
ನವದೆಹಲಿ: ಸಿನಿಮಾ ಪೈರಸಿ ಮಾಡುವವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ಹಾಗೂ ಸಿನಿಮಾದ ಒಟ್ಟಾರೆ ಬಜೆಟ್‌ನ ಶೇ.5ರಷ್ಟು ಮೊತ್ತವನ್ನು ದಂಡದ ರೂಪದಲ್ಲಿ ವಸೂಲಿ ಮಾಡುವ ವಿಧೇಯಕ ಪ್ರತಿಪಕ್ಷಗಳ ಸಭಾತ್ಯಾಗದ ನಡುವೆಯೂ ರಾಜ್ಯಸಭೆಯಲ್ಲಿ ಗುರುವಾರ ಅಂಗೀಕಾರವಾಗಿದೆ. ಧ್ವನಿಮತದಿಂದ ಸಿನಿಮಾಟೋಗ್ರಾಫ್ (ತಿದ್ದುಪಡಿ) ಮಸೂದೆ-2023’ ಪಾಸ್ ಆಗಿದೆ. ಅನಧಿಕೃತವಾಗಿ ಸಿನಿಮಾಗಳನ್ನು ರೆಕಾರ್ಡ್ ಮಾಡಿಕೊಳ್ಳುವುದು ಹಾಗೂ ಪ್ರದರ್ಶಿಸುವುದನ್ನು ನಿರ್ಬಂಧಿಸಲು ಸಿನಿಮಾಟೋಗ್ರಾಫ್ ಕಾಯ್ದೆಗೆ ಸೆಕ್ಷನ್ 6ಎಎ ಹಾಗೂ ಸೆಕ್ಷನ್ 6ಎಬಿ ಸೇರ್ಪಡೆ ಮಾಡಲು ಕೂಡ ಈ ವಿಧೇಯಕ ಅವಕಾಶ ಕಲ್ಪಿಸುತ್ತದೆ. ಸಿನಿಮಾ ಉದ್ಯಮ ಪೈರಸಿಯಿಂದ ಅನುಭವಿಸುತ್ತಿರುವ 20 ಸಾವಿರ ಕೋಟಿ ರು. ನಷ್ಟಕ್ಕೆ ಇನ್ನು ತೆರೆ ಬೀಳಲಿದೆ ಎಂದು ವಿಧೇಯಕದ ಮೇಲಿನ ಚರ್ಚೆ ವೇಳೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಅವರು ತಿಳಿಸಿದ್ದಾರೆ.
ವಯಸ್ಸಿಗನುಗುಣವಾಗಿ ಪ್ರಮಾಣಪತ್ರ:
‘ಯುಎ’ ಪ್ರಮಾಣಪತ್ರ ವಿಭಾಗದಡಿ ವಯಸ್ಸಿನ ಆಧಾರದಲ್ಲಿ ‘ಯುಎ 7+’, ‘ಯುಎ 13+’ ಮತ್ತು ‘ಯುಎ 16+’ ಎಂಬ ಪ್ರಮಾಣಪತ್ರ ನೀಡುವ ಅಂಶವೂ ವಿಧೇಯಕದಲ್ಲಿದೆ. ಟೀವಿ ಅಥವಾ ಇನ್ನಿತರೆ ಮಾಧ್ಯಮಗಳಲ್ಲಿ ಸಿನಿಮಾಗಳ ಪ್ರಸಾರಕ್ಕೆ ಪ್ರತ್ಯೇಕ ಪ್ರಮಾಣಪತ್ರ ನೀಡುವ ಅಧಿಕಾರವನ್ನು ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ)ಗೆ ದಯಪಾಲಿಸುವ ಅಂಶವೂ ಮಸೂದೆಯಲ್ಲಿದೆ. ಅಲ್ಲದೆ, ಸಿನಿಮಾಗಳಿಗೆ ಇನ್ನು ಮುಂದೆ 10 ವರ್ಷದ ಅವಧಿಗೆ ಬದಲಿಗೆ ಶಾಶ್ವತ ಸಿಂಧುತ್ವ ಪ್ರಮಾಣಪತ್ರವನ್ನು ನೀಡಲಾಗುತ್ತದೆ.
ಸಿನಿಮಾ ಪೈರಸಿ ತಡೆ ಮಸೂದೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ
ಪಿಐಬಿಯಿಂದ ಈವರೆಗೆ 1276 ಸುಳ್ಳು ಸುದ್ದಿ ಪತ್ತೆ
ನವದೆಹಲಿ: ಕೇಂದ್ರ ಸರ್ಕಾರದ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (ಪಿಐಬಿ) ಫ್ಯಾಕ್ಟ್ ಚೆಕ್ ಘಟಕ ಈವರೆಗೆ 1,276 ಸುಳ್ಳು ಸುದ್ದಿ ಪ್ರಕರಣಗಳನ್ನು ಪತ್ತೆ ಹಚ್ಚಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ. ಲೋಕಸಭೆಗೆ ಲಿಖಿತ ಉತ್ತರ ನೀಡಿದ ಅವರು,‘ಪಿಐಬಿ 2019ರಲ್ಲಿ 19 ಸುಳ್ಳು ಸುದ್ದಿಗಳನ್ನು ಪತ್ತೆ ಮಾಡಿತ್ತು. ಈ ಸಂಖ್ಯೆ ವರ್ಷ ಕಳೆದಂತೆ ಏರುಗತಿಯಲ್ಲೇ ಸಾಗಿದೆ. 2020ರಲ್ಲಿ 394, 2021ರಲ್ಲಿ 285, 2022ರಲ್ಲಿ 338 ಹಾಗೂ 2023ರ ಜುಲೈ 17ರವರೆಗೆ 240 ಸುಳ್ಳು ಸುದ್ದಿ ಪ್ರಕರಣಗಳನ್ನು ಪತ್ತೆ ಮಾಡಿದೆ’ ಎಂದು ತಿಳಿಸಿದರು. ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದಂತೆ ಸುದ್ದಿಯ ನಿಖರತೆಯನ್ನು ಪಿಐಬಿ ಸ್ಪಷ್ಟೀಕರಿಸುತ್ತದೆ.
ಹೀರೋಗೆ ಪೈರಸಿ ಕಾಟ.. ಆಪ್ ಬ್ಯಾನ್ ಮಾಡ್ತಾರೆ..ಇಂಥದ್ದಕ್ಕೆ ಬ್ರೇಕ್ ಯಾವಾಗ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ