* ಕರ್ನಾಟಕದ 17 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸೇರಿ, 10 ರಾಜ್ಯಗಳ 54 ಜಿಲ್ಲಾಧಿಕಾರಿ ಗಳ ಜೊತೆ ಮೋದಿ ಸಭೆ
* ಜಿಲ್ಲಾಧಿಕಾರಿಗಳ ಕಾರ್ಯವೈಖರಿಗೆ ಶಹಬ್ಬಾಸ್ ಎಂದ ಮೋದಿ
* ಲಾಕ್‌ಡೌನ್ ನಿರ್ಧಾರ ಜಿಲ್ಲಾಧಿಕಾರಿಗಳ ಹೆಗಲಿಗೆ
ನವದೆಹಲಿ(ಮೇ.18): ದೇಶ, ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ತಾಂಡವವಾಡುತ್ತಿದೆ. ಈ ಬಾರಿ ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ಹೆಚ್ಚುತ್ತಿವೆ. ಹೀಗಿರುವಾಗ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ 17 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸೇರಿ, 10 ರಾಜ್ಯಗಳ 54 ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಹೀಗಿರುವಾಗ ಜಿಲ್ಲೆಯಲ್ಲಿರುವ ಪರಿಸ್ಥಿತಿ, ಅದರ ನಿಯಂತ್ರಣಕ್ಕೆ ತೆಗೆದುಕೊಂಡ ಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ಸಭೆಯಲ್ಲಿ ಪ್ರಧಾನಿ ಮೋದಿ ಜಿಲ್ಲಾಧಿಕಾರಿಗಳ ಕಾರ್ಯವೈಖರಿಗೆ ಶಹಬ್ಬಾಸ್ ಎಂದಿದ್ದಾರೆ.
undefined
ಸಭೆ ಬಳಿಕ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಈ ವೇಳೆ ಜಿಲ್ಲಾಧಿಕಾರಿಗಳಿಗೆ ಕೆಲ ಕಿವಿ ಮಾತುಗಳನ್ನು ಹೇಳಿದ್ದಾರೆ. ಮೋದಿ ಭಾಷಣದ ಮುಖ್ಯಾಂಶಗಳು ಹೀಗಿದೆ.
* ಕೊರೋನಾ ಕಾಲದಲ್ಲಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ತಮ್ಮ ಮನೆಗೂ ಭೇಟಿ ನೀಡಲು ಅವರಿಗೆ ಸಮಯ ಸಿಗುತ್ತಿಲ್ಲ. ಇಂತಹ ಜಿಲ್ಲಾಧಿಕಾರಿಗಳ ಅನುಭವ ಹಾಗೂ ಜಿಲ್ಲಾ ಮಟ್ಟದಲ್ಲಿ ಕೊರೋನಾ ಪರಿಸ್ಥಿತಿ ಹೇಗಿದೆ ಎಂಬುವುದನ್ನು ತಿಳಿಯುವ ಅವಕಾಶ ಸಿಕ್ಕಿತು.
ಕೊರೋನಾದಿಂದ ಅನಾಥರಾದ ಮಕ್ಕಳ ಪುನರ್ವಸತಿಗೆ ಕೇಂದ್ರದ ನಿಯಮ!
* ಡಿಸಿಗಳು ತಮ್ಮ ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಿಸಲು ಹೊಸ ಪ್ರಯತ್ನ ಮಾಡುತ್ತಿದ್ದಾರೆ, ಹೊಸ ದಾರಿ ಕಂಡುಕೊಳ್ಳುತ್ತಿದ್ದಾರೆ. ಇದರಲ್ಲಿರುವ ಉತ್ತಮ ಯೋಜನೆಗಳನ್ನು ಬೇರೆ ಜಿಲ್ಲೆಗಳಿಗೂ ಸೂಚಿಸಿ ಅಲ್ಲೂ ಜಾರಿಗೊಳ್ಳುವಂತೆ ಮಾಡುವೆ. ನಿನ್ನ ಪ್ರಯತ್ನಕ್ಕೆ ನನ್ನ ಪ್ರಶಂಸೆ ಇದೆ. ಹಲವು ಡಿಸಿಗಳ ಜೊತೆ ಮಾತನಾಡಲು ಆಗಲಿಲ್ಲ. ಇಂತಹವರು ನಿಮ್ಮ ಯೋಜನೆಗಳನ್ನು ಬರೆದು ನನಗೆ ಕಳುಹಿಸಿ. ನಾನು ಪರಿಶೀಲಿಸುವೆ.
* ನಿಮ್ಮ ಜಿಲ್ಲೆಯ ಸವಾಲುಗಳನ್ನು ಸಮರ್ಥವಾಗಿ ಎದುರಿಸಿದ್ದೀರಿ. ಜಿಲ್ಲಾ ಮಟ್ಟದಲ್ಲಿ ಕೊರೋನಾ ಗೆದ್ದರೆ ಇಡೀ ದೇಶವೇ ಕೊರೋನಾ ಗೆದ್ದಂತೆ. ನನ್ನ ಹಳ್ಳಿಗೆ ಕೊರೋನಾ ಪ್ರವೇಶಿಸಲು ನಾನು ಅವಕಾಶ ನೀಡುವುದಿಲ್ಲ ಎಂದು ಶಪಥ ಮಾಡಿ: ಜಿಲ್ಲಾಧಿಕಾರಿಗಳಿಗೆ ಮೋದಿ ಸೂಚನೆ
* ಹಳ್ಳಿಗಳು ನಮ್ಮ ದೇಶದ ಶಕ್ತಿ: ಕೃಷಿ ಕೆಲಸಕ್ಕೆ ಅಡ್ಡಿಯಾಗದಂತೆ ಲಾಕ್‌ಡೌನ್ ಮಾಡಿದ್ದೇವೆ. ನಾವು ಕಳೆದ ಬಾರಿ ಕೃಷಿ ಕ್ಷೇತ್ರಕ್ಕೆ ಯಾವುದೇ ಲಾಕ್‌ಡೌನ್ ಹೇರಿರಲಿಲ್ಲ. ಹೋಗಿದ್ದರೂ ಹಳ್ಳಿಯ ಜನರು ಸಾಮಾಜಿಕ ಅಂತರ ಕಾಪಾಡಿ ಕೃಷಿ ಮಾಡಿದ್ದರು. ಹಳ್ಳಿ ಜನರು ಬಹಳ ಸೂಕ್ಷ್ಮತೆಯಿಂದ ವರ್ತಿಸುತ್ತಿದ್ದಾರೆ. ಕೊರೋನಾ ಕಾಲದಲ್ಲಿ ಎಚ್ಚರದಿಂದಿದ್ದಾರೆ. ಹೊರ ಹೋಗುವಾಗಲೂ ಎಲ್ಲಾ ರೀತಿಯ ನಿಯಮ ಪಾಲಿಸುತ್ತಿದ್ದಾರೆ.
* ಕೊರೋನಾ ವಿರುದ್ಧದ ಯುದ್ಧದಲ್ಲಿ ನಮ್ಮ ಜೊತೆಯಾಗಿ. ಕೊರೋನಾ ತಡೆಗೆ ನೀವೇ ಸ್ವತಂತ್ರವಾಗಿ ಕೆಲಸ ಮಾಡಿ. ನಿಮ್ಮ ಜಿಲ್ಲೆಯ ಸವಾಲೇನೆಂದು ನಿಮಗೆ ಚೆನ್ನಾಗಿ ಗೊತ್ತು. ಕೊರೋನಾ ಹೋರಾಟದಲ್ಲಿ ನೀವು ಒಂದು ರೀತಿಯ ಫೀಲ್ಡ್ ಕಮಾಂಡರ್‌ನಂತೆ. ಪರಿಸ್ಥಿತಿಯ ಅನುಸಾರ ನಿರ್ಧಾರ ತೆಗೆದುಕೊಂಡು ಎಚ್ಚರದಿಂದಿರುತ್ತಾರೆ.
.* ಈ ವೈರಸ್ ವಿರುದ್ಧ ನಮ್ಮ ಅಸ್ತ್ರವೇ ಲೋಕಲ್ ಕಂಟೈನ್‌ಮೆಂಟ್ ಝೋನ್ ಮತ್ತು ಟೆಸ್ಟಿಂಗ್. ಹೀಗೆ ಸರಿಯಾದ ಪ್ಲಾನಿಂಗ್ ಮಾಡಿದರೆ ಈ ಯುದ್ಧದಲ್ಲಿ ಗೆಲುವು ನಮ್ಮದೇ
* ಆಸ್ಪತ್ರೆಯಲ್ಲಿರುವ ಬೆಡ್, ಆಕ್ಸಿಜನ್ ಬಗ್ಗೆ ಜನರಿಗೆ ಮಾಹಿತಿ ಇದ್ದರೆ ಎಲ್ಲಾ ರೀತಿಯ ಸಮಸ್ಯೆ ನಿವಾರಣೆಯಾಗುತ್ತದೆ. ಕಾಳಸಂತೆಯಲ್ಲಿ ಔಷಧಿಗಳು ಮಾರಾಟವಾಗದಂತೆ ಎಚ್ಚರ ವಹಿಸಿ
ಲಸಿಕೆ ಪಡೆದ 26 ಜನರಲ್ಲಿ ರಕ್ತ ಹೆಪ್ಪುಗಟ್ಟುವಿಕೆ: ಇವುಗಳಲ್ಲಿ 700 ಗಂಭೀರ ಪ್ರಕರಣ!
* ಕಾಳಸಂತೆಯಲ್ಲಿ ಔಷಧಿಗಳು ಮಾರಾಟವಾಗದಂತೆ ಎಚ್ಚರ ವಹಿಸಿ, ಕೊರೋನಾ ವಾರಿಯರ್‌ಗಳಿಗೆ ಸ್ಫೂರ್ತಿ ತುಂಬಿ, ಇದರಿಂದ ಅವರಲ್ಲೂ ವಿಶ್ವಾಸ ಹೆಚ್ಚುತ್ತದೆ.
* ಸರ್ಕಾರ ಜಾರಿಗೊಳಿಸಿರುವ ಕ್ರಮಗಳಲ್ಲಿ ಏನಾದರೂ ಬದಲಾವಣೆಯಾಗಬೇಕಾದರೆ ನಮಗೆ ತಿಳಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ.
* ಕೊರೋನಾ ನಿಯಂತ್ರಿಸಲು ನಿಮ್ಮ ಜಿಲ್ಲೆಯಲ್ಲಿ ನೀವು ಯಾವ ಮಾರ್ಗ ಬೇಕಾದರೂ ಅಳವಡಿಸಿಕೊಳ್ಳಿ.
* ಈಗಾಗಲೇ ಕೆಳ ಮಟ್ಟದಲ್ಲಿ ತೆಗೆದುಕೊಂಡ ಕ್ರಮಗಳಿಂದಾಗಿ ಉತ್ತುಂಗಕ್ಕೇರಿದ್ದ ಕೊರೋನಾ ಪ್ರಕರಣಗಳು ಇಳಿಕೆಯಾಗುತ್ತಿವೆ. ಕೆಲ ರಾಜ್ಯಗಳಲ್ಲಿ ಸೋಂಕು ಏರಿದ್ದರೆ, ಹಲವೆಡೆ ಕಡಿಮೆಯಾಗಿದೆ. ಆದರೆ ಇಲ್ಲಿ ಪ್ರತಿಯೊಬ್ಬರ ಜೀವ ಉಳಿಸುವ ಹೋರಾಟ ನಮ್ಮದಾಗಬೇಕು.
* ಹಿಂದಿನ ವರ್ಷ, ಮೊದಲನೇ ಕೊರೋನಾ ಅಲೆ ದಾಳಿ ಇಟ್ಟ ವೇಳೆ ಪ್ರತೀ ಸಭೆಯಲ್ಲೂ ಗ್ರಾಮೀಣ ಹಾಗೂ ದುರ್ಗಮ ಪ್ರದೇಶಗಳ ಬಗ್ಗೆ ಹೆಚ್ಚು ಹಗಮನಹರಿಸುವಂತೆ ಸೂಚಿಸಿದ್ದೆ.
* ಈ ಬಾರಿಯೂ ಇದೇ ಮನವಿ ಮಾಡುತ್ತೇನೆ. ಹಳ್ಳಿ ಹಳ್ಳಿಗಳಲ್ಲೂ ಜಾಗೃತಿ ಮೂಡಿಸಿ. 3T, ಐಸೋಲೇಷನ್, ಕ್ವಾರಂಟೈನ್ ಪ್ರಮಾಣ ಹೆಚ್ಚಿಸಿ
* ಎಲ್ಲರ ಅನುಭವ ಕೊರೋನಾ ಮಣಿಸಲು ಸಹಾಯ ಮಾಡಲಿದೆ. ಹೀಗೆ ಜಿಲ್ಲೆಯ ಪರಿಸ್ಥಿತಿಯನುಸಾರ ಲಾಕ್‌ಡೌನ್ ಹೇರುವ ನಿರ್ಧಾರ ಡಿಸಿಗಳಿಗೇ ವಹಿಸುತ್ತೇನೆ.
* ಕೊರೋನಾ ಹೊರತಾಗಿಯೂ ಪ್ರತಿಯೊಬ್ಬರ ಜೀವನ ನಿರ್ವಹಣೆ ಬಗ್ಗೆ ನೀವು ಯೋಚಿಸಬೇಕು.
* ಜಿಲ್ಲಾಸ್ಪತ್ರೆಗಳಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣಕ್ಕೆ ಪಿಎಂ ಕೇರ್ಸ್ ನೆರವು ನೀಡಲಾಗುತ್ತದೆ. ಸಮಾರೋಪಾದಿಯಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣ. ಆಸ್ಪತ್ರೆಗಳಲ್ಲಿ ಆಕ್ಸಿಜನ್ ನಿಗಾ ಸಮಿತಿ ರೂಪಿಸಿಕೊಳ್ಳಿ.
ಈ ಆಸ್ಪತ್ರೆಯಲ್ಲಿ ಈವರೆಗೆ ಒಂದೂ ಕೋವಿಡ್ ಸಾವಿಲ್ಲ, ಎಲ್ಲರೂ ಗುಣಮುಖ!
* ಲಸಿಕೆ ಹಂಚಿಕೆಗೆ 15 ದಿನ ಮುಂಚೆಯೇ ಪ್ಲಾನ್ ಮಾಡಿಕೊಳ್ಳಿ, ಇವುಗಳ ಗರಿಷ್ಠ ಬಳಕೆಗೆ ಯೋಜನೆ ರೂಪಿಸಿ.
* ಜೂನ್‌ನಲ್ಲಿ ಮಳೆಗಾಲ ಆರಂಭವಾಗುತ್ತಿದೆ ಹೀಗಾಗಿ ನಿಮ್ಮ ಅಗತ್ಯಗಳನ್ನು ಈಗಲೇ ಮ್ಯಾಪ್ ಮಾಡಿಕೊಳ್ಳಿ.
* ಮಳೆಗಾಲದಲ್ಲಿ ಆಸ್ಪತ್ರೆಗಳಲ್ಲಿ ವಿದ್ಯುತ್ ವ್ಯತ್ಯಯ ಆಗಬಹುದು, ಆಕ್ಸಿಜನ್ ಸಮಸ್ಯೆಯೂ ಬರಬಹುದು. ಇವೆಲ್ಲವನ್ನೂ ನಿವಾರಿಸಲು ಸಿದ್ಧರಾಗಿ.
ರಾಜ್ಯದ ಯಾವ ಜಿಲ್ಲೆಯ ಡಿಸಿಗಳು ಈ ಸಭೆಯಲ್ಲಿ ಭಾಗಿಯಾಗಿದ್ದರು?
ಶಿವಮೊಗ್ಗ, ಧಾರವಾಡ, ದಕ್ಷಿಣ ಕನ್ನಡ, ರಾಯಚೂರು,ಕಲ್ಬುರ್ಗಿ, ಮಂಡ್ಯ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಉತ್ತರ ಕನ್ನಡ, ಹಾಸನ, ಬಳ್ಳಾರಿ, ಮೈಸೂರು,ತುಮಕೂರು, ಕೋಲಾರ,ಕೊಡಗು,ಉಡುಪಿ ಮತ್ತು ಚಿಕ್ಕಬಳ್ಳಾಪುರ
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona