ಅನ್‌ಲಿಮಿಟೆಡ್‌ ಪಾಪ್‌ಕಾರ್ನ್‌ ಬಕೆಟ್‌ 14 ಬಾರಿ ರಿಫಿಲ್ ಮಾಡಿದ ಸ್ನೇಹಿತರ ಗುಂಪು: ವೀಡಿಯೋಗೆ ಸಖತ್ ಕಾಮೆಂಟ್

By Anusha Kb  |  First Published Jan 9, 2025, 3:39 PM IST

ಮಾಲ್‌ಗಳಲ್ಲಿ ದುಬಾರಿಯಾಗಿರುವ ಪಾಪ್‌ಕಾರ್ನ್‌ಗೆ ಚಮತ್ಕಾರದ ಪ್ರತೀಕಾರ ತೀರಿಸಿಕೊಂಡ ಸ್ನೇಹಿತರ ತಂಡದ ವೀಡಿಯೋ ವೈರಲ್ ಆಗಿದೆ. ಅನ್‌ಲಿಮಿಟೆಡ್ ಆಫರ್‌ನಲ್ಲಿ 14 ಬಾರಿ ಪಾಪ್‌ಕಾರ್ನ್ ತುಂಬಿಸಿಕೊಂಡು ಬ್ಯಾಗ್‌ನಲ್ಲಿಯೂ ತುಂಬಿಕೊಂಡ ಘಟನೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


 ಪಾಪ್‌ಕಾರ್ನ್‌ಗೂ ದುಬಾರಿ ಜಿಎಎಸ್‌ಟಿ ಹೇರಿಕೆ ಮಾಡಿದ್ದು ಇತ್ತೀಚೆಗೆ ದೊಡ್ಡ ಸುದ್ದಿಯಾಗಿ ಇಂಟರ್‌ನೆಟ್‌ನಲ್ಲಿ ವಿತ್ತ ಸಚಿವರು ಸಖತ್ ಟ್ರೋಲ್ ಆಗಿದ್ದರು. ಮಾಲ್‌ಗಳಲ್ಲಿ ಸಿನಿಮಾ ನೋಲು ಹೋದರೆ ಅಲ್ಲಿ ಸಿನಿಮಾ ಟಿಕೆಟ್‌ಗಿಂತಲೂ ದುಬಾರಿ ದರ ಅಲ್ಲಿ ಮಾರುವ ಪಾಪ್‌ಕಾರ್ನ್‌ಗಿರುತ್ತದೆ. ಹೀಗಿರುವಾಗ ಕೆಲವು ಮಾಲ್‌ಗಳಲ್ಲಿ ಒಂದಿಷ್ಟು ಹಣ ಪಾವತಿ ಮಾಡಿದರೆ ಅನ್‌ಲಿಮಿಟೆಡ್ ಪಾಪ್‌ಕಾರ್ನ್‌ ನೀಡುವ ಆಫರ್‌ ನೀಡುತ್ತವೆ. ಹೀಗಿರುವಾಗ ಸ್ನೇಹಿತರ ತಂಡವೊಂದು ಈ ಅನ್‌ಲಿಮಿಟೆಡ್ ಪಾಪ್‌ಕಾರ್ನ್‌ಗೆ ಪಾವತಿ ಮಾಡಿ ಆ ಪಾಪ್‌ಕಾರ್ನ್‌ಗೆ ಕೊಡುವ ಹಣಕ್ಕೆ ನ್ಯಾಯ ಒದಗಿಸಿದ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಪಿವಿಆರ್‌ಗಳಲ್ಲಿ ಪಾಪ್‌ಕಾರ್ನ್‌ ಡಬ್ಬಿಗಳು ಎಷ್ಟು ದೊಡ್ಡದಿರುತ್ತದೆ ಎಂಬುದು ನಿಮಗೆ ಗೊತ್ತೆ ಇದೆ. ಇಲ್ಲಿರುವ ವ್ಯಾಪಾರಿ ಮಳಿಗೆಯೊಂದು ನೀಡಿದ ಅನ್‌ಲಿಮಿಟೆಡ್ ಆಫರ್‌ನ್ನು ಸ್ವೀಕರಿಸಿದ ಸ್ನೇಹಿತರ ಬಳಗ ಒಟ್ಟು 14 ಬಾರಿ ಈ ಡಬ್ಬಿಯಲ್ಲಿ ಪಾಪ್‌ಕಾರ್ನ್‌ ತುಂಬಿಸಿಕೊಂಡಿದ್ದು, ತಮ್ಮ ಬಳಿ ಇರುವ ಬ್ಯಾಗ್‌ನಲ್ಲಿ ಕೂಡ ಪಾಪ್‌ಕಾರ್ನ್‌ನ್ನು ತುಂಬಿಸಿಕೊಂಡಿದ್ದಾರೆ. ಈ ವೀಡಿಯೋ ಈಗ ಇಂಟರ್‌ನೆಟ್‌ನಲ್ಲಿ ಸಖತ್ ವೈರಲ್ ಆಗಿದ್ದು, ಅನೇಕ ನೆಟ್ಟಿಗರು ವೀಡಿಯೋಗೆ ಕಾಮೆಂಟ್ ಮಾಡಿದ್ದಾರೆ. ಕನಿಷ್ಠ ಇವರು ಈ ಮಾಲ್‌ಗಳಲ್ಲಿ ಮಾಡುವ ಲೂಟಿಗೆ ನ್ಯಾಯ ಒದಗಿಸಿದರು ಎಂದು ಕಾಮೆಂಟ್ ಮಾಡಿದರೆ. ಮತ್ತೊಬ್ಬರು ಈ ಪಾಪ್‌ಕಾರ್ನ್‌ನ್ನು ಸ್ವಲ್ಪ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಜೊತೆಗೂ ಸ್ವಲ್ಪ ಹಂಚಿಕೊಳ್ಳಿ ಎಂದು ಕಾಮೆಂಟ್ ಮಾಡಿದ್ದಾರೆ. ಇದನ್ನು ನಿರ್ಮಲಾ ಅವರು ನೋಡಿದರೆ ಪಕ್ಕಾ ಟಾಕ್ಸ್ ಹಾಕುತ್ತಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

 
 
 
 
 
 
 
 
 
 
 
 
 
 
 

Tap to resize

Latest Videos

A post shared by Pop Keeda By Sumit Kumar (@popkeeda)

 

ಈ ಹಿಂದೆ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಸಾರ್ಥಕ್ ಸಚ್ದೇವ್ ಎಂಬುವವರು ಕೂಡ ಇದೇ ರೀತಿ ಕಿತಾಪತಿಯನ್ನು ತಮ್ಮ ಸ್ನೇಹಿತರ ಜೊತೆಗೂಡಿ ಪಿವಿಆರ್‌ನಲ್ಲಿ ಮಾಡಿದ್ದರು. ಇವರು ಮೊದಲು ತೆಗೆದುಕೊಂಡಿದ್ದ ಪಾಪ್‌ಕಾರ್ನ್ ಬಕೆಟ್‌ ಇಂಟರ್ವಲ್‌ ವೇಳೆ ಖಾಲಿಯಾಗಿತ್ತು. ಇದಾದ ನಂತರ ಇವರು ಹಾಗೂ ಸ್ನೇಹಿತರು ಮತ್ತೆ ಹೋಗಿ ಬಕೆಟ್ ತುಂಬಿಸಿಕೊಂಡು ಬಂದಿದ್ದರು. ಇದಾದ ನಂತರ ಮತ್ತೆ ಮೂರು ಬಾರಿ ಈ ಪಾಪ್‌ಕಾರ್ನ್ ಬಕೆಟ್ ತುಂಬಿಸಿಕೊಂಡು ಬಂದಿದ್ದರು. ಬರೀ ಇಷ್ಟೇ ಅಲ್ಲ ಇವರು ತಮ್ಮ ಜೊತೆಗಿದ್ದ ಬ್ಯಾಗ್‌ನಲ್ಲಿಯೂ ಈ ಪಾಪ್‌ಕಾರ್ನನ್ನು ತುಂಬಿಸಿಕೊಂಡು ಬಂದಿದ್ದು, ಅಂದಾಜು ಮೂರು ಕೇಜಿಯಷ್ಟು ಪಾಪ್‌ಕಾರ್ನನ್ನು ವಸೂಲಿ ಮಾಡುವಲ್ಲಿ ಯಶಸ್ವಿಯಾಗಿದ್ದರು. ಸಿನಿಮಾ ಮುಗಿಸಿ ಥಿಯೇಟರ್‌ನಿಂದ ಹೊರಗೆ ಬಂದ ಈ ಹುಡುಗರು ಬಳಿಕ ಹೊರಗಿದ್ದವರಿಗೆ ತಮ್ಮ ಬ್ಯಾಗ್‌ನಲ್ಲಿ ತುಂಬಿಕೊಂಡು ಬಂದ ಈ ಪಾಪ್‌ಕಾರ್ನನ್ನು ಹಂಚಿದ್ದರು.  ಈ ವೀಡಿಯೋವನ್ನು ಲಕ್ಷಾಂತರ ಜನ ವೀಕ್ಷಿಸಿದ್ದರು. 

ನೀವು ಈ ದುಬಾರಿ ಪಾಪ್‌ಕಾರ್ನ್ ಮೇಲೆ ಪ್ರತೀಕಾರ ತೀರಿಸಿಕೊಂಡಿದ್ದೀರಿ ಎಂದು ವೀಡಿಯೋ ನೋಡಿದ ಜನ ಕಾಮೆಂಟ್ ಮಾಡಿದ್ದರು. ಪ್ರತಿದಿನ ಈ ದುಬಾರಿ ಪಾಪ್‌ಕಾರ್ನ್‌ಗೆ ನಮ್ಮಂತ ಲಕ್ಷಾಂತರ ಜನ ಪಾವತಿ ಮಾಡುತ್ತಾರೆ. ಇದನ್ನು ನೋಡಿದ ನಂತರ ನನಗೆ ತುಂಬಾ ಸಂತೋಷವಾಯಿತು. ಅವರು ಇದನ್ನು ತುಂಬಾ ದುಬಾರಿ ಬೆಲೆಗೆ ಮಾರಾಟ ಮಾಡುತ್ತಾರೆ ಮತ್ತು ನಾವು ಇದು ರುಚಿಕರವಾಗಿರುವುದರಿಂದ ಖರೀದಿಸುತ್ತೇವೆ. ಆದರೆ ಈ ವೀಡಿಯೋ ನೋಡಿದಾಗ, ನೀವು ನಮ್ಮೆಲ್ಲರಿಗಾಗಿ ತಿಂದಿದ್ದೀರಿ ಎಂದು ನನಗೆ ಅನಿಸುತ್ತದೆ ಎಂದು ಒಬ್ಬ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ.

 

click me!