
ನವದೆಹಲಿ(ಮೇ.18): ಕೊರೋನಾದಿಂದ ತಮ್ಮ ತಂದೆ ತಾಯಂದಿರನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳ ಪುನರ್ವಸತಿಗೆ ಕೇಂದ್ರ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವಾಲಯ ನಿಯಮಗಳನ್ನು ರೂಪಿಸಿದೆ. ಇತ್ತೀಚೆಗೆ ಕೊರೋನಾದಿಂದ ತಂದೆ-ತಾಯಿಯರನ್ನು ಕಳೆದುಕೊಂಡು ಅನಾಥರಾಗಇರುವ ಮಕ್ಕಳನ್ನು ದತ್ತು ತೆಗೆದುಕೊಳ್ಳಿ ಎಂಬ ಸಂದೇಶಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಆದರೆ ಈ ರೀತಿ ನೇರವಾಗಿ ದತ್ತು ನೀಡಿಕೆ/ಪಡೆಯುವಿಕೆಯು ನಿಯಮಗಳಿಗೆ ವಿರುದ್ಧವಾದುದು. ಹೀಗಾಗಿ ಇಂಥದ್ದಕ್ಕೆ ಪ್ರೋತ್ಸಾಹ ನೀಡದೇ ಮಕ್ಕಳನ್ನು ಕಾನೂನುಬದ್ಧವಾಗಿ ಪುನರ್ವಸತಿ ಕೇಂದ್ರಕ್ಕೆ ಸೇರಿಸಬೇಕು ಎಂದು ಸಚಿವಾಲಯ ಸೂಚಿಸಿದೆ.
- ಮಕ್ಕಳು ಅನಾಥರಾಗಿದ್ದು ಗೊತ್ತಾದ ಕೂಡಲೇ ಚೈಲ್ಡ್‌ಲೈನ್ ಸಹಾಯವಾಣಿ 1098ಗೆ ಕರೆ ಮಾಡಬೇಕು.
- ಚೈಲ್ಡ್‌ಲೈನ್ ಸಹಾಯವಾಣಿಯವರು 24 ತಾಸಿನೊಳಗೆ ಮಕ್ಕಳನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಬೇಕು.
- ಅಥವಾ ಸಂಬಂಧಿಸಿದವರೇ, ಮಕ್ಕಳು ತಬ್ಬಲಿಯಾದ 24 ತಾಸಿನೊಳಗೆ ಮಕ್ಕಳ ಕಲ್ಯಾಣ ಸಮಿತಿ ಮುಂದೆ ನೇರವಾಗಿ ಹಾಜರುಪಡಿಸಬಹುದು.
"
- ಸಮಿತಿಯು ಮಕ್ಕಳನ್ನು ಸಾಂಸ್ಥಿಕ ಅಥವಾ ಅಸಾಂಸ್ಥಿಕ ಶಿಶುಪಾಲನಾ ಕೇಂದ್ರಕ್ಕೆ ಕಳಿಸಬೇಕು ಅಥವಾ ಸಂಬಂಧಿಸಿದ ಶಿಶುಪಾಲಕರಿಗೆ ಕಳಿಸಬಹುದು.
- ಶಿಶುಪಾಲನಾ ಕೇಂದ್ರಕ್ಕೆ ದಾಖಲು ಬಳಿಕ ಮಕ್ಕಳ ಯೋಗಕ್ಷೇಮವನ್ನು ಮಕ್ಕಳ ಕಲ್ಯಾಣ ಸಮಿತಿಯು ಕಾಲಕಾಲಕ್ಕೆ ವಿಚಾರಿಸುತ್ತಿರಬೇಕು.
- ಖುದ್ದು ಯೋಗಕ್ಷೇಮ ವಿಚಾರಣೆ ಸಾಧ್ಯವಾಗದಿದ್ದರೆ ವಿಡಿಯೋ ಸಂವಾದದ ಮೂಲಕ ಯೋಗಕ್ಷೇಮ ವಿಚಾರಿಸ ಬೇಕು
- ಕಾನೂನು ಪ್ರಕಾರ ದತ್ತು ಪಡೆಯಲು ಯಾರಾದರೂ ಇಚ್ಛಿಸಿದ್ದಲ್ಲಿ ಕೇಂದ್ರೀಯ ದತ್ತು ಸಂಪನ್ಮೂಲ ಪ್ರಾಧಿಕಾರದ ವೆಬ್‌ಸೈಟ್ (cara.nic.in) ಸಂಪರ್ಕಿಸಬಹುದು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ