ಪೈಲಟ್‌ ಕಾಂಗ್ರೆಸ್‌ನಲ್ಲೇ ಉಳಿಸಿದ್ದು ಬಾಲ್ಯದ ಫ್ರೆಂಡ್‌ಶಿಪ್ ತಂತ್ರ!

By Suvarna NewsFirst Published Aug 12, 2020, 3:03 PM IST
Highlights

ರಾಜಸ್ಥಾನ ರಾಜಕೀಯ ಭಿನ್ನಮತ ಶಮನ, ಕಾಂಗ್ರೆಸ್‌ನಲ್ಲೇ ಉಳಿದ ಪೈಲಟ್| ಪೈಲಟ್‌ ಕಾಂಗ್ರೆಸ್‌ನಲ್ಲೇ ಉಳಿಸಿದ್ದು ಬಾಲ್ಯದ ಗೆಳೆಯರು| ಐವರ ತಂತ್ರದಿಂದ ಪೈಲಟ್ ಶಾಂತ

ಡೆಲ್ಲಿ ಮಂಜು, ಇಂಡಿಯಾ ರೌಂಡ್ಸ್

ನವದೆಹಲಿ(ಆ.12): ಯಂಗ್ ಟಕ್೯ ರಿರ್ಟನ್..! ಇದು ಇವತ್ತು 10 ಜನಪತ್ ಪಡಸಾಲೆ ಖುಷ್  ಖುಷಿಯಾಗಿ ನಡೆಯುತ್ತಿದ್ದ ಚರ್ಚೆ. ರಾಜಕೀಯ ಅಂದ್ಮೇಲೆ ಇವೆಲ್ಲಾ ಇದ್ದದ್ದೇ. ಒಂದು ತಿಂಗಳು ಚರ್ಚೆ ನಡೆದು, ಕೋಟ್೯, ಕಚೇರಿ ಅಂತೆಲ್ಲಾ ಸುತ್ತಿದ್ದ ಮೇಲೆ ಹೈಕಮಾಂಡ್ ಮಾತಿಗೆ ಕೊನೆಗೆ ಸಚಿನ್ ಪೈಲಟ್ ಬಗ್ಗಿದ್ರು ಅಂಥ ಮಾತೋಮಾತು.

ರಾಜಸ್ತಾನದ ರಾಜಕೀಯದಲ್ಲಿ ಉಂಟಾಗಿದ್ದ ಅಲ್ಲೋಲಕಲ್ಲೋಲ್ಲ ನಿನ್ನೆಯಿಂದ ಒಂದಷ್ಟು ತಿಳಿಯಾಗಲು ಶುರುವಾಗಿದೆ. ಅದರಲ್ಲೂ ಇಂದಿರಾಗಾಂಧಿ ವಾರಸುದಾರೆ ಎಂದು ಬಿಂಬತವಾಗುತ್ತಿರುವ ಪ್ರಿಯಾಂಕಾ ಗಾಂಧಿ ಎಂಟ್ರಿಯ ಬಳಿಕ ತಿಳಿಯಾಗಿದೆ.

ಕಾಂಗ್ರೆಸ್ಸಿಗೆ ಮರಳಿದ್ದೇನೆ ಎನ್ನಲು ನಾನು ಪಕ್ಷ ತೊರೆದೇ ಇಲ್ಲ: ಪೈಲಟ್‌

ಅತ್ತ ರೆಬಲ್ ಆಗಿದ್ದ ಪೈಲಟ್ ಅನ್ನು ಬಾಲ್ಯದ ಫ್ರೆಂಡ್ ಶಿಪ್ ತಂತ್ರ ಬಳಸಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮನವೊಲಿಸುವ ಮೂಲಕ ಪೈಲಟ್ ಗೆ ಇದ್ದ ಅಸಮಧಾನ, ಬೇಸರ ಸರಿಪಡಿಸುವ ಹೊಸ ಮುಲಾಮು ಹಚ್ಚಿದ್ದಾರೆ.

ರಾಜಸ್ಥಾನ ರಾಜಕಾರಣ ಎಲ್ಲಿಗೆ ಬಂದು ನಿಂತಿದೆ?

ಪೈಲಟ್ ಯುರ್ಟನ್ : ಇದು ಪ್ರಜಾಪ್ರಭುತ್ವ. ಶಾಸಕರು ಹಾಗು ನನ್ನ ಅಸಮಧಾನಗಳ ಬಗ್ಗೆ ಹೇಳಿಕೊಳ್ಳುವ ಪ್ರಯತ್ನ ಆಗಿತ್ತೇ ಹೊರತು ಕಾಂಗ್ರೆಸ್ ಪಕ್ಷ ಅಥವಾ ಹೈಕಮಾಂಡ್ ದೂಷಣೆ ಮಾಡುವ ಕೆಲಸ ನನ್ನದಾಗಿರಲಿಲ್ಲ. ರಾಜಸ್ತಾನ ಸರ್ಕಾರದಲ್ಲಿ ನಡೆದ ವಿದ್ಯಮಾನಗಳ ಬಗ್ಗೆ ಹೇಳಬೇಕಿತ್ತು ಅಷ್ಟೆ. ಅನ್ನೋ ಮಾತುಗಳೇ ಸಚಿನ್ ಪೈಲಟ್ ಮತ್ತು ಕಾಂಗ್ರೆಸ್ ಹೈಕಮಾಂಡ್ ಪುನಃ ಹತ್ತಿರ ಮಾಡಿದವು.

ಇದು ನಿಜವೂ ಕೂಡ ಆಗಿತ್ತು. ಪೈಲಟ್ ಎಲ್ಲಿಯೂ ಕೂಡ ಪಕ್ಷದ ವಿಚಾರದಲ್ಲಿ ಯಡವಿರಲಿಲ್ಲ. ಆದ್ರೆ ರಾಜಸ್ಥಾನದ ರಾಜಕೀಯದಲ್ಲಿ ಬಂಡಾಯ ಏಳುವ ಮೂಲಕ ಬಿರುಗಾಳಿ ಎಬ್ಬಿಸಿದ್ದ ಸಚಿನ್ ಪೈಲಟ್ ಆ್ಯಂಡ್ ಟೀಮ್ ಕೊನೆಯ ಹಂತದಲ್ಲಿ ತನ್ನ ತೀವ್ರತೆಯನ್ನು ಕಳೆದುಕೊಂಡಿದ್ದೂ ಸುಳ್ಳಲ್ಲ.

ರಾಜಸ್ಥಾನದ ಬಂಡಾಯ ನಾಯಕ ಪೈಲಟ್‌ ದಾರಿ ಬದಲಿಸಿದ್ದೇಕೆ?

ಪೈಲಟ್ ಹೊಸ ವಿಮಾನ ಹತ್ತಿದ್ದಾಯ್ತು, ರಫೆಲ್ ರೆಡಿಯಾಗಿದೆ ಪೈಲಟ್ ಗಾಗಿ ಕಾಯಲಾಗುತ್ತಿದೆ ಅನ್ನೋ ಜೋಕ್ ಗಳು ಬಿಜೆಪಿ ನಾಯಕರ ಭಾವಚಿತ್ರಗಳೊಂದಿಗೆ ಟ್ರೋಲ್ ಆಗಿದ್ದೂ ಸುಳ್ಳು ಅಲ್ವೇ ಅಲ್ಲ.

ಭಿನ್ನಮತದ ಆರಂಭದಲ್ಲಿ ಪೈಲಟ್ ಹೊರಬಂದ ಬಳಿಕ ಸರ್ಕಾರ ಬಿದ್ದೆ ಹೋಯಿತು ಅಂತಾ ಹೇಳಲಾಗ್ತಿತ್ತು. ಸಚಿನ್ ಪೈಲಟ್ ಬೇರೆ ಪಕ್ಷ ಕಟ್ಟಲಿದ್ದಾರೆ, ಬಿಜೆಪಿ ಸೇರಲಿದ್ದಾರೆ ಎಂಬಿತ್ಯಾದಿ ವಿಚಾರಗಳು ಚರ್ಚೆಗೆ ಬಂದಿದ್ದವು. ಒಂದೂವರೆ ತಿಂಗಳಲ್ಲೇ ಅವೆಲ್ಲಾ ಚರ್ಚೆಗಳು ಮೂಲ ಸೇರುವಂತ ಬೆಳವಣಿಗೆಗಳು ನಡೆದು ಹೋದ್ವು.

ಕಾಂಗ್ರೆಸ್ ನಿಂದಲೇ ಶಾಕ್ : ಕೇಂದ್ರ ಸಚಿವ ಗಜೇಂದ್ರ ಶೇಖಾವತ್ ವಿರುದ್ದ ಕಾಂಗ್ರೆಸ್ ದಾಖಲಿಸಿದ ಎಫ್ ಐ ಆರ್ ಒಂದು ರೀತಿ ಪೈಲಟ್ ಘರ್ ವಾಪಸ್ಸಿಗೆ ಕಾರಣವಾಯ್ತಂತೆ. ಇತ್ತ ಆಯೋಧ್ಯೆ, ಕೊರೊನಾ, ಪ್ರವಾಹದ ಇಂಥ ವಿಚಾರಗಳಿಗೆ ತಲೆಕೆಡೆಸಿಕೊಂಡಿದ್ದ ಬಿಜೆಪಿ ಹೈಕಮಾಂಡ್, ರಾಜಸ್ತಾನ ರಾಜಕೀಯ ಅಖಾಡದ ಬಗ್ಗೆ ಕ್ಯಾರೇ ಎನ್ನಲಿಲ್ವಂತೆ. ಜೊತೆ ಬಿಜೆಪಿ ಯಿಂದ ಸಿಎಂ ಪದವಿ ಬರೆಯಿಸಿಕೊಂಡವರಂತಿರುವ ಮಾತೆ ವಸುಂದರಾ ರಾಜೇ ಅರಸ್ ಕೂಡ ಇತರ ಬಿಜೆಪಿ ನಾಯಕರ ಆಟಾಟೋಪಕ್ಕೆ ಸೊಪ್ಪು ಹಾಕದಿದ್ದು ಪೈಲಟ್ ಗೆ ಮತ್ತಷ್ಟು ನಿರಾಸೆ ಮೂಡಲು ಕಾರಣವಾಯ್ತಂತೆ.

ಪ್ರಿಯಾಂಕಾ ತಂತ್ರಗಾರಿಕೆ: ಪೈಲಟ್‌ ಮತ್ತೆ ‘ಕೈ’ವಶ!

ಆದ್ರೆ ಇದೇ ಸೋಮವಾರ ರಾತ್ರಿಯ ದಿಢೀರ್‌ ಬೆಳವಣಿಗೆಯಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯನ್ನು ಪೈಲಟ್ ಭೇಟಿ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ರು. ಹೈಕಮಾಂಡ್ ಮಟ್ಟದ ನಾಯಕರ ಬಳಿ ಸಂಧಾನದ ಮಾತುಕತೆ ನಡೆದು ಬಳಿಕ ಘರ್ ವಾಪಸ್ಸಿಗೆ ಪೈಲಟ್ ಒಪ್ಪಿದ್ರು ಎನ್ನಲಾಗಿದೆ.

ಕಾಂಗ್ರೆಸ್ಸಿಗೆ ಮರಳಿದ್ದೇನೆ ಎನ್ನಲು ನಾನು ಪಕ್ಷ ತೊರೆದೇ ಇಲ್ಲ: ಪೈಲಟ್

ಸಚಿನ್​ ಪೈಲಟ್​ ರೆಬಲ್ ಆದ ನಂತರ ಅವರಿಗೆ ಈ ಹಿಂದೆ ನೀಡಿದ್ದ ಉಪಮುಖ್ಯಮಂತ್ರಿ ಸ್ಥಾನ, ಪಿಸಿಸಿ ಅಧ್ಯಕ್ಷ ಸ್ಥಾನ ಕಿತ್ತುಕೊಳ್ಳಲಾಗಿತ್ತು. ಒಂದೂವರೆ ತಿಂಗಳ ಬಳಿಕ ಮಾಧ್ಯಮಗಳ ಜೊತೆ ಮಾ
ತಾಡಿದ ಪೈಲಟ್, ಸ್ಥಾನಮಾನ, ಅಧಿಕಾರದ ನಿರೀಕ್ಷೆಯಲ್ಲಿ ನಾನಿಲ್ಲ. ನನ್ನ ಜೀವ ಇರೋದು ರಾಜಸ್ತಾನ ಜನರ ಸೇವೆಗೆ. ನಾನು ಪಕ್ಷಕ್ಕಾಗಿ ಕೆಲಸ ಮಾಡ್ತೇನೆ. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ನನಗೆ ನೀಡಿದ ಆಶ್ವಾಸನೆಗಳು ತೃಪ್ತಿ ತಂದಿವೆ.  ನಮ್ಮ ಬೇಡಿಕೆಗಳನ್ನು ಆಲಿಸಲು ಸಮಿತಿಗಳನ್ನು ರಚಿಸಿದ್ದಾರೆ. ನನ್ನ ಬೆಂಬಲಿಗರಿಗೆ ಮತ್ತೆ ಮಂತ್ರಿ ಸ್ಥಾನ ನೀಡಲು ಮತ್ತೆ ಒಪ್ಪಿದ್ದಾರೆ. ಈ ಮೂಲಕ ಬಂಡಾಯ ಶಮನವಾಗಿದೆ ಎಂಬುದನ್ನು ಸ್ಪಷ್ಟಪಡಿಸಿದ್ರು. ಅತ್ತ ಪೈಲಟ್ ಬಣದ ಶಾಸಕರು ಸಿಎಂ ಅಶೋಕ್ ಗೆಹ್ಲೋಟ್ ಭೇಟಿ ಮಾಡಿ ಭಾಯಿ..ಭಾಯಿ.. ಎನ್ನುವಂತಾಯ್ತು.

ಇನ್ನು ಕಮಲ ನಾಯಕರ ಶೋ ಫ್ಲಾಪ್ , ವಸುಂದರಾ ರಾಜೇ ಅರಸ್ ಆಟದ ಮುಂದೆ ಪೈಲಟ್ ಬಿಜೆಪಿಯಲ್ಲಿ ಲೆಕ್ಕಕ್ಕೆ ಇರೋಲ್ಲ ಅನ್ನೋ ಮಾತುಗಳು, ಕುಹಕಗಳ ಜೊತೆಗೆ ಒಂದೂವರೆ ತಿಂಗಳ ಬಳಿಕವಾದ್ರು ನಾನು ಇಟ್ಟ ಹೆಜ್ಜೆ ತಪ್ಪು ಅಂಥ ಸಚಿನ್ ಪೈಲಟ್ ಅನ್ನಿಸ್ತಲ್ಲ ಅಷ್ಟು ಸಾಕು ಅಂತಾರೆ ಕಾಂಗ್ರೆಸ್ ಕಾರ್ಯಕರ್ತರು.

ಪೈಲಟ್ ಘರ್ ವಾಪಸ್ಸಿ ಹಿಂದೆ ಪ್ರಿಯಾಂಕಾ ಗಾಂಧಿಯವರ ಮನವೊಲಿಸುವಿಕೆ, ಚಿದಂಬರಂ ಸಲಹೆ, ಶಶಿತರೂರ್ ಅವರ ಬೆಂಬಲ, ಅಭಿಷೇಕ ಮನುಸಿಂಗ್ವಿ ಅವರ ಬುದ್ದಿಮಾತು ಎಲ್ಲವೂ ಕೆಲಸ ಮಾಡಿವೆ. ಕೊನೆಗೆ ರಾಹುಲ್ ಗಾಂಧಿಯ ಆಶ್ವಾಸನೆಗಳು ಪೈಲಟ್ ಗೆ ಮತ್ತಷ್ಟು ಬಲ ನೀಡಿವೆ ಎನ್ನಲಾಗುತ್ತಿದೆ. ಸಮಸ್ಯೆಗಳು ಸರಿಪಡಿಸಲು ಮೂರು ಮಂದಿ ಹಿರಿಯರ ಟೀಂ ಸಿದ್ದವಾಗಿ ನಿಂತಿದೆ. ಇದಕ್ಕೆ ಸೋನಿಯಾ ಗಾಂಧಿ ಅವರ ಸಹಮತ ಕೂಡ ಇದೆ. ನೋಡೋಣ ಇದು ರಾಜಕೀಯ, ಯಾವಾಗ ಜನ ಪಥ ಬದಲಾಯಿಸುತ್ತಾರೋ ಗೊತ್ತಾಗೋದು ಇಲ್ಲ..

click me!