ಕೇಂದ್ರ ಚುನಾವಣಾ ಆಯುಕ್ತರ ನೇಮಕ ಪ್ರಕ್ರಿಯೆಗೆ ಸುಪ್ರೀಂಕೋರ್ಟ್‌ ತೀವ್ರ ಅತೃಪ್ತಿ

By Kannadaprabha NewsFirst Published Nov 24, 2022, 12:04 AM IST
Highlights
  •  ಚುನಾವಣಾ ಆಯುಕ್ತರ ನೇಮಕಪ್ರಕ್ರಿಯೆ ದಾಖಲೆ ಕೇಳಿದ ಸುಪ್ರೀಂ
  • ಅರುಣ್‌ ಗೋಯಲ್‌ ತರಾತುರಿ ನೇಮಕ ಬೆನ್ನಲ್ಲೇ ಸೂಚನೆ
  • ನೇಮಕದಲ್ಲಿ ‘ಕೈಚಳಕ’ ನಡೆದಿದೆಯೇ ನೋಡಬೇಕು: ಪೀಠ

ನವದೆಹಲಿ (ನ.23) : ಕೇಂದ್ರ ಚುನಾವಣಾ ಆಯೋಗದ ಆಯುಕ್ತರನ್ನಾಗಿ ಇತ್ತೀಚೆಗೆ ಅರುಣ್‌ ಗೋಯಲ್‌ ಅವರನ್ನು ನೇಮಕ ಮಾಡಿದ ಪ್ರಕ್ರಿಯೆ ಕುರಿತು ದಾಖಲೆಗಳನ್ನು ತನಗೆ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಚ್‌ ಬುಧವಾರ ಸೂಚಿಸಿದೆ. ಸುಪ್ರೀಂ ಕೋರ್ಚ್‌ನ ಈ ನಡೆ ಸಂಚಲನಕ್ಕೆ ಕಾರಣವಾಗಿದೆ.

‘ಚುನಾವಣಾ ಆಯುಕ್ತರ ನೇಮಕಕ್ಕೂ ಕೊಲಿಜಿಯಂ ರೀತಿಯ ವ್ಯವಸ್ಥೆ ಬೇಕು’ ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸುತ್ತಿರುವ ನ್ಯಾ.ಎಂ.ಕೆ.ಜೋಸೆಫ್‌ ನೇತೃತ್ವದ ಪಂಚ ಸದಸ್ಯರ ಸಾಂವಿಧಾನಕ ಪೀಠ, ‘ಗೋಯಲ್‌ ನೇಮಕದಲ್ಲಿ ಯಾವುದೇ ‘ಕೈಚಳಕ’ ನಡೆದಿದೆಯೇ ಎಂಬುದನ್ನು ಪರಿಶೀಲಿಸುವ ಸಲುವಾಗಿ ನಮಗೆ ನೇಮಕಾತಿ ಕುರಿತ ಎಲ್ಲಾ ದಾಖಲೆಗಳನ್ನು ಸಲ್ಲಿಸಿ’ ಎಂದು ಪ್ರಕರಣದಲ್ಲಿ ಕೇಂದ್ರ ಸರ್ಕಾರದ ಪರವಾಗಿ ಹಾಜರಾಗಿದ್ದ ಅಟಾರ್ನಿ ಜನರಲ್‌ ಆರ್‌.ವೆಂಕಟರಮಣಿ ಅವರಿಗೆ ಸೂಚಿಸಿತು.

 

Note Ban: 500, 1000 ರೂಪಾಯಿಯ ನೋಟು ಬಳಕೆ ಏರಿದ್ದಕ್ಕೆ ನಿಷೇಧ!

ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಟಾರ್ನಿ ಜನರಲ್‌ ‘ಸಾಂವಿಧಾನಿಕ ಪೀಠವು, ಚುನಾವಣಾ ಆಯುಕ್ತರು ಮತ್ತು ಮುಖ್ಯ ಚುನಾವಣಾ ಆಯುಕ್ತರ ನೇಮಕದ ಕುರಿತ ವಿಸ್ತೃತ ವಿಷಯದ ಕುರಿತು ವಿಚಾರಣೆ ನಡೆಸುತ್ತಿರುವಾಗ ವಕೀಲ ಪ್ರಶಾಂತ್‌ ಭೂಷಣ್‌ ಪ್ರಸ್ತಾಪಿಸಿರುವ ವೈಯಕ್ತಿಕ ಪ್ರಕರಣದ ಬಗ್ಗೆ ಪರಿಶೀಲಿಸುವುದು ಸರಿಯಲ್ಲ’ ಎಂದರು.

ವಿಆರ್‌ಎಸ್‌ ಮರುದಿನವೇ ನೇಮಕ ಹೇಗೆ?:

ಈ ವೇಳೆ ಮಧ್ಯಪ್ರವೇಶಿಸಿದ ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌, ‘ಅರುಣ್‌ ಗೋಯಲ್‌ ಅವರು ಗುರುವಾರದವರೆಗೂ ಸರ್ಕಾರದಲ್ಲಿ ಕಾರ್ಯದರ್ಶಿ ಮಟ್ಟದ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಏಕಾಏಕಿ ಅವರಿಗೆ ಸ್ವಯಂನಿವೃತ್ತಿ ನೀಡಿ, ಶುಕ್ರವಾರ ಅವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ. ಇದು ಹೇಗೆ?’ ಎಂದು ಪೀಠದ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಜೋಸೆಫ್‌, ‘ನಮಗೆ ಗೊತ್ತಿರುವಾಗ ಹಾಗೆ ಸ್ವಯಂ ನಿವೃತ್ತಿ ಪ್ರಕ್ರಿಯೆಗೆ ಕನಿಷ್ಠ 3 ತಿಂಗಳು ಬೇಕು’ ಎಂದರು

ಬಲವಂತದ ಮತಾಂತರ ದೇಶಕ್ಕೆ ಅಪಾಯ: ಸುಪ್ರೀಂ

ಜೊತೆಗೆ, ‘ಗೋಯಲ್‌ ನೇಮಕದಲ್ಲಿ ಎಲ್ಲವೂ ಕಾನೂನು ಬದ್ಧವಾಗಿದೆ ನಡೆದುಕೊಳ್ಳಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಹೀಗಾಗಿ ಅವರ ಆಯ್ಕೆಗೆ ಯಾವ ವ್ಯವಸ್ಥೆಯನ್ನು ಪಾಲಿಸಲಾಗಿದೆ ಎಂಬುದನ್ನು ನಾವು ನೋಡಬಯಸುತ್ತೇವೆ. ನಾವು ಇದನ್ನೇನೂ ನಮಗೆ ವಿರುದ್ಧವಾಗಿ ನಡೆದುಕೊಂಡ ಪ್ರಕರಣ ಎಂದು ಪರಿಗಣಿಸುವುದಿಲ್ಲ, ಬದಲಾಗಿ ಅದನ್ನು ನಮ್ಮ ದಾಖಲೆಯಾಗಿ ಬಳಸಿಕೊಳ್ಳುತ್ತೇವೆ. ನೇಮಕಾತಿಯಲ್ಲಿ ಎಲ್ಲವೂ ಕಾನೂನು ಬದ್ಧವಾಗಿದೆ ಎಂಬ ನಿಮ್ಮ ಹೇಳಿಕೆಯನ್ನು ಖಚಿತಪಡಿಸಿಕೊಳ್ಳುತ್ತೇವೆ. ನಾಳೆ ನಮಗೆ ಆ ಕುರಿತ ದಾಖಲೆಗಳನ್ನು ಸಲ್ಲಿಸಿ’ ಎಂದು ಅಟಾರ್ನಿ ಜನರಲ್‌ಗೆ ಸೂಚಿಸಿತು.

click me!