
ನವದೆಹಲಿ: ಇಂದಿನ ಪ್ರಕ್ಷುಬ್ಧ ಜಗತ್ತಿನಲ್ಲಿ ವಿವಿಧ ರಾಜಕೀಯ ಸಿದ್ಧಾಂತಗಳನ್ನು ಅನುಸರಿಸುವ ದೇಶಗಳೊಂದಿಗೆ ಮಾತುಕತೆ ನಡೆಸಲು ಸಮರ್ಥರಾಗಿರುವ ಪ್ರಧಾನಿ ನರೇಂದ್ರ ಮೋದಿ ನೊಬೆಲ್ ಶಾಂತಿ ಪ್ರಶಸ್ತಿಗೆ ಅರ್ಹರು ಎಂದು ಪ್ರಖ್ಯಾತ ಹೂಡಿಕೆದಾರ ಮಾರ್ಕ್ ಮೊಬಿಯಸ್ ಹೇಳಿದ್ದಾರೆ.
ಐಎಎನ್‌ಎಸ್ ಸುದ್ದಿಸಂಸ್ಥೆಯೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ಮೊಬಿಯಸ್, ‘ಮೋದಿಯವರು ಉತ್ತಮ ನಾಯಕ. ರಷ್ಯಾ- ಉಕ್ರೇನ್ ಸಮರ, ಇಸ್ರೇಲ್ ಹಾಗೂ ಇರಾನ್ ಬೆಂಬಲಿತ ಉಗ್ರರೊಂದಿನ ಯುದ್ಧದಿಂದ ಉದ್ವಿಗ್ನಗೊಂಡಿರುವ ಜಗತ್ತಿನಲ್ಲಿ ಮೋದಿ ಪ್ರಮುಖ ಶಾಂತಿಧೂತರಾಗಬಹುದು’ ಎಂದರು.
ಮೋದಿಯವರನ್ನು ಇಂದಿನ ಪ್ರಪಂಚದ ಪ್ರಮುಖ ಮಧ್ಯಸ್ಥಗಾರನೆಂದು ಬಣ್ಣಿಸಿರುವ ಅವರು, ತಟಸ್ಥ ನೀತಿಯನ್ನು ಅನುಸರಿಸಿ ಶಾಂತಿಯನ್ನು ಪ್ರತಿಪಾದಿಸುತ್ತಿರುವ ಭಾರತದ ನಿಲುವನ್ನು ಶ್ಲಾಘಿಸಿದ್ದಾರೆ. ಈ ವೇಳೆ, ಕಳೆದದ್ದನ್ನು ತಿರುಗಿ ನೋಡದೆ ಭವಿಷ್ಯದ ಕಡೆ ಗಮನ ಹರಿಸುವುದು ತಮ್ಮ ಹಾಗೂ ಮೋದಿಯವರಲ್ಲಿರುವ ಸಾಮ್ಯತೆ ಎಂದು ಮೊಬಿಯಸ್ ಹೇಳಿದ್ದಾರೆ.
ಇದನ್ನೂ ಓದಿ: ಜಾರ್ಖಂಡ್ನಲ್ಲಿಂದು ಮೊದಲ ಹಂತದಲ್ಲಿ 38 ಸ್ಥಾನಗಳಿಗೆ ಮತದಾನ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ