ಮಲ ಹೊರುತ್ತಿದ್ದ ಮಹಿಳೆ ಈಗ ಉಪಮೇಯರ್‌

By Kannadaprabha NewsFirst Published Jan 1, 2023, 9:10 AM IST
Highlights

ಬಿಹಾರದ ಗಯಾ ಸ್ಥಳೀಯ ಸಂಸ್ಥೆಗಳ ಮೇಯರ್‌, ಉಪಮೇಯರ್‌ ಹುದ್ದೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಹೊಸ ಇತಿಹಾಸವೊಂದು ಸೃಷ್ಟಿಯಾಗಿದೆ. ಕಳೆದ 40 ವರ್ಷಗಳಿಂದ ಮಲ ಹೊರುವ ಕೆಲಸ ಮಾಡಿಕೊಂಡು ಬರುತ್ತಿದ್ದ ಚಿಂತಾ ದೇವಿ ಎಂಬ ಮಹಿಳೆ ಇದೀಗ ನಗರದ ಉಪಮೇಯರ್‌ ಆಗಿ ಆಯ್ಕೆಯಾಗಿದ್ದಾರೆ.

ಪಟನಾ: ಬಿಹಾರದ ಗಯಾ ಸ್ಥಳೀಯ ಸಂಸ್ಥೆಗಳ ಮೇಯರ್‌, ಉಪಮೇಯರ್‌ ಹುದ್ದೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಹೊಸ ಇತಿಹಾಸವೊಂದು ಸೃಷ್ಟಿಯಾಗಿದೆ. ಕಳೆದ 40 ವರ್ಷಗಳಿಂದ ಮಲ ಹೊರುವ ಕೆಲಸ ಮಾಡಿಕೊಂಡು ಬರುತ್ತಿದ್ದ ಚಿಂತಾ ದೇವಿ ಎಂಬ ಮಹಿಳೆ ಇದೀಗ ನಗರದ ಉಪಮೇಯರ್‌ ಆಗಿ ಆಯ್ಕೆಯಾಗಿದ್ದಾರೆ. ಸಮಾಜದ ಅತ್ಯಂತ ಹಿಂದುಳಿದ ಎಂದು ಪರಿಗಣಿಸುವ ಮುಸಾಹರ್‌ ಸಮುದಾಯಕ್ಕೆ ಸೇರಿದ ಚಿಂತಾ ದೇವಿ, ಕಳೆದ 40 ವರ್ಷಗಳಿಂದ ಸರ್ಕಾರಿ ಕಚೇರಿಗಳಲ್ಲಿ ಕಸ ಹೊಡೆಯುವ, ಮಲ ತೆಗೆಯುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. 

2020ರಲ್ಲಿ ಕೆಲಸದಿಂದ ನಿವೃತ್ತಿಯಾಗಿದ್ದ ಚಿಂತಾದೇವಿ (Chintadevi) ಬಳಿಕ ತರಕಾರಿ (vegetables) ಮಾರುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಇತ್ತೀಚೆಗೆ ಪಾಲಿಕೆಗೆ ನಡೆದ ಚುನಾವಣೆಯಲ್ಲಿ ದಾಖಲೆಯ 27000 ಮತಗಳ ಅಂತರದಿಂದ ಗೆದ್ದು ಪಾಲಿಕೆಗೆ (corporation election) ಆಯ್ಕೆಯಾಗಿದ್ದ ಇವರು ಇದೀಗ ಉಪ ಮೇಯರ್‌ (deputy mayor)ಆಗಿ ಆಯ್ಕೆಯಾಗಿದ್ದಾರೆ. ಒಂದೊಮ್ಮೆ ತಾವು ಕಸ ಹೊಡೆಯುತ್ತಿದ್ದ ಕಚೇರಿಯಲ್ಲೇ ಉನ್ನತ ಹುದ್ದೆ ಅಲಂಕರಿಸುವ ಅವಕಾಶ ಚಿಂತಾದೇವಿಗೆ ಸಿಕ್ಕಿದೆ.

ಬಿಜೆಪಿಗೂ ಕರ್ನಾಟಕ ರಾಜ್ಯ ಎಟಿಎಂ: ಅಮಿತ್‌ ಶಾಗೆ ಎಚ್‌ಡಿಕೆ ತಿರುಗೇಟು

ಬಿಹಾರದ (Bihar) ಈ ತರಹದ ಅಚ್ಚರಿಗಳು ಇದೇ ಮೊದಲೇನಲ್ಲ. ಈ ಮುಂಚೆ ಕಲ್ಲು ಒಡೆಯುವ ಕೆಲಸ ಮಾಡುತಿದ್ದ ಮುಸಾಹರ್‌ ಸಮುದಾಯದ ಮಹಿಳೆ ನಿತೀಶ್‌ಕುಮಾರ್‌ (Nitish Kumar) ಅವರ ಜನತಾದಳ ಪಕ್ಷದಿಂದ ಗಯಾ ಲೋಕಸಭಾ ಕ್ಷೇತ್ರದಿಂದ ಸಂಸದೆಯಾಗಿ ಆಯ್ಕೆಯಾಗಿದ್ದರು. ತಲೆ ಮೇಲೆ ಮಲ ಸಾಗುಸುತ್ತಿದ್ದವರು ಇಂದು ಉನ್ನತ ಸ್ಥಾನಕ್ಕೇರಿರುವುದು ಇತಿಹಾಸ ಎಂದು ಮೇಯರ್‌ ಗಣೇಶ್‌ ಪಾಸ್ವಾನ್‌ (Mayor Ganesh Paswan) ತಿಳಿಸಿದ್ದಾರೆ.

ಅಮ್ಮನ ಆಸೆ ಈಡೇರಿಸಲು ಐಸಿಯುನಲ್ಲೇ ಮದುವೆಯಾದ ಮಗಳು

click me!