'ಅಲ್ಲಾ..' ಅನ್ನೋದೇ ಸಂಸ್ಕೃತ ಪದ, ಗೋವರ್ಧನ ಪುರಿ ಶಂಕರಾಚಾರ್ಯ ಹೇಳಿಕೆ!

Published : Feb 22, 2023, 10:40 PM IST
'ಅಲ್ಲಾ..' ಅನ್ನೋದೇ ಸಂಸ್ಕೃತ ಪದ, ಗೋವರ್ಧನ ಪುರಿ ಶಂಕರಾಚಾರ್ಯ ಹೇಳಿಕೆ!

ಸಾರಾಂಶ

ರಾಜಕಾರಣ ಹಾಗೂ ಧರ್ಮವನ್ನು ಬೇರ್ಪಡಿಸಲಾಗದು. ಧರ್ಮವಿಲ್ಲದೆ ಯಾವುದೇ ರಾಜಕಾರಣ ಕೂಡ ನಡೆಯೋದಿಲ್ಲ ಎಂದು ವಾರಣಾಸಿಯ ಗೋವರ್ಧನ ಪುರಿ ಮಠದ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಹೇಳಿಕೆ ನೀಡಿದ್ದಾರೆ. ಅದರೊಂದಿಗೆ ಅಲ್ಲಾ ಅನ್ನೋದು ಸಂಸ್ಕೃತ ಪದ ಎಂದು ಹೇಳಿದ್ದಾರೆ.  

ನವದೆಹಲಿ (ಫೆ.22):  ಅಲ್ಲಾ ಎಂಬ ಪದವು ಮಾತೃಶಕ್ತಿಯದ್ದು ಎಂದು ವಾರಣಾಸಿಯ ಗೋವರ್ಧನ ಪುರಿ ಮಠದ ಪೀಠಾಧೀಶ್ವರ ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಹೇಳಿದ್ದಾರೆ. ಇದು ಸಂಸ್ಕೃತ ಪದ. ದುರ್ಗಾ ಮಾತೆಯನ್ನು ಆವಾಹಿಸಲು ಅಲ್ಲಾ ಎಂಬ ಪದವನ್ನು ಬಳಸಲಾಗುತ್ತದೆ ಎಂದು ಹೇಳಿಕೆ ನೀಡಿದ್ದಾರೆ. ಅಲ್ಲಾ ಮತ್ತು ಓಂ ಒಂದೇ ಎಂಬ ಜಮೀಯತ್ ಉಲೇಮಾ-ಎ-ಹಿಂದ್ ಮುಖ್ಯಸ್ಥ ಮೌಲಾನಾ ಸೈಯದ್ ಅರ್ಷದ್ ಮದನಿ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಶಂಕರಾಚಾರ್ಯರು ಈ ಹೇಳಿಕೆ ನೀಡಿದ್ದಾರೆ. ಧರ್ಮದ ಬಗ್ಗೆ ಪ್ರಶ್ನೆ ಎತ್ತುವವರು ಮೊದಲು ಸಂಸ್ಕೃತ-ವ್ಯಾಕರಣವನ್ನು ಅಧ್ಯಯನ ಮಾಡಬೇಕು. ನಮ್ಮೆಲ್ಲರ ಪೂರ್ವಜರು ಸನಾತನ ವೈದಿಕ ಆರ್ಯರು ಎಂದು ಸ್ವಾಮಿ ನಿಶ್ಚಲಾನಂದ ಸರಸ್ವತಿ ಹೇಳಿದ್ದಾರೆ.

ಮದನಿ ಮೊಂಡುವಾದಕ್ಕೆ ಬೆಂಬಲ, ಮನುಸ್ಮೃತಿ ಅಲ್ಲಾ ಮೇಲೆ ನಂಬಿಕೆ ಇಟ್ಟಿದ್ದ, ಸಾಜಿದ್ ರಶೀದಿ ಹೊಸ ವಿವಾದ!

ಮಾಧ್ಯಮಗಳೊಂದಿಗೆ ನಡೆಸಿದ ಸಂವಾದದಲ್ಲಿ, ಶಂಕರಾಚಾರ್ಯರು ಸಹ ಬಾಗೇಶ್ವರ ಧಾಮದ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರನ್ನು ಬೆಂಬಲಿಸಿದರು.  ಅವರು ಭಗವಾನ್‌ ಹನುಮಂತನಿಂದ ಆಶೀರ್ವಾದ ಪಡೆದಿದ್ದಾರೆ ಎಂದರು. ರಾಜಕೀಯದಲ್ಲಿ ಧರ್ಮ ಸೇರ್ಪಡೆಯಾಗುತ್ತಿರುವ ಬಗ್ಗೆ ಮಾತನಾಡಿದ ಅವರು.  ರಾಜಕಾರಣ ಹಾಗೂ ಧರ್ಮವನ್ನು ಬೇರ್ಪಡಿಸಲಾಗದು.
ಧರ್ಮವಿಲ್ಲದೆ ರಾಜಕೀಯ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ ಎಂದು ಹೇಳಿದರು. ರಾಮಚರಿತಮಾನಸಗಳ ಬಗ್ಗೆ ಟೀಕೆ ಮಾಡುವವರು ಚಾಣಕ್ಯ ನೀತಿಯನ್ನು ಅಧ್ಯಯನ ಮಾಡಬೇಕು ಎಂದರು. ರಾಮಾಯಣದ ಬಗ್ಗೆ ಮಾತನಾಡುವವರಿಗೆ ಧೈರ್ಯವಿದ್ದರೆ ಬೈಬಲ್ ಮತ್ತು ಕುರಾನ್ ಮೇಲೆ ವ್ಯಂಗ್ಯ ಮಾಡಿ, ಆಗ ನಿಮ್ಮ ಪರಿಸ್ಥಿತಿ ಏನಾಗುತ್ತದೆ ಎಂದು ನೋಡಿ ಎಂದು ಸವಾಲೆಸೆದಿದ್ದಾರೆ.

 

'ಓಂ ಮತ್ತು ಅಲ್ಲಾ ಒಂದೇ..' ಎಂದ ಮುಸ್ಲಿಂ ಧರ್ಮಗುರು, ವೇದಿಕೆಯಿಂದ ಕೆಳಗಿಳಿದ ಹಿಂದು ಧಾರ್ಮಿಕ ನಾಯಕರು!

2024ರಲ್ಲೂ ಮೋದಿಯೇ ಪ್ರಧಾನಿ: 2024ರಲ್ಲೂ ನರೇಂದ್ರ ಮೋದಿ ಪ್ರಧಾನಿಯಾಗುತ್ತಾರೆ ಎಂದ ಅವರು, ದೇಶವನ್ನು ಲೂಟಿ ಮಾಡಿ ಮನೆ ತುಂಬಿಸಿಕೊಳ್ಳುವ ನಾಯಕ ಮೋದಿಯಲ್ಲ. ಪುರಿ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಅವರು ಐದು ದಿನಗಳ ಪ್ರವಾಸಕ್ಕಾಗಿ ಮಂಗಳವಾರ ವಾರಣಾಸಿ ತಲುಪಿದ್ದಾರೆ. ಅವರು 5 ದಿನಗಳ ಕಾಲ ನಡೆಯುವ ವಿಚಾರ ಸಂಕಿರಣ, ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!