ಸರಣಿ ದಾಳಿಗೆ ಉಗ್ರರ ಸಂಚು: ಕಾಶ್ಮೀರದ ಐದು ಸ್ಥಳಗಳಲ್ಲಿ ಎನ್‌ಐಎ ದಾಳಿ

By Kannadaprabha NewsFirst Published Jul 12, 2023, 7:16 AM IST
Highlights

ಪಾಕಿಸ್ತಾನದಿಂದ ಸಹಾಯ ಪಡೆಯುತ್ತಿರುವ ಉಗ್ರ ಸಂಘಟನೆಗಳ ಹೊಸ ಅಂಗಸಂಸ್ಥೆಗಳು ಜಮ್ಮು ಕಾಶ್ಮೀರದಲ್ಲಿ ಸರಣಿ ಉಗ್ರ ದಾಳಿ ನಡೆಸಲು ಯೋಜನೆ ರೂಪಿಸಿವೆ ಎಂಬ ಮಾಹಿತಿ ಆಧರಿಸಿ ರಾಜ್ಯದ 5 ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಮಂಗಳವಾರ ದಾಳಿ ನಡೆಸಿದೆ.

ಶ್ರೀನಗರ: ಪಾಕಿಸ್ತಾನದಿಂದ ಸಹಾಯ ಪಡೆಯುತ್ತಿರುವ ಉಗ್ರ ಸಂಘಟನೆಗಳ ಹೊಸ ಅಂಗಸಂಸ್ಥೆಗಳು ಜಮ್ಮು ಕಾಶ್ಮೀರದಲ್ಲಿ ಸರಣಿ ಉಗ್ರ ದಾಳಿ ನಡೆಸಲು ಯೋಜನೆ ರೂಪಿಸಿವೆ ಎಂಬ ಮಾಹಿತಿ ಆಧರಿಸಿ ರಾಜ್ಯದ 5 ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಮಂಗಳವಾರ ದಾಳಿ ನಡೆಸಿದೆ.

ದಕ್ಷಿಣ ಕಾಶ್ಮೀರದ ಅನಂತನಾಗ್‌, ಶೋಪಿಯಾನ್‌ ಮತ್ತು ಪುಲ್ವಾಮ ಜಿಲ್ಲೆಗಳಲ್ಲಿ ದಾಳಿ ನಡೆಸಲಾಗಿದೆ. ತನಿಖೆಯ ಸಮಯದಲ್ಲಿ ಜಮ್ಮು ಕಾಶ್ಮೀರದಲ್ಲಿ ಬಾಂಬ್‌, ಸುಧಾರಿತ ಸ್ಫೋಟಕ ಮತ್ತು ಲಘು ಆಯುಧಗಳನ್ನು ಬಳಸಿ ದಾಳಿ ನಡೆಸಲು ಉಗ್ರ ಸಂಘಟನೆಗಳು ಭೌತಿಕ ಮತ್ತು ಆನ್ಲೈನ್‌ನಲ್ಲಿ ಪಿತೂರಿ ನಡೆಸಿದ್ದವು ಎಂಬುದು ಬೆಳಕಿಗೆ ಬಂದಿದೆ. ಮಂಗಳವಾರ ಬೆಳಿಗ್ಗೆ ಶೋಧಕಾರ್ಯ ಆರಂಭವಾಗಿದ್ದು, ಹೈಬ್ರಿಡ್‌ ಉಗ್ರರಿಗೆ ಸೇರಿದ ಪ್ರದೇಶಗಳಲ್ಲಿ ದಾಳಿ ನಡೆಸಲಾಗಿದೆ. ಅಲ್ಲದೇ ಉಗ್ರರ ಬಗ್ಗೆ ಅನುಕಂಪ ಹೊಂದಿರುವವರು ಮತ್ತು ಅವರಿಗೆ ಸೇರಿದ ಪ್ರದೇಶಗಳ ಮೇಲೂ ದಾಳಿ ನಡೆಸಲಾಗಿದೆ. ದಾಳಿಯ ವೇಳೆ ಹಲವು ಡಿಜಿಟಲ್‌ ಡಿವೈಸ್‌ಗಳನ್ನು (Digital Divice) ವಶಪಡಿಸಿಕೊಳ್ಳಲಾಗಿದೆ ಎಂದು ಎನ್‌ಐಎ ವಕ್ತಾರ ಹೇಳಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಹೊಸದಾಗಿ ಸೃಷ್ಟಿಯಾಗಿರುವ ದ ರೆಸಿಸ್ಟೆನ್ಸ್‌ ಫ್ರಂಟ್‌, ಯುನೈಟೆಡ್‌ ಲಿಬರೇಶನ್‌ ಫ್ರಂಟ್‌, ಮುಜಾಹಿದ್ದೀನ್‌ ಗಜ್ವತ್‌ ಉಲ್‌ ಹಿಂದ್‌, ಜಮ್ಮು ಕಾಶ್ಮೀರ ಫ್ರೀಡಂ ಫೈಟ​ರ್ಸ್ ಕಾಶ್ಮೀರ್‌ ಟೈಗ​ರ್ಸ್ ಉಗ್ರ ಸಂಘಟನೆಗಳ ವಿರುದ್ಧ ತನಿಖೆ ನಡೆಸುತ್ತಿದೆ. ಇವುಗಳ ವಿರುದ್ಧ ಕಳೆದ ವರ್ಷ ಜೂನ್‌ನಲ್ಲಿ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿರುವ ಎನ್‌ಐಎ ತನಿಖೆ ನಡೆಸುತ್ತಿದೆ.


ಶೋಪಿಯಾನ್‌ ರೇಪ್‌ ಕೇಸ್‌ ಕುರಿತಾಗಿ ಸುಳ್ಳು ವರದಿ, ಇಬ್ಬರು ವೈದ್ಯರು ಸೇವೆಯಿಂದಲೇ ವಜಾ!

click me!