ, ಅಂದು ಪೆಟ್ರೋಲ್‌ ದರವನ್ನು 7 ಪೈಸೆ ಹೆಚ್ಚಳ ಮಾಡಿದ್ದನ್ನು ವಿರೋಧಿಸಿದ್ದರು.

Rare footage from 1973 of an opposition protest when petrol prices were raised by seven Paise. Atal Bihari Vajpayee arrived in Parliament on a bullock cart (which would not be possible today with the new security restrictions on vehicle entry into the complex!) pic.twitter.com/1hd97kgoMG

— Shashi Tharoor (@ShashiTharoor)

ಈ ಫೋಟೋವನ್ನು ಟ್ವೀಟರಲ್ಲಿ ಲಗತ್ತಿಸಿರುವ ಕಾಂಗ್ರೆಸ್‌ ಮುಖಂಡ ಶಶಿ ತರೂರ್‌, ಟಿಎಂಸಿ ಸಂಸದ ಡೆರಿಕ್‌ ಓಬ್ರಿಯಾನ್‌ ಹಾಗೂ ಇತರರು ಸರ್ಕಾರಕ್ಕೆ ಟಾಂಗ್‌ ನೀಡಿದ್ದಾರೆ.

ಮತ್ತೆ ತೈಲೋತ್ಪನ್ನಗಳ ಬೆಲೆ ಏರಿಕೆ

ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆಗಳಲ್ಲಿ ಮತ್ತೆ ಏರಿಕೆಯಾಗಿದ್ದು, ಪೆಟ್ರೋಲ್ 36 ಪೈಸೆ ಮತ್ತು ಡೀಸೆಲ್ 17 ಏರಿಕೆ ಏರಿಕೆಯಾಗಿದೆ. 

ಸರ್ಕಾರಿ ಸ್ವಾಮ್ಯದ ತೈಲ ಸಂಸ್ಕರಣಾ ಕಂಪನಿಗಳು (ಒಎಂಸಿ) ಭಾನುವಾರ ದೇಶಾದ್ಯಂತ ಇಂಧನ ದರವನ್ನು ಮತ್ತೊಮ್ಮೆ ಹೆಚ್ಚಿಸಿದ್ದು, ಈ ಮೂಲಕ ಪೆಟ್ರೋಲ್ ಹಾಗೂ  ಡೀಸೆಲ್ ಬೆಲೆ ಹೊಸ ದಾಖಲೆಯ ಗರಿಷ್ಠ ಮಟ್ಟಕ್ಕೆ ತಲುಪಿದೆ. 

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮೂಲಗಳ ಪ್ರಕಾರ ಪ್ರತೀ ಲೀಟರ್ ಪೆಟ್ರೋಲ್ 36 ಪೈಸೆ ಮತ್ತು ಡೀಸೆಲ್ 17 ಏರಿಕೆಯಾಗಿದೆ.

click me!