
ನವದೆಹಲಿ (ಫೆ.22): ಭಾರತ್ ಜೋಡೋ ಯಾತ್ರೆಯ ದೊಡ್ಡ ಮಟ್ಟದ ಯಶಸ್ಸು ಕಂಡಿರುವ ಸಂಭ್ರಮದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮುಂದಿನ ವಾರ ಇಂಗ್ಲೆಂಡ್‌ಗೆ ಭೇಟಿ ನೀಡಲಿದ್ದಾರೆ. ಮೂಲಗಳ ಪ್ರಕಾರ ರಾಹುಲ್ ಗಾಂಧಿ 10 ದಿನಗಳ ಕಾಲ ವಿದೇಶ ಪ್ರವಾಸ ಕೈಗೊಳ್ಳಲಿದ್ದಾರೆ. ರಾಯ್‌ಪುರದಲ್ಲಿ ಎಐಸಿಸಿಯ ಯೋಜನಾ ಸಮಿತಿಯ ಸಭೆಯ ನಂತರ ವಯನಾಡ್ ಸಂಸದರು ಕೇಂಬ್ರಿಡ್ಜ್‌ಗೆ ತೆರಳಲಿದ್ದಾರೆ. ಕಾಂಗ್ರೆಸ್ ಪಕ್ಷದ ಉನ್ನತ ಮೂಲಗಳ ಪ್ರಕಾರ, 'ರಾಹುಲ್ ಗಾಂಧಿಯವರ ಭೇಟಿಯು ಸಹಭಾಗಿತ್ವದ ಭಾಗವಾಗಿದೆ. ಅವರು ಫೆಬ್ರವರಿ 28 ರಿಂದ ಮಾರ್ಚ್ 4ರವರೆಗೆ ಇಂಗ್ಲೆಂಡ್‌ನಲ್ಲಿಇರುತ್ತಾರೆ. ಕೆಂಬ್ರಿಡ್ಜ್ ಬಳಿಕ ಲಂಡನ್‌ನಲ್ಲೂ ಕೆಲ ದಿನ ಇರಲಿದ್ದಾರೆ. ಇದು ಅಧಿಕೃತ ಭೇಟಿ ಕಾರ್ಯಕ್ರಮ' ಎಂದು ತಿಳಿಸಿದೆ. ಇಂಗ್ಲೆಂಡ್‌ನಲ್ಲಿರುವ ವೇಳೆ ರಾಹುಲ್ ಗಾಂಧಿ, ಕೆಂಬ್ರಿಡ್ಜ್‌ನಲ್ಲಿ ಉಪನ್ಯಾಸ ಕಾರ್ಯಕ್ರಮ ನೀಡಲಿದ್ದಾರೆ. ಅದಾದ ಬಳಿಕ ವಿವಿಯ ಆವರಣದಲ್ಲಿ ಸರಣಿ ಸಂವಾದ ಕಾರ್ಯಕ್ರಗಳು ಕೂಡ ನಿಗದಿಯಾಗಿವೆ.
ನಾನು ಕಲಿತ ವಿಶ್ವವಿದ್ಯಾಲಯವಾದ ಕೆಂಬ್ರಿಡ್ಜ್ ವಿವಿಗೆ ಭೇಟಿ ನೀಡಲು ಉತ್ಸುಕನಾಗಿದ್ದೇನೆ. ಕೆಬ್ರಿಡ್ಜ್ ಆವರಣದಲ್ಲಿ ಉಪನ್ಯಾಸ ಕಾರ್ಯಕ್ರಮ ನೀಡಲಿದ್ದೇನೆ. ಜಿಯೋಪಾಲಿಟಿಕ್ಸ್, ಅಂತರಾಷ್ಟ್ರೀಯ ಸಂಬಂಧಗಳು, ದೊಡ್ಡ ಡೇಟಾ ಮತ್ತು ಪ್ರಜಾಪ್ರಭುತ್ವ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೆಲವು ಜ್ಞಾನವಂತ ಮನಸ್ಸುಗಳೊಂದಿಗೆ ತೊಡಗಿಸಿಕೊಳ್ಳಲು ಸಂತೋಷವಾಗುತ್ತಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯ ಕೂಡ ಈ ಕುರಿತಾಗಿ ಟ್ವೀಟ್ ಮಾಡಿದೆ. 'ಈ ತಿಂಗಳ ಕೊನೆಯಲ್ಲಿ ನಮ್ಮ ವಿವಿಗೆ ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಲು ಸಂತೋಷವಾಗಿದೆ. ಅವರು ಕೆಂಬ್ರಿಡ್ಜ್ ಎಂಬಿಎ ಕುರಿತು ಉಪನ್ಯಾಸ ನೀಡುತ್ತಾರೆ ಮತ್ತು ಪ್ರಮುಖ ವ್ಯಕ್ತಿಗಳೊಂದಿಗೆ ಬಿಗ್ ಡೇಟಾ ಮತ್ತು ಡೆಮಾಕ್ರಸಿ ಮತ್ತು ಭಾರತ-ಚೀನಾ ಸಂಬಂಧಗಳ ಕುರಿತು ಕಾರ್ಯಕ್ರಗಳನ್ನು ನಡೆಸಿಕೊಡಲಿದ್ದಾರೆ' ಎಂದು ಟ್ವೀಟ್ ಮಾಡಿದೆ.
ಮೂಲಗಳ ಪ್ರಕಾರ, ಮಾರ್ಚ್ 5 ರಿಂದ, ಗಾಂಧಿ ಅವರು ಲಂಡನ್‌ನಲ್ಲಿದ್ದಾರೆ, ಅಲ್ಲಿ ಅವರು ವ್ಯಾಪಾರ ಸಮುದಾಯದ ಸದಸ್ಯರು, ರಾಜಕೀಯ ವರ್ಗದ ಸದಸ್ಯರು, ಭಾರತೀಯ ವಲಸೆಗಾರರು ಮತ್ತು ಭಾರತೀಯ ಸಾಗರೋತ್ತರ ಕಾಂಗ್ರೆಸ್‌ನ ಸದಸ್ಯರೊಂದಿಗೆ ಸರಣಿ ಸಂವಾದಗಳನ್ನು ನಡೆಸಲಿದ್ದಾರೆ. 'ಅವರು 2-3 ದಿನಗಳ ಕಾಲ ಲಂಡನ್‌ನಲ್ಲಿರುತ್ತಾರೆ ಮತ್ತು ಇಂಡಿಯನ್ ಓವರ್‌ಸೀಸ್ ಕಾಂಗ್ರೆಸ್ (ಐಒಸಿ) ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಕೂಡ ಅವರೊಂದಿಗೆ ಇರಲಿದ್ದಾರೆ. ಲಂಡನ್‌ನಲ್ಲೂ ಪ್ರಮುಖ ಕಾರ್ಯಕ್ರಮಗಳು ನಿಗದಿಯಾಗಿದೆ' ಎಂದು ಮೂಲಗಳು ತಿಳಿಸಿವೆ.
'ಎಲ್‌ಎಸಿಗೆ ಸೇನೆಯನ್ನು ಕಳಿಸಿದ್ದು ಮೋದಿ, ರಾಹುಲ್ ಗಾಂಧಿ ಅಲ್ವಲ್ಲ..' ಕಾಂಗ್ರೆಸ್ ನಾಯಕನಿಗೆ ಜೈಶಂಕರ್ ತಿರುಗೇಟು!
ಐಒಸಿ ಮಾಹಿತಿಯ ಪ್ರಕಾರ, ರಾಹುಲ್ ಗಾಂಧಿ ಬೆಲ್ಜಿಯಂನ ಬ್ರಸೆಲ್ಸ್‌ಗೆ ಭೇಟಿ ನೀಡುವುದು ಕೂಡ ಮಾತುಕತೆಯ ಹಂತದಲ್ಲಿದೆ. ಇಲ್ಲಿ ಅವರು ಕೆಲವು ಯುರೋಪಿಯನ್ ನಾಯಕರೊಂದಿಗೆ ಹಾಗೂ ವಾಣಿಜ್ಯ ಸಮುದಾಯದ ಸಮದ್ಯರೊಂದಿಗೆ ಮಾತುಕತೆ ಮಾಡಲಿದ್ದಾರೆ. ಈ ಭೇಟಿ ಇನ್ನೂ ಮಾತುಕತೆ ಹಂತದಲ್ಲಿದೆ. ಬ್ರಸೆಲ್ಸ್ ಭೇಟಿ ಇನ್ನೂ ಅಂತಿಮವಾಗಿಲ್ಲ. ಆದರೆ, ಬ್ರಸೆಲ್ಸ್ ಭೇಟಿಯ ಬಗ್ಗೆ ದೊಡ್ಡ ಮಟ್ಟದ ಶಿಫಾರಸು ಇದೆ. ಅವರ ವೇಳಾಪಟ್ಟಿ ನೋಡಿ ನಿರ್ಧಾರ ಮಾಡಲಿದ್ದೇವೆ ಎಂದಿದ್ದಾರೆ,
ಮೋದಿಯವರಂತೆ ನನ್ನ ಭಾಷಣ ಮಾಧ್ಯಮಗಳಲ್ಲಿ ಕಾಣೋದಿಲ್ಲ, ರಾಹುಲ್ ಗಾಂಧಿ ಅಳಲು
ಜನವರಿ 31 ರಂದು ಭಾರತ್ ಜೋಡೋ ಯಾತ್ರೆ ಪೂರ್ಣಗೊಂಡ ನಂತರ, ರಾಹುಲ್ ಗಾಂಧಿ ಕೆಲವು ದಿನಗಳ ಕಾಲ ಗುಲ್ಮಾರ್ಗ್‌ನಲ್ಲಿದ್ದರು. ಮಾಜಿ ಕಾಂಗ್ರೆಸ್ ಮುಖ್ಯಸ್ಥರು ಬುಧವಾರ ಮೇಘಾಲಯದಲ್ಲಿ ಸಾರ್ವಜನಿಕ ಸಭೆಯನ್ನು ನಡೆಸಿದ್ದು, ಫೆಬ್ರವರಿ 24 ರಿಂದ ಫೆಬ್ರವರಿ 26 ರವರೆಗೆ ರಾಯ್‌ಪುರದಲ್ಲಿ ಕಾಂಗ್ರೆಸ್‌ನ 85 ನೇ ಯೋಜನಾ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ