
ನವದೆಹಲಿ (ಜೂ.13): ಕೇಂದ್ರ ಸರ್ಕಾರ 2027ರಲ್ಲಿ ನಡೆಸಲಿರುವ ರಾಷ್ಟ್ರೀಯ ಜನಗಣತಿಯು ಭಾರತದ ಪಾಲಿಗೆ ಮೊದಲ ಸಂಪೂರ್ಣ ಡಿಜಿಟಲ್ ಜನಗಣತಿ ಆಗಿರಲಿದೆ. ಈ ಜನ ಗಣತಿಯ ಅಂತಿಮ ಅಂಕಿ-ಅಂಶಗಳು 9 ತಿಂಗಳೊಳಗೇ ಸರ್ಕಾರದ ಕೈಸೇರುವ ನಿರೀಕ್ಷೆ ಇದೆ. ಅಂದರೆ ಅದೇ ವರ್ಷದ ಅಂತ್ಯದಲ್ಲಿ ಜನಗಣತಿಯ ಸಂಪೂರ್ಣ ಅಂಕಿ-ಅಂಶಗಳು ಸಿದ್ಧವಾಗಲಿವೆ. ಮೊಬೈಲ್ ಆ್ಯಪ್‌ನಂಥ ತಂತ್ರ ಜ್ಞಾನ ಬಳಸಿ ಈ ಕಾರ್ಯ ಮಾಡುವ ಹಿನ್ನೆಲೆ ಯಲ್ಲಿ ಈ ಬದಲಾವಣೆ ಸಾಧ್ಯವಾಗಲಿದೆ. ಈ ಹಿಂದೆ ಜನಗಣತಿ ಅಂಕಿ-ಅಂಶಗಳು ಬಹಿರಂಗವಾಗಬೇಕಿದ್ದರೆ ಸಾಕಷ್ಟು ಸಮಯ ಕಾಯಬೇಕಿತ್ತು. 2011ರ ಜನಗಣತಿ ಮಾಹಿತಿಯನ್ನು ಒಟ್ಟು ಗೂಡಿಸಲು ಸುಮಾರು 2 ವರ್ಷಗಳಷ್ಟು ಸುದೀರ್ಘ ಹಿಡಿದಿತ್ತು. ಆದರೆ, ಈ ಬಾರಿ ತಂತ್ರಜ್ಞಾನ ಬಳಸಿಕೊಂಡು ಜನಗಣತಿ ಮಾಡು ತಿರುವ ಕಾರಣ ಅಂಕಿ-ಅಂಶಗಳ ಸಂಗ್ರಹ ಸಲೀಸಾಗಲಿದೆ ಎಂದು ಮೂಲಗಳು ತಿಳಿಸಿವೆ.
ಎರಡು ಹಂತದ ಪ್ರಕ್ರಿಯೆ: ಕೇಂದ್ರ ಸರ್ಕಾರ 2027ರ ಮಾರ್ಚ್‌ನಲ್ಲಿ ಜನಗಣತಿ ನಡೆಸುವು ದಾಗಿ ತಿಳಿಸಿದೆ. ಈ ಜನಗಣತಿ ಪ್ರಕ್ರಿಯೆ ಎರಡು ಹಂತದಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ ಮನೆಗಳ ಪಟ್ಟಿ ಸಿದ್ದಪಡಿಸುವ ಕಾರ್ಯ ನಡೆಯಲಿದೆ. 2026ರಲ್ಲೇ ಈ ಪ್ರಕ್ರಿಯೆ ಆರಂಭವಾ ಗಲಿದ್ದು, ಈ ವೇಳೆ ಮನೆ ಹಾಗೂ ಕುಟುಂಬಗಳ ಗಣತಿ ಕಾರ್ಯ ನಡೆಯಲಿದೆ. ಎರಡನೇ ಹಂತದಲ್ಲಿ ಜನಸಂಖ್ಯಾ ಗಣತಿ ನಡೆಯಲಿದೆ. ಇದು 2027ರ ಫೆಬ್ರವರಿಯಲ್ಲಿ ಆರಂಭ ವಾಗಲಿದೆ. ಈ ವೇಳೆ ಹೆಸರು, ವಯಸ್ಸು, ಲಿಂಗ, ಶಿಕ್ಷಣ, ಆದಾಯ ಮತ್ತಿತರ ವ್ಯಕ್ತಿಗತ ವಿಚಾರಗಳನ್ನು ಸಂಗ್ರಹಿಸಲಾಗುತ್ತದೆ.
ಮೊದಲ ಬಾರಿಗೆ ಹೈಟೆಕ್: 20270 ಜನಗಣತಿಯು ದೇಶದ ಮೊದಲ ಹೈಟೆಕ್ ಜನಗಣತಿಯಾಗಿದೆ. ಇದಕ್ಕೆಂದೇ ಹಿಂದಿ, ಇಂಗ್ಲಿಷ್ ಮತ್ತು 14 ಸ್ಥಳೀಯ ಭಾಷೆಗಳಲ್ಲಿ ಆಪ್‌ವೊಂದನ್ನು ಸಿದ್ದಪಡಿಸಲಾಗಿದೆ. ಇದೊಂದು ಬಳಕೆದಾರರ ಸ್ನೇಹಿ ಮೊಬೈಲ್ ಆ್ಯಪ್ ಆಗಿದ್ದು, ಜನ ಕೂಡ ಈ ಆ್ಯಪ್‌ನಲ್ಲಿರುವ ಮಾಹಿತಿಯನ್ನು ಸ್ವಯಂ ಆಗಿ ಬದಲಾಯಿಸಲುಅವಕಾಶ ಮಾಡಿಕೊಡಲಾಗಿದೆ. ಈ ರೀತಿ ಸಂಗ್ರಹಿಸಿದ ಮಾಹಿತಿಯನ್ನು ಆಧುನಿಕ ಪ್ರೊಸೆಸಿಂಗ್ ಪ್ರಕ್ರಿಯೆ ತಂತ್ರಜ್ಞಾನ ಬಳಸಿ ಅಪ್‌ಡೇಟ್ ಮಾಡಲಾಗುತ್ತದೆ. ಮೊಬೈಲ್ ಆ್ಯಪ್‌ನಲ್ಲಿ ಫ್ರೀ ಕೋಡೆಡ್ ಪ್ರತಿಕ್ರಿಯೆಗಳನ್ನು ಶೇಖರಿಸಲಾಗಿರುತ್ತದೆ. ಅಲ್ಲದೆ, ಇದರಲ್ಲಿ ಗಣತಿಗೂ ಮೊದಲೇ ಮನೆಗಳ ದಾಖಲೆಗಳನ್ನು ತುಂಬಿಸಿರಲಾಗಿರುತ್ತದೆ.
ಜತೆಗೆ ಈ ಮಾಹಿತಿಯನ್ನು ಎಡಿಟ್ ಮಾಡಲೂ ಅವಕಾಶ ಇರುತ್ತದೆ. ಇದರಿಂದ ಗಣತಿದಾರರ ಸಮಯ, ಶ್ರಮ ಉಳಿತಾಯವಾಗುತ್ತದೆ. ಇನ್ನು ಮೊದಲ ಬಾರಿಗೆ ಪ್ರತ್ಯೇಕ ಕೋಡ್ ಡಿಕ್ಷನರಿಯನ್ನೂ ಗಣತಿದಾ ರರಿಗೆ ಒದಗಿಸುತ್ತಿರುವುದು ಈ ಬಾರಿಯ ಗಣತಿಯ ವಿಶೇಷ. 2ನೇ ಹಂತದಲ್ಲಿ ಇದು ಗಣತಿದಾ ರರಿಗೆ ಅನುಕೂಲ ಮಾಡಿಕೊಡಲಿದೆ. ವಿವರಣಾತ್ಮಕ ಮತ್ತು ಅಂಕಿ-ಸಂಖ್ಯೆ ರಹಿತ ಉತ್ತರಗಳನ್ನು ದಾಖಲಿಸು ವುದು ಇದರಿಂದ ಸುಲಭವಾಗಲಿದೆ. ಪ್ರತಿ ಸಂಭಾವ್ಯ ಉತ್ತರಕ್ಕೂ ಮೊದಲೇ ಕೋಡ್ ಳನ್ನು ಸಿದ್ಧಪಡಿಸುವುದರಿಂದ ಡಿಜಿಟಲ್ ರೂಪ ದಲ್ಲಿ ದಾಖಲೆಗಳ ಸಂಗ್ರಹ ಸುಲಭವಾಗಲಿದೆ. ಇದರಿಂದ ಡೇಟಾಗಳ ಪ್ರೊಸೆಸಿಂಗ್ ಪ್ರಕ್ರಿಯೆ ಯಲ್ಲಿ ವಿಳಂಬವಾಗುವುದು ತಪ್ಪಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ