ತಲೆಗೆ 20 ಸಾವಿರ ಘೋಷಿಸಿದ್ದ Most Wanted ರೌಡಿ ಕೋತಿ ಕೊನೆಗೂ ಅರೆಸ್ಟ್

By Anusha Kb  |  First Published Jun 22, 2023, 2:23 PM IST

ರೌಡಿಯಂತೆ ವರ್ತಿಸುತ್ತಿದ್ದ ಕೋತಿಯೊಂದನ್ನು ಜನರ ನೆರವಿನಿಂದ ಅರಣ್ಯ ಸಿಬ್ಬಂದಿ ಜೊತೆಯಾಗಿ ಸೆರೆ ಹಿಡಿದಿದ್ದಾರೆ. ಮಧ್ಯಪ್ರದೇಶ ರಾಜ್‌ಗರ್‌ ಜಿಲ್ಲೆಯಲ್ಲಿ ಈ ಅಪರೂಪದ ಘಟನೆ ನಡೆದಿದೆ. 


ಭೋಪಾಲ್‌: ಅಪರಾಧ ಕೃತ್ಯಗಳಲ್ಲಿ ತೊಡಗುವ ಕ್ರಿಮಿನಲ್ ಹಿನ್ನೆಯುಳ್ಳ ಖದೀಮರ ತಲೆಗೆ  ಪೊಲೀಸರು ಹಣ ನಿಗದಿ ಮಾಡುವುದನ್ನು  ಹಾಗೂ ಆತನ/ಆಕೆಯ ಬಗ್ಗೆ ಸುಳಿವು ನೀಡಿದ್ದಲ್ಲಿ ಬಹುಮಾನ ನೀಡುವುದಾಗಿ ಘೋಷಣೆ ಮಾಡುವುದನ್ನು ನೀವು ನೋಡಿರಬಹುದು. ಆದರೆ ಉಪಟಳ ಮಾಡುವ ಪ್ರಾಣಿಗಳನ್ನು ಹಿಡಿದವರಿಗೆ ಬಹುಮಾನ ಘೋಷಿಸಿದ ನಿದರ್ಶನ ಎಲ್ಲಾದರೂ ಕೇಳಿದ್ದೀರಾ? ಮಧ್ಯಪ್ರದೇಶದಲ್ಲಿ ಈ ಅಪರೂಪದ ಘಟನೆ ನಡೆದಿದೆ., ರೌಡಿಯಂತೆ ವರ್ತಿಸುತ್ತಿದ್ದ ಕೋತಿಯನ್ನು ಜನರ ನೆರವಿನಿಂದ ಅರಣ್ಯ ಸಿಬ್ಬಂದಿ ಜೊತೆಯಾಗಿ ಸೆರೆ ಹಿಡಿದಿದ್ದಾರೆ. ಮಧ್ಯಪ್ರದೇಶ ರಾಜ್‌ಗರ್‌ ಜಿಲ್ಲೆಯಲ್ಲಿ ಈ ಅಪರೂಪದ ಘಟನೆ ನಡೆದಿದೆ. 

ಈ ಕೋತಿ 20ಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿತ್ತು. ನಿನ್ನೆ ಸಂಜೆ, ಉಜ್ಜಯಿನಿಯಿಂದ ಕರೆಸಲ್ಪಟ್ಟ ರಕ್ಷಣಾ ತಂಡ, ಸ್ಥಳೀಯ ಅಧಿಕಾರಿಗಳು ಮತ್ತು ಸ್ಥಳೀಯ ನಿವಾಸಿಗಳೊಂದಿಗೆ ಸೇರಿಕೊಂಡು ಈ ಉಗ್ರವಾದಿ ಕೋತಿಯನ್ನು ಸೆರೆ ಹಿಡಿದಿದೆ. ಕೋತಿಯನ್ನು ಪತ್ತೆ ಮಾಡಲು ಡ್ರೋನ್ ಬಳಸಿದ ಈ ತಂಡ, ಇಂಜೆಕ್ಷನ್ ಬಳಸಿ ಅದನ್ನು ಶಾಂತಗೊಳಿಸುವಲ್ಲಿ ಯಶಸ್ವಿಯಾಗಿದೆ ಬಳಿಕ ಕೋತಿಯನ್ನು ಬೋನಿನಲ್ಲಿ ಹಾಕಿ ಬೇರೆಡೆ ಕೊಂಡೊಯ್ಯಲಾಗಿದೆ.  ಆದರೆ ಈ ಕಾರ್ಯಾಚರಣೆ ನಡೆದ ಸ್ಥಳದ ದೃಶ್ಯಗಳು ವೈರಲ್ ಆಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಶಾಂತವಾದ ಕೋತಿಯನ್ನು ಪ್ರಾಣಿಗಳ ಸಾಗಿಸುವ ವಾಹನಕ್ಕೆ ಕೊಂಡೊಯ್ಯುತ್ತಿದ್ದಂತೆ ಅಲ್ಲಿದ ಗುಂಪು ಜೈ ಶ್ರೀ ರಾಮ್ (Jai Shri Ram) ಮತ್ತು ಜೈ ಬಜರಂಗ ಬಲಿ (Jai Bajarang bali) ಘೋಷಣೆಗಳನ್ನು ಕೂಗಿದ್ದಾರೆ. 

Tap to resize

Latest Videos

ಪೊಲೀಸರೆದುರೆ ನ್ಯಾಯಾಧೀಶರ ಸನ್‌ಗ್ಲಾಸ್ ಎತ್ಕೊಂಡ್ ಹೋದ ಕೋತಿ: ವೈರಲ್‌ ವಿಡಿಯೋ

ಈ ಕೋತಿಯ ಹಾವಳಿಯಿಂದಾಗಿ ಆ ಪ್ರದೇಶದಲ್ಲಿ ವ್ಯಕ್ತಿಯೊಬ್ಬ  ಮನೆ ಟೆರೇಸ್ ಮೇಲೆ ಬಂದೂಕನ್ನು ಕಾವಲು ಕಾಯುತ್ತಿದ್ದ ದೃಶ್ಯವೂ ವೈರಲ್ ಆಗಿತ್ತು, ಇದರಿಂದಲೇ ಕೋತಿ ಎಷ್ಟು ಉಪಟಳ ಮಾಡಿದಿರಬಹುದು ಎಂದು ತಿಳಿಯಬಹುದಾಗಿದೆ.  ಕಳೆದ ಹದಿನೈದು ದಿನಗಳಲ್ಲಿ ಕೋತಿ 20 ಜನರ ಮೇಲೆ ದಾಳಿ ನಡೆಸಿದ್ದು, ಇದರಲ್ಲಿ 8 ಜನ ಮಕ್ಕಳು ಸೇರಿದ್ದಾರೆ. ಈ ರೌಡಿ ಕೋತಿ, ಮನೆ ಛಾವಣಿಗಳು ಮತ್ತು ಕಿಟಕಿಯ ಸರಳುಗಳ ಮೇಲೆ ಕುಳಿತು ಇದ್ದಕ್ಕಿದ್ದಂತೆ ಜನರ ಮೇಲೆ ಹಾರಿ ದಾಳಿ ಮಾಡುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರ ದಾಳಿಯಿಂದ ಕೆಲವರಿಗೆ ಹೊಲಿಗೆ ಹಾಕಬೇಕಾದಷ್ಟು ದೊಡ್ಡ ಗಂಭೀರ ಗಾಯಗಳಾಗಿದ್ದವು. 

ಆ ಪ್ರದೇಶದಲ್ಲಿದ್ದ ಸಿಸಿಟಿವಿಯೊಂದರಲ್ಲಿ ಕೋತಿಯ ಕಿತಾಪತಿ ಸೆರೆಯಾಗಿತ್ತು. ವಯೋವೃದ್ಧರ ಮೇಲೆ ದಾಳಿ ಮಾಡಿದ ಕೋತಿ ನಂತರ ಅವರನ್ನು ನೆಲಕ್ಕೆ ಕೆಡವಿ ಎಳೆದುಕೊಂಡು ಹೋದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿತ್ತು. ಅಲ್ಲದೇ ಕೋತಿ ಅವರ ತೊಡೆಗೆ ಗಂಭೀರ ಗಾಯ ಮಾಡಿತ್ತು. ಈ ಕೋತಿಯನ್ನು ಹಿಡಿಯಲು ಮಾಡಿದ ಹಲವು ಪ್ರಯತ್ನಗಳು ವಿಫಲಗೊಂಡ ಹಿನ್ನೆಲೆಯಲ್ಲಿ ಸ್ಥಳೀಯ ಅಧಿಕಾರಿಗಳು ಅದನ್ನು ಹಿಡಿದು ಕೊಟ್ಟವರಿಗೆ 21 ಸಾವಿರ ರೂಪಾಯಿಗಳ ನಗದು ಬಹುಮಾನವನ್ನು ಘೋಷಣೆ ಮಾಡಿದ್ದರು. ನಂತರ ವಿಶೇಷ ರಕ್ಷಣಾ ತಂಡವನ್ನು ಕರೆಸಿದ್ದರು.

Viral Video: ಸರ್ಕಾರಿ ಶಾಲೆಗೆ ಬಂದ ವಿಶೇಷ ಅತಿಥಿ: ಪಾಠ ಕೇಳಲು ದಿನಾ ಶಾಲೆಗೆ ಬರುತ್ತೆ ಕೋತಿ..!

ಆ ಕೋತಿಯನ್ನು ಹಿಡಿಯಲು ಪುರಸಭೆಯ ಬಳಿ ಸಾಧ್ಯವಾಗಲಿಲ್ಲ, ನಂತರ  ನಾವು ಜಿಲ್ಲಾಧಿಕಾರಿಗೆ ಮನವಿ ಮಾಡಿದೆವು. ಅವರ ಸಹಾಯದಿಂದ ಉಜ್ಜಯಿನಿಯಿಂದ (Ujjain) ಅರಣ್ಯ ಇಲಾಖೆಯ ರಕ್ಷಣಾ ತಂಡ ಸ್ಥಳಕ್ಕೆ ಬಂತು. ನಂತರ ಪುರಸಭೆಯ ಸಿಬ್ಬಂದಿ ಮತ್ತು ಸ್ಥಳೀಯ ನಿವಾಸಿಗಳು ಅವರಿಗೆ ಸಹಾಯ ಮಾಡಿದರು. ಆದರೂ ಈ ಕೋತಿಯನ್ನು ಹಿಡಿಯಲು ಸುಮಾರು 4 ಗಂಟೆಗಳೇ ಬೇಕಾಯ್ತು ಎಂದು ರಾಜ್‌ಗಢ ಪುರಸಭೆಯ ಅಧ್ಯಕ್ಷ ವಿನೋದ್ ಸಾಹು ತಿಳಿಸಿದ್ದಾರೆ. ಕೋತಿಯನ್ನು ಹಿಡಿದಿದ್ದಕ್ಕೆ  21 ಸಾವಿರ ನಗದು (Bounty) ಬಹುಮಾನ ನೀಡುವುದಾಗಿ ಹೇಳಿದ್ದೆವು, ಈಗ ಪ್ರಾಣಿ ರಕ್ಷಣಾ ತಂಡಕ್ಕೆ ನೀಡುತ್ತೇವೆ ಎಂದು ಅವರು ಹೇಳಿದರು.

ರಾಜ್‌ಗಢ್‌ನಲ್ಲಿ ಸ್ಥಳೀಯ ತಂಡ ಕಳೆದ ಎರಡು ವಾರಗಳಿಂದ ಕೋತಿಯನ್ನು (monkey) ಹಿಡಿಯಲು ಪ್ರಯತ್ನಿಸಿದರೂ ಯಶಸ್ವಿಯಾಗಲಿಲ್ಲ. ಹೀಗಾಗಿ ಈ ಕೋತಿಯನ್ನು ಹಿಡಿಯಲು ನಾವು ಹಲವಾರು ಜಿಲ್ಲೆಗಳಲ್ಲಿ ವಿಶೇಷ ತಂಡಗಳನ್ನು ಸಂಪರ್ಕಿಸಿದ್ದೆವು. ಕೊನೆಗೆ ಉಜ್ಜಯಿನಿ ತಂಡವು ಲಭ್ಯವಾದ ತಕ್ಷಣ ಅವರು ರಾಜ್‌ಗಢಕ್ಕೆ ಧಾವಿಸಿದರು ಮತ್ತು ನಾಲ್ಕು ಗಂಟೆಗಳ ಕಾರ್ಯಾಚರಣೆಯ ನಂತರ ನಾವು ಕೋತಿಯನ್ನು ಹಿಡಿದಿದ್ದೇವೆ ಎಂದು ಅರಣ್ಯಾಧಿಕಾರಿ ಗೌರವ್ ಗುಪ್ತಾ ಹೇಳಿದ್ದಾರೆ.  ಸೆರೆಹಿಡಿಯಲಾದ ಕೋತಿಯನ್ನು ದಟ್ಟವಾದ ಅರಣ್ಯ ಪ್ರದೇಶದಲ್ಲಿ ಬಿಡಲಾಗುತ್ತದೆ ಇದರಿಂದ ಅದು ಜನರಿಗೆ ಹಾನಿ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. 

click me!