2013ಕ್ಕಿಂತ ಹಿಂದಿನ ವಕ್ಫ್ ಆಸ್ತಿ ಒತ್ತುವರಿಗೆ ಕೇಸ್‌ ಇಲ್ಲ- ಕೇರಳ ಕೋರ್ಟ್

By Kannadaprabha News  |  First Published Nov 13, 2024, 7:54 AM IST

2013ರ ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಗೆ ಮುನ್ನ ನಡೆದ ಒತ್ತುವರಿಗಳಿಗೆ ಕೇಸು ಹಾಕಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿದೆ. ಕೇರಳ ವಕ್ಫ್ ಮಂಡಳಿಯ ಅನುಮತಿಯಿಲ್ಲದೆ ಅಂಚೆ ಕಚೇರಿ ನಿರ್ಮಾಣಕ್ಕೆ ಅನುಮತಿ ನೀಡಿದ ಅಧಿಕಾರಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ವಜಾಗೊಳಿಸಲಾಗಿದೆ.


ತಿರುವನಂತಪುರ: 2013ರ ವಕ್ಸ್‌ ತಿದ್ದುಪಡಿ ಕಾಯ್ದೆ ಜಾರಿಗೆ ಬರುವ ಮುಂಚೆ ವಕ್ಸ್ ಆಸ್ತಿ ಒತ್ತುವರಿ ಆಗಿದ್ದರೆ ಅಂಥ ಪ್ರಕರಣಗಳಲ್ಲಿ ಕೇಸು ಹಾಕಲು ಆಗದು ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಕೇರಳ ಮತ್ತು ಕರ್ನಾಟಕ ದಲ್ಲಿ ವಕ್ಸ್ ಆಸ್ತಿ ದೊಡ್ಡ ಮಟ್ಟದಲ್ಲಿ ಗದ್ದಲಕ್ಕೆ ಕಾರಣವಾ ಗಿರುವ ಹೊತ್ತಿನಲ್ಲೇ ಈ ಮಹ ತ್ವದ ಆದೇಶ ಹೊರಬಿದ್ದಿದೆ. ಕೇರಳ ವಕ್ಸ್‌ ಮಂಡಳಿ ಅನು ಮತಿ ಇಲ್ಲದೇವಕ್ಸ್‌ ಆಸ್ತಿಯನ್ನು ಪರಭಾರೆ ಮಾಡಿ ಅಂಚೆ ಕಚೇರಿ ನಿರ್ಮಾಣಕ್ಕೆ ಅನುಮತಿಸಿದ್ದ ಆರೋಪ ಹೊತ್ತಿದ್ದ ಇಬ್ಬರು ಅಂಚೆ ಇಲಾಖೆ ಅಧಿಕಾರಿಗಳ ವಿರುದ್ಧದ ಕ್ರಿಮಿ ನಲ್ ಪ್ರಕರಣವನ್ನು ಹೈಕೋರ್ಟ್ ವಜಾ ಮಾಡಿದೆ.

“2013ರಲ್ಲಿ ಸೆಕ್ಷನ್ 52ಎ ಅನ್ನು ಸೇರಿಸಿ ವಕ್ಸ್ ಆಸ್ತಿಗಳ ರಕ್ಷಣೆಗೆ ವಕ್ಸ್‌ ತಿದ್ದುಪಡಿ ಕಾಯ್ದೆ ಜಾರಿಗೆ ತರಲಾಯಿತು. ಆದರೆ ಅದರಲ್ಲಿ, ವಕ್ಸ್ ಮಂಡಳಿ ಅನುಮತಿ ಪಡೆಯದೇ 2013ಕ್ಕಿಂತ ಮುನ್ನ ವಕ್ಸ್‌ ಜಮೀನು ಆಕ್ರಮಿಸಿಕೊಂಡವರ ವಿರುದ್ಧ ತನಿಖೆ ನಡೆಸಬಹುದು ಎಂದೇನೂ ಹೇಳಿಲ್ಲ' ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತು. 'ಪ್ರಸ್ತುತ ಕೇಸಿನಲ್ಲಿ ಕಲ್ಲಿಕೋಟೆಯಲ್ಲಿನ ಅಂಚೆ ಕಚೇರಿಯೊಂದು 1999ರಿಂದ ವಕ್ಸ್‌ ಆಸ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. 2013ಕ್ಕಿಂತ ಮುಂಚೆಯೇ ಇದು ಕಾರ್ಯನಿರ್ವಹಿಸುತ್ತಿರುವ ಕಾರಣ, ಅದರ ಅಧಿಕಾರಿಗಳ ವಿರುದ್ಧ ಕೇಸು ಹಾಕಲು ಆಗದು' ಎಂದಿತು. 

Tap to resize

Latest Videos

undefined

'ವಕ್ಸ್ ಮಂಡಳಿ ಅನುಮತಿ ಇಲ್ಲದೇ ಅಂಚೆ ಇಲಾಖೆಯು ಮಂಡಳಿಯ ಜಮೀನನ್ನು ಗುತ್ತಿಗೆ ಆಧಾರದ ಮೇಲೆ ತೆಗೆದುಕೊಂಡಿದ್ದು, ಇದನ್ನು ತೆರವು ಮಾಡಬೇಕು ಎಂದು ವಕ್ಸ್ ನ್ಯಾಯಾಧಿಕರಣ 2018ರಲ್ಲಿ ಸೂಚಿಸಿತ್ತು. ಆದರೂ ಜಮೀನನ್ನು ವಾಪಸು ಮಾಡಿಲ್ಲ' ಎಂದು ಕೇರಳ ವಕ್ಸ್‌ ಮಂಡಳಿ ಕೇಸು ಹಾಕಿತ್ತು. ಇದರ ವಿಚಾರಣೆ ಕಲ್ಲಿಕೋಟೆ ಮ್ಯಾಜಿಸ್ಟ್ರೇಟ್ ಕೋರ್ಟಲ್ಲಿ ನಡೆಯುತ್ತಿತ್ತು. ಇದನ್ನು ಅಧಿಕಾರಿಗಳು ಹೈಕೋರ್ಟಲ್ಲಿ ಪ್ರಶ್ನಿಸಿದ್ದರು.

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಹುಟ್ಟಿಕೊಂಡಿರುವ ವಕ್ಸ್ ವಿವಾದದ ಬಗ್ಗೆ ಕೇಂದ್ರ ಗೃಹ ಸಚಿವ ತ್ ಶಾ ಮತ್ತೊಮ್ಮೆ ಮಾತನಾಡಿದ್ದಾರೆ. ದೇಶದಲ್ಲಿ ವಕ್ಸ್‌ ತಿದ್ದುಪಡಿ ಮಸೂದೆಯನ್ನು ಜಾರಿಗೆ ತರುವುದನ್ನು ತಡೆಯಲು ಯಾರಿಂ ದಲೂ ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ. ಜಾರ್ಖಂಡ್ ಬಾಗ್ದಾರಾನಲ್ಲಿ ಚುನಾ ವಣಾ ರ್ಯಾಲಿ ವೇಳೆ ಈ ಕುರಿತು ಮಾತನಾಡಿದ ಶಾ, 'ವಕ್ಸ್ ಬೋರ್ಡ್ ಭೂಮಿಯನ್ನು ಕಬಳಿಕೆ ಮಾಡುವ ಅಭ್ಯಾಸದಲ್ಲಿ ತೊಡಗಿಕೊಂಡಿದೆ. ಕರ್ನಾಟಕದಲ್ಲಿ ಹಳ್ಳಿಗರ ಆಸ್ತಿ, ದೇವಾಲಯ, ರೈತರ ಆಸ್ತಿಯನ್ನು ಕಬಳಿ ಸಿದೆ. ವಕ್ಸ್ ಬೋರ್ಡ್‌ ನಲ್ಲಿ ಬದಲಾವಣೆ  ತರಬೇಕೇ? ಬೇಡವೇ? ಎಂದು ನನಗೆ ಹೇಳಿ. ಹೇಮಂತ್ ಬಾಬು ಮತ್ತು ರಾಹುಲ್ ಗಾಂಧಿಯವರು ಬೇಡ ಎಂದು ಹೇಳುತ್ತಾರೆ. ಅವರು ವಿರೋಧಿಸಲಿ. ಆದರೆ ಬಿಜೆಪಿ ವಕ್ ತಿದ್ದುಪಡಿ ಮಸೂದೆಯನ್ನು ಜಾರಿಗೆ ತರು ತ್ತದೆ. ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ' ಎಂದು ಗುಡುಗಿದರು. 

ಇನ್ನು ಇದೇ ಸಂದರ್ಭದಲ್ಲಿ ಏಕರೂಪ ನಾಗರಿಕ ಸಂಹಿತೆ ಬಗ್ಗೆ ಮಾತನಾಡಿದ ಶಾ, 'ಜಾರ್ಖಂಡ್‌ನಲ್ಲಿ ಒಳನುಸುಳುಕೋರರನ್ನು ತಡೆಗಟ್ಟುವ ನಿಟ್ಟಿನಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಬುಡಕಟ್ಟು ಜನರನ್ನು ಅದರ ವ್ಯಾಪ್ತಿಯಿಂದ ಹೊರಗಿಡಲಾಗುತ್ತದೆ' ಎಂದರು.

ಇದನ್ನೂ ಓದಿ: ರೈತರನ್ನ ಎದುರು ಹಾಕಿಕೊಂಡ್ರೆ ನಿಮ್ಮ ಸರ್ಕಾರ ಉಳಿಯಲ್ಲ : ಸಿಎಂ ಸಿದ್ದರಾಮಯ್ಯಗೆ ವಿ ಕೋಡಿಹಳ್ಳಿ ಮತ್ತೆ ವಾರ್ನ್

ವಕ್ಫ್‌ ಜಾಗ ಆತಿಕ್ರಮಣದ ಆರೋಪ । 4 ಮುಸ್ಲಿಂ, 1 ಹಿಂದೂ ಕುಟುಂಬಕ್ಕೆ ನೋಟಿಸ್
ಮಾನಂತವಾಡಿ: ಕೇರಳದಲ್ಲಿನ ವಕ್ಫ್‌ ಆಸ್ತಿ ವಿವಾದ ಇದೀಗ ವಯನಾಡಿನಲ್ಲಿ ಮುಸ್ಲಿಂ ಕುಟುಂಬಗಳಿಗೂ ತಗುಲಿದೆ. ಜಿಲ್ಲೆಯ ಮಾನಂತವಾಡಿಯಲ್ಲಿ ತನ್ನ ಆಸ್ತಿ ಅತಿಕ್ರಮಣ ಮಾಡಲಾಗಿದೆ ಎಂದು 4 ಮುಸ್ಲಿಂ ಮತ್ತು 1 ಹಿಂದೂ ಕುಟುಂಬಗಳಿಗೆ ವಕ್ಫ್‌ ಮಂಡಳಿ ನೋಟಿಸ್‌ ಜಾರಿ ಮಾಡಿದೆ.

ವಯನಾಡು ಜಿಲ್ಲೆಯ ಮಾನಂತವಾಡಿ ತಾಲೂಕಿನ ತವಿಂಜಲ್ ಪಂಚಾಯತ್‌ನಲ್ಲಿ ಈ ಬೆಳವಣಿಗೆ ನಡೆದಿದೆ. ಈ ಪೈಕಿ ಎರಡು ಕುಟುಂಬಗಳು ಸ್ವಂತ ಭೂಮಿಯಲ್ಲಿ ವಾಸವಾಗಿದ್ದರೆ, ಉಳಿದ ಮೂರು ಕುಟುಂಬಗಳು ಬೇರೆಯವರ ಜಮೀನಿನಲ್ಲಿ ಮನೆ, ಅಂಗಡಿಯನ್ನು ನಿರ್ಮಿಸಿಕೊಂಡಿದೆ. ಮಾತ್ರವಲ್ಲದೇ ಎಲ್ಲ ಕುಟುಂಬಗಳು ಮಾನ್ಯವಾದ ಹಕ್ಕು ಪತ್ರವನ್ನು ಹೊಂದಿದ್ದರೂ ಕೂಡ ನೋಟಿಸ್‌ ನೀಡಲಾಗಿದೆ.

ಇದನ್ನೂ ಓದಿ: ಹಿಂದೂ ಮುಸ್ಲಿಂ ಭಾಯಿ ಭಾಯಿ ಅನ್ನಾವರನ್ನ ಚಪ್ಪಲಿಲೇ ಬಡಿಬೇಕು; ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ವಾಗ್ದಾಳಿ

click me!