ಸನ್‌ಗ್ಲಾಸ್‌ ಹಾಕಿಕೊಂಡ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಫೋಟೋ ವೈರಲ್‌: ರಿಯಲ್‌ ಜೇಮ್ಸ್‌ ಬಾಂಡ್‌ ಎಂದ ನೆಟ್ಟಿಗರು

Published : May 15, 2023, 01:14 PM IST
ಸನ್‌ಗ್ಲಾಸ್‌ ಹಾಕಿಕೊಂಡ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಫೋಟೋ ವೈರಲ್‌: ರಿಯಲ್‌ ಜೇಮ್ಸ್‌ ಬಾಂಡ್‌ ಎಂದ ನೆಟ್ಟಿಗರು

ಸಾರಾಂಶ

ಸನ್‌ಗ್ಲಾಸ್‌ನಲ್ಲಿ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರು ಕಾಣಿಸಿಕೊಂಡಿರುವ ಇತ್ತೀಚಿನ ಫೋಟೋ ವೈರಲ್‌ ಆಗಿದೆ. ಎಸ್‌. ಜೈಶಂಕರ್‌ ಟ್ವಿಟ್ಟರ್‌ನಲ್ಲಿ ಪೋಸ್ಟ್‌ ಮಾಡಿರುವ ಈ ಫೋಟೋಗೆ ಸಿಕ್ಕಾಪಟ್ಟೆ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 

ನವದೆಹಲಿ (ಮೇ 15, 2023): ಭಾರತದ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಆಗಾಗ್ಗೆ ನಾನಾ ಕಾರಣಗಳಿಂದ ಸುದ್ದಿಯಲ್ಲಿರುತ್ತಾರೆ. ಅವರು ಪಾಕ್‌, ಚೀನಾ ವಿರುದ್ಧ ತೆಗೆದುಕೊಳ್ಳುವ ಗಟ್ಟಿ ನಿರ್ಧಾರ, ಕಠಿಣ ನಿಲುವುಗಳ ಕಾರಣದಿಂದಲೂ ಆಗಾಗ್ಗೆ ಸದ್ದು ಮಾಡುತ್ತಿರುತ್ತಾರೆ. ಈಗ, ತಮ್ಮ ವೇಷಭೂಷಣಗಳಿಂದಲೂ ಎಸ್‌. ಜೈಶಂಕರ್‌ ಸುದ್ದಿಯಾಗಿದ್ದಾರೆ.

ಹೌದು, ಸನ್‌ಗ್ಲಾಸ್‌ನಲ್ಲಿ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರು ಕಾಣಿಸಿಕೊಂಡಿರುವ ಇತ್ತೀಚಿನ ಫೋಟೋ ವೈರಲ್‌ ಆಗಿದೆ. ಎಸ್‌. ಜೈಶಂಕರ್‌ ಟ್ವಿಟ್ಟರ್‌ನಲ್ಲಿ ಪೋಸ್ಟ್‌ ಮಾಡಿರುವ ಈ ಫೋಟೋಗೆ ಸಿಕ್ಕಾಪಟ್ಟೆ ಲೈಕ್ಸ್‌, ಕಾಮೆಂಟ್ಸ್‌ ಸಹ ಸಿಕ್ಕಿದೆ. ಇನ್ನು, ಈ ಫೋಟೋಗೆ ನೆಟ್ಟಿಗರ ಪ್ರತಿಕ್ರಿಯೆ ಹೀಗಿದೆ ನೋಡಿ..

ಇದನ್ನು ಓದಿ: ಭುಟ್ಟೋ ಉಗ್ರರ ವಕ್ತಾರ; ಬಲಿಪಶುಗಳು, ಅಪರಾಧಿಗಳ ಜತೆ ಕೂರಲಾಗುವುದಿಲ್ಲ: ಜೈಶಂಕರ್‌ ಪ್ರಹಾರ

ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ತಮ್ಮ ಮೂರು ದಿನಗಳ ಸ್ವೀಡನ್ ಪ್ರವಾಸದಲ್ಲಿ ಸ್ವೀಡನ್ ರಕ್ಷಣಾ ಸಚಿವ ಪಾಲ್ ಜಾನ್ಸನ್ ಮತ್ತು ವಿದೇಶಾಂಗ ಸಚಿವ ಟೋಬಿಯಾಸ್ ಬಿಲ್‌ಸ್ಟ್ರೋಮ್‌ ಅವರನ್ನು ಭೇಟಿಯಾಗಿದ್ದರು. 

ಸರಿಯಾದ ಔಪಚಾರಿಕ ಉಡುಪು ಮತ್ತು ತಂಪಾದ ಸನ್‌ಗ್ಲಾಸ್‌ಗಳನ್ನು ಧರಿಸಿದ್ದ ವಿದೇಶಾಂಗ ಸಚಿವರು "ಸ್ವೀಡನ್‌ನ ರಕ್ಷಣಾ ಸಚಿವ ಪಾಲ್ ಜಾನ್ಸನ್ ಅವರನ್ನು ಭೇಟಿಯಾಗಿರುವುದು ಒಳ್ಳೆಯದು. ಪ್ರಾದೇಶಿಕ ಮತ್ತು ಜಾಗತಿಕ ಭದ್ರತೆಯ ಕುರಿತು ವೀಕ್ಷಣೆಗಳ ಉಪಯುಕ್ತ ವಿನಿಮಯ" ಎಂದು ಫೋಟೋ ಜತೆಗೆ ಟ್ವೀಟ್‌ ಮಾಡಿದ್ದಾರೆ. ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಇದನ್ನೂ ಓದಿ: ಎದೆಗೆ ಗನ್ನಿಟ್ಟು ನಮ್ಮ ಬಳಿ ಇದ್ದುದ್ದನ್ನೆಲ್ಲ ದೋಚಿದ್ರು: ಸೂಡಾನ್‌ನಿಂದ ಪಾರಾದ ಭಾರತೀಯರ ಸಂಕಷ್ಟ ಕಥನ

ಆದರೆ, ಈ ಫೋಟೋದಲ್ಲಿ ಸಾರ್ವಜನಿಕರ ಗಮನ ಸೆಳೆದಿದ್ದು ಜೈಶಂಕರ್ ಅವರ ಸನ್ ಗ್ಲಾಸ್. ಏಕೆಂದರೆ, ಅನೇಕರು ಅವರ ಸನ್‌ಗ್ಲಾಸ್‌ ಬಗ್ಗೆ ಹಾಗೂ ಸನ್‌ಗ್ಲಾಸ್‌ ಧರಿಸಿರುವುದರಿಂದ ಜೇಮ್ಸ್‌ ಬಾಂಡ್‌, ಹಾಲಿವುಡ್‌ ನಟ ಬ್ರಾಡ್‌ ಪಿಟ್ ರೀತಿ ಕಾಣಿಸುತ್ತಿದ್ದಾರೆ ಎಂದಿದ್ದಾರೆ. ಇನ್ನು, ಹಲವರು ಸ್ಟೈಲಿಶ್‌ ಆಗಿ ಕಾಣ್ತಿದ್ದಾರೆ, ಸಖತ್ತಾಗಿ ಕಾಣ್ತಿದ್ದಾರೆ ಹಾಗೂ ರಿಯಲ್‌ (ಜೇಮ್ಸ್‌ ಬಾಂಡ್‌) 007 ಇವರೇ ಎಂದೂ ಕಾಮೆಂಟ್‌ ಹಾಗೂ ವಿದೇಶಾಂಗ ಸಚಿವರ ಫೋಟೋವನ್ನು ರೀಟ್ವೀಟ್‌ ಮಾಡುತ್ತಿದ್ದಾರೆ. 

ಅನೇಕ ಇತರ ಬಳಕೆದಾರರು ಸಹ ಫೋಟೋಗೆ ಕಾಮೆಂಟ್ ಮಾಡಿದ್ದಾರೆ. ‘ರಾಕ್‌ ಸ್ಟಾರ್‌’ ಎಂದು ಹಲವರು ಹೇಳಿದ್ದು, ಮತ್ತು "ಇದು ನಿಜವಾದ 007 ಲುಕ್‌." ಎಂದೂ ಹೇಳಿದ್ದರೆ. ಮತ್ತೊಬ್ಬ ಬಳಕೆದಾರರು "ಮೆನ್ ಇನ್ ಬ್ಲ್ಯಾಕ್" ಎಂದು ಟ್ವೀಟ್ ಮಾಡಿದ್ದರೆ, ಮತ್ತೊಬ್ಬರು "ಕಿಲ್ಲರ್ ಲುಕ್" ಎಂದಿದ್ದಾರೆ. ಹಾಗೆ, ಟಾಮ್‌ ಕ್ರೂಸ್‌ ಹಾಗೂ ಬ್ರಾಡ್‌ ಪಿಟ್‌ಗೆ ಸರಿಸಾಟಿ ಎಂದೂ ಪೋಸ್ಟ್‌ ಮಾಡಿದ್ದಾರೆ. 

ಇದನ್ನೂ ಓದಿ: ಸೂಡಾನ್‌ನಲ್ಲಿ ಸಿಕ್ಕಿಬಿದ್ದ ಕನ್ನಡಿಗರು ಸೇರಿ 3000 ಭಾರತೀಯರ ರಕ್ಷಣೆಗೆ ಏರ್‌ಲಿಫ್ಟ್‌ ಮಾಡಲು ಮೋದಿ ಸೂಚನೆ

ಜೈಶಂಕರ್ ಅವರು ವಿದೇಶಾಂಗ ಸಚಿವರಾಗಿ ಸ್ವೀಡನ್‌ಗೆ ಮೊದಲ ಬಾರಿ ಭೇಟಿ ನೀಡಿದ್ದಾರೆ. ಭಾರತ ಮತ್ತು ಸ್ವೀಡನ್ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 75 ನೇ ವರ್ಷವನ್ನು ಆಚರಿಸುತ್ತಿರುವ ಸಮಯದಲ್ಲಿ ಈ ಪ್ರವಾಸವು ಬಂದಿದೆ. ಇಯು ಇಂಡೋ-ಪೆಸಿಫಿಕ್ ಮಂತ್ರಿಮಂಡಲದಲ್ಲಿ ಭಾಗವಹಿಸಲು ಜೈಶಂಕರ್ 3 ದಿನಗಳ ಕಾಲ ಸ್ವೀಡನ್‌ಗೆ ಭೇಟಿ ನೀಡಿದ್ದಾರೆ. 

ಅವರ ಸ್ವೀಡಿಷ್ ಸಹವರ್ತಿ ಟೋಬಿಯಾಸ್ ಬಿಲ್‌ಸ್ಟ್ರೋಮ್ ಜೊತೆಗೆ, ಅವರು ಭಾರತ, ಯುರೋಪ್ ಮತ್ತು ಯುಎಸ್ ಪ್ರತಿನಿಧಿಗಳನ್ನು ಒಟ್ಟುಗೂಡಿಸುವ ಭಾರತ ತ್ರಿಪಕ್ಷೀಯ ವೇದಿಕೆಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಜೈಶಂಕರ್ ಅವರು ಈ ಪ್ರದೇಶದಲ್ಲಿದ್ದಾಗ ಭಾರತ-EU ಸಂಬಂಧಗಳ ಬಗ್ಗೆ ಮಾತನಾಡುತ್ತಾರೆ. ಏಕೆಂದರೆ ಸ್ವೀಡನ್ ಪ್ರಸ್ತುತ EU ಕೌನ್ಸಿಲ್‌ನ ಅಧ್ಯಕ್ಷ ಸ್ಥಾನ ಪಡೆದುಕೊಂಡಿದೆ. 

ಇದನ್ನೂ ಓದಿ: ಕ್ರಿಕೆಟ್‌ ಟೀಂ ಸ್ಟೈಲಲ್ಲಿ ಕ್ಯಾಪ್ಟನ್‌ ಮೋದಿ ಕೆಲಸ: ವಿದೇಶಾಂಗ ಸಚಿವ ಜೈಶಂಕರ್‌ ವಿವರಿಸಿದ್ದು ಹೀಗೆ..

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!