ಗರ್ಲ್‌ಫ್ರೆಂಡ್ ಒಂದೇ ಒಂದು ಗಿಫ್ಟ್ ಕೇಳಿದ್ದಕ್ಕೆ ಪ್ರೇಮಿ ಮಾಡಿದ 'ಆ' ಕೆಲಸ ಕೇಳಿದ್ರೆ ಶಾಕ್ ಆಗ್ತೀರಾ!

Published : Jun 07, 2026, 03:22 PM IST
Costly love story Nagpur crime news

ಸಾರಾಂಶ

Costly love story Nagpur crime news: ಪ್ರೀತಿಯಲ್ಲಿ ಬಿದ್ದಾಗ ಹುಡುಗರು ತಮಗೆ ಇಷ್ಟ ಬಂದ ಹಾಗೆ ಆಡೋದು ಕಾಮನ್. ಗರ್ಲ್‌ಫ್ರೆಂಡ್‌ಗೆ ಚಾಕೊಲೇಟ್, ಡ್ರೆಸ್, ಇಲ್ಲಾಂದ್ರೆ ಒಂದು ರೋಸ್ ಕೊಟ್ಟು ಇಂಪ್ರೆಸ್ ಮಾಡ್ತಾರೆ. ಆದ್ರೆ ಇಲ್ಲೊಬ್ಬ 'ರೋಮಿಯೋ', ತನ್ನ ಪ್ರೇಯಸಿ ಕೇಳಿದ ಕೇವಲ ಒಂದೇ ಒಂದು ಐಷಾರಾಮಿ ಗಿಫ್ಟ್‌ಗಾಗಿ ಮಾಡಬಾರದ ಕೆಲಸ ಮಾಡಿದ್ದಾನೆ! 

ಪ್ರೀತಿಲಿ ಬಿದ್ದಾಗ ಪ್ರೇಮಿಗಳು ತಮ್ಮ ಗರ್ಲ್‌ಫ್ರೆಂಡ್ಸ್ ಖುಷಿಗಾಗಿ ಏನೆಲ್ಲಾ ಮಾಡ್ತಾರೆ ಅಲ್ವಾ? ಅವರಿಷ್ಟದ ಚಾಕೊಲೇಟ್, ಡ್ರೆಸ್ ಕೊಡಿಸೋದು ಕಾಮನ್. ಆದರೆ ಇಲ್ಲೊಬ್ಬ ಪ್ರೇಮಿ, ತನ್ನ ಗರ್ಲ್‌ಫ್ರೆಂಡ್ ಕೇಳಿದ ಕೇವಲ ಒಂದೇ ಒಂದು ಐಷಾರಾಮಿ ಗಿಫ್ಟ್‌ಗಾಗಿ ಮಾಡಬಾರದ ಕೆಲಸ ಮಾಡಿದ್ದಾನೆ! ತನ್ನ ಇಬ್ಬರು ಸ್ನೇಹಿತರ ಜೊತೆ ಸೇರಿ ಇಡೀ ನಗರವೇ ಬೆಚ್ಚಿಬೀಳುವಂತಹ ಸ್ಕೆಚ್ ಹಾಕಿದ್ದಾನೆ. ಇಷ್ಟಕ್ಕೂ ಆಕೆ ಕೇಳಿದ ದುಬಾರಿ ಗಿಫ್ಟ್ ಆದ್ರೂ ಏನು? ಅದಕ್ಕಾಗಿ ಈ ರೋಮಿಯೋಗಳು ಮಾಡಿದ್ದೇನು ಗೊತ್ತಾ? ಆ ರೋಚಕ ಕಥೆ ಇಲ್ಲಿದೆ ನೋಡಿ.

ಗರ್ಲ್‌ಫ್ರೆಂಡ್ ಒತ್ತಡಕ್ಕೆ ಕಳ್ಳರಾದ ಹುಡುಗರು!

ಇಂತಹದ್ದೊಂದು ವಿಚಿತ್ರ ಮತ್ತು ಶಾಕಿಂಗ್ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಇಲ್ಲಿನ ಇಬ್ಬರು ಅಪ್ರಾಪ್ತರು ಸೇರಿದಂತೆ ಮೂವರು ಹುಡುಗರು ತಮ್ಮ ಗರ್ಲ್‌ಫ್ರೆಂಡ್ಸ್‌ಗೆ ಬ್ರ್ಯಾಂಡ್ ನ್ಯೂ ಐಫೋನ್ (iPhone) ಗಿಫ್ಟ್ ನೀಡಿ ಇಂಪ್ರೆಸ್ ಮಾಡಲು ಪ್ಲಾನ್ ಮಾಡಿದ್ದರು. ಅದರಲ್ಲಿ ಒಬ್ಬ ಅಪ್ರಾಪ್ತ ಹುಡುಗನಿಗೆ ಆತನ ಗರ್ಲ್‌ಫ್ರೆಂಡ್ "ನನಗೆ ಐಫೋನ್ ಬೇಕೇ ಬೇಕು" ಎಂದು ತೀವ್ರ ಒತ್ತಡ ಹಾಕಿದ್ದಾಳೆ. ಕೈಯಲ್ಲೋ ಕಾಸಿಲ್ಲ, ಗರ್ಲ್‌ಫ್ರೆಂಡ್ ಆಸೆಯನ್ನೂ ಬಿಡುವಂತಿಲ್ಲ! ಕೊನೆಗೆ ಗೆಳತಿಯ ಪ್ರೀತಿಗಾಗಿ ಈ ಹುಡುಗರು ಕಳ್ಳರಾಗಲು ನಿರ್ಧರಿಸಿದ್ದಾರೆ.

ಹಣಕ್ಕಾಗಿ ಹುಡುಕುತ್ತಿದ್ದ ಈ ರೋಮಿಯೋಗಳ ಕಣ್ಣಿಗೆ ಬಿದ್ದಿದ್ದೇ ನಾಗ್ಪುರದ ಕಲಮ್ನಾ ಪ್ರದೇಶದಲ್ಲಿದ್ದ 'ರಾಹುಲ್ ಸೆರಾಮಿಕ್ಸ್ ಪ್ರೈವೇಟ್ ಲಿಮಿಟೆಡ್' ಒಡೆತನದ ಐಷಾರಾಮಿ ಗೋದಾಮು. ಮೇ 27-28 ರ ಮಧ್ಯರಾತ್ರಿ ಮೂವರೂ ಸೇರಿ ಸಿನಿಮಾ ಸ್ಟೈಲ್‌ನಲ್ಲಿ ಆ ಗೋದಾಮಿನ ಎರಡನೇ ಮಹಡಿಯ ಟಿನ್ ಮೇಲ್ಛಾವಣಿಯನ್ನು ಕತ್ತರಿಸಿ ಒಳನುಗ್ಗಿದ್ದಾರೆ.

ಅಲ್ಲಿಂದ ಅವರು ಕದ್ದಿದ್ದು ದುಡ್ಡನ್ನಲ್ಲ, ಬದಲಿಗೆ ಮನೆಬಳಕೆಯ ಮತ್ತು ಕೃಷಿಗೆ ಬಳಸುವ ಐಷಾರಾಮಿ ಡಿಸೈನರ್ ನಲ್ಲಿಗಳನ್ನು (Faucets)! ಬರೋಬ್ಬರಿ 11.39 ಲಕ್ಷ ರೂಪಾಯಿ ಮೌಲ್ಯದ ಸ್ಯಾನಿಟರಿ ಫಿಟ್ಟಿಂಗ್ಸ್‌ಗಳನ್ನು ಮೂಟೆಗೆ ತುಂಬಿಕೊಂಡು ಜೂಟ್ ಆಗಿದ್ದಾರೆ. ನಲ್ಲಿಗಳನ್ನು ಮಾರಿ ಆ ಹಣದಿಂದ ಗರ್ಲ್‌ಫ್ರೆಂಡ್‌ಗೆ ಐಫೋನ್ ಕೊಡುವುದು ಇವರ ಐಡಿಯಾ ಆಗಿತ್ತು!

25 ಸಿಸಿಟಿವಿಗಳು ಮತ್ತು ಪೊಲೀಸರ ಎಂಟ್ರಿ

ಗೋದಾಮಿನ ಮಾಲೀಕ ರಾಹುಲ್ ಜೈಚಂದ್ ಅವರು ಮೇಲ್ಛಾವಣಿ ಕತ್ತರಿಸಿರುವುದನ್ನು ನೋಡಿ ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಅಲರ್ಟ್ ಆದ ಕಲಮ್ನಾ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸಂತೋಷ್ ಕುಮಾರ್ ರಾಮ್‌ಲೋಡ್ ನೇತೃತ್ವದ ಟೀಮ್ ಕಾರ್ಯಾಚರಣೆಗಿಳಿದಿದೆ. ಇಡೀ ನಗರದಾದ್ಯಂತ ಇದ್ದ 25 ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಜಾಲಾಡಿದ ಪೊಲೀಸರು ಕೊನೆಗೂ ಕಳ್ಳರ ಅಡಗುದಾಣ ಪತ್ತೆಹಚ್ಚಿ, ಯಶೋಧರಾನಗರದ ಇರ್ಫಾನ್ ಅಲಿ ಮತ್ತು ಇಬ್ಬರು ಅಪ್ರಾಪ್ತರನ್ನು ಹಿಡಿದು ಒಳಗಿಟ್ಟಿದ್ದಾರೆ.

ವಿಚಾರಣೆ ವೇಳೆ ಹುಡುಗರು, "ನಾವು ಇದನ್ನೆಲ್ಲಾ ಮಾಡಿದ್ದು ನಮ್ಮ ಗರ್ಲ್‌ಫ್ರೆಂಡ್ಸ್‌ಗೆ ಐಫೋನ್ ಕೊಡಿಸೋಕೆ ಸರ್" ಅಂತ ಒಪ್ಪಿಕೊಂಡಾಗ ಪೊಲೀಸರೇ ಒಂದು ಕ್ಷಣ ತಲೆ ಕೆರೆದುಕೊಂಡಿದ್ದಾರೆ! ಸದ್ಯ ಕಳುವಾಗಿದ್ದ ಎಲ್ಲಾ ಲಕ್ಷಾಂತರ ರೂಪಾಯಿ ಮೌಲ್ಯದ ನಲ್ಲಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಪ್ರೇಮಿಗಳು ಈಗ ಕಂಬಿ ಎಣಿಸುತ್ತಿದ್ದಾರೆ.

ಪ್ರತಿ ಬಾರಿಯೂ ಹೊಸ ಕಾರನ್ನು ಕದಿಯುತ್ತಿದ್ದ ಭೂಪ

ಕೆಲವು ವರ್ಷಗಳ ಹಿಂದೆ ದೆಹಲಿಯಲ್ಲಿ ಒಬ್ಬ ಹೈಟೆಕ್ ಕಳ್ಳ ಸಿಕ್ಕಿಬಿದ್ದಿದ್ದ. ಆತ ಬಿಎಂಡಬ್ಲ್ಯು, ಆಡಿ, ಮರ್ಸಿಡಿಸ್‌ನಂತಹ ಬರೋಬ್ಬರಿ 26 ಐಷಾರಾಮಿ ಕಾರುಗಳನ್ನು ಕದ್ದಿದ್ದ. ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಶಾಕಿಂಗ್ ಸತ್ಯ ಹೊರಬಂದಿತ್ತು. ಆತನ ಗರ್ಲ್‌ಫ್ರೆಂಡ್‌ಗೆ ಐಷಾರಾಮಿ ಕಾರುಗಳಲ್ಲಿ ಲಾಂಗ್ ಡ್ರೈವ್ ಹೋಗುವುದೆಂದರೆ ಸಖತ್ ಇಷ್ಟವಂತೆ! ಆಕೆಯನ್ನು ಇಂಪ್ರೆಸ್ ಮಾಡಲು ಮತ್ತು ಐಶಾರಾಮಿ ಹೋಟೆಲ್‌ಗಳಿಗೆ ಕರೆದೊಯ್ಯಲು ಆತ ಪ್ರತಿ ಬಾರಿಯೂ ಹೊಸ ಕಾರನ್ನು ಕದಿಯುತ್ತಿದ್ದ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Instagram ಬಳಕೆದಾರರಿಗೆ, ರೀಲ್ಸ್‌ ಅಪ್ಲೋಡ್‌ ಮಾಡೋರು ಇನ್ಮುಂದೆ 299 ರೂ. ಕೊಡ್ಬೇಕು! ಹೊಸ ಫೀಚರ್‌ ಜಾರಿಗೆ!
Kottiyoor Temple: ಸತಿದೇವಿ ಪ್ರಾಣ ಬಿಟ್ಟ ಸ್ಥಳದಲ್ಲಿ ನೂಕು ನುಗ್ಗುಲು, ಗೂಂಡಾಗಿರಿ, ಕನ್ನಡಿಗರಿಗೆ ಕ್ಯಾರೆ ಎನ್ನಲ್ಲ!