ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದು ಮಾಡಿದ ಬಳಿಕ ಜಮ್ಮುವಿನಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಹೆಚ್ಚಾಗಿವೆ ಎಂದು ಅಧಿಕೃತ ಅಂಕಿ ಅಂಶಗಳು ಹೇಳಿವೆ.
ಶ್ರೀನಗರ: ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದು ಮಾಡಿದ ಬಳಿಕ ಜಮ್ಮುವಿನಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಹೆಚ್ಚಾಗಿವೆ ಎಂದು ಅಧಿಕೃತ ಅಂಕಿ ಅಂಶಗಳು ಹೇಳಿವೆ. ವಿಧಿ ರದ್ದತಿ ಬಳಿಕ ಜಮ್ಮುದಲ್ಲಿ ಬಂಧಿಸಲ್ಪಟ್ಟಿರುವ ಭಯೋತ್ಪಾದಕರ ಸಂಖ್ಯೆಯು 231 ಆಗಿದ್ದು, ರದ್ದತಿ ಮುನ್ನ 4 ವರ್ಷಗಳ ಅವಧಿಯಲ್ಲಿ ಬಂಧಿಸಲ್ಪಟ್ಟಿದ್ದ ಭಯೋತ್ಪಾದಕರ ಸಂಖ್ಯೆಗಿಂತ ಶೇ.71ರಷ್ಟು ಹೆಚ್ಚಾಗಿದೆ ಎಂದು ಅಂಕಿಅಂಶ ತಿಳಿಸಿದೆ.
ಅಲ್ಲದೇ ಆರ್ಟಿಕಲ್ ರದ್ದತಿಗೂ (Artical 370) ಮುನ್ನ ಜಮ್ಮುವಿನಲ್ಲಿ 4 ವರ್ಷಗಳಲ್ಲಿ 4 ಗ್ರೆನೇಡ್ ಮತ್ತು 7 ಐಇಡಿ (IED) ದಾಳಿಗಳು ನಡೆದಿದ್ದವು. ಆದರೆ ರದ್ದತಿ ಬಳಿಕ ಇಲ್ಲಿಯವರೆಗೆ 8 ಗ್ರೆನೇಡ್ ಮತ್ತು 13 ಐಇಡಿ ದಾಳಿಗಳು ನಡೆದಿವೆ. ಐಇಡಿ ದಾಳಿಗಳಿಂದ ಮೊದಲು 3 ಜನ ಸಾವನ್ನಪ್ಪಿದ್ದರೆ ರದ್ದತಿ ಬಳಿಕ 11ಜನ ಸಾವನ್ನಪ್ಪಿದ್ದಾರೆ. ಅಲ್ಲದೇ ದೂರದಿಂದ ದಾಳಿ ನಡೆಸುವ ಹಾಗೂ ಹಿಟ್ ರನ್ ಘಟನೆಗಳು ಕೂಡ ಶೇ.43ರಷ್ಟು (ರದ್ದತಿ ಮೊದಲು 4, ಬಳಿಕ 7) ಹೆಚ್ಚಾಗಿವೆ. ಜಮ್ಮು ಭಾಗದಲ್ಲಿ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದಾರೆ.
ಕಾಶ್ಮೀರದಲ್ಲಿ 370ನೇ ವಿಧಿ ರದ್ದು ನಿರ್ಧಾರಕ್ಕೆ ನಾಲ್ಕು ವರ್ಷ, ಶಾಂತಿ-ಸ್ಥಿರತೆಯಲ್ಲಿ ಕಣಿವೆ ರಾಜ್ಯ!
ಆದರೆ ದಾಳಿಗಳ ಹೆಚ್ಚಳದ ಹೊರತಾಗಿಯೂ ಭಯೋತ್ಪಾದಕ ದಾಳಿಯಲ್ಲಿ ನಾಗರಿಕರ ಸಾವಿನ ಪ್ರಮಾಣ ಶೇ.63ರಷ್ಟು ಹಾಗೂ ಪೊಲೀಸರು (Police) ಮತ್ತು ಭದ್ರತಾ ಪಡೆಗಳ ಸಾವಿನ ಪ್ರಮಾಣ ಶೇ.13ರಷ್ಟು ಇಳಿಕೆಯಾಗಿದೆ.
'ಈ ಸ್ವಾತಂತ್ರ್ಯ ಮೊದಲು ಇತ್ತೇ..' ಹಿಜಾಬ್ ಧರಿಸಿ ಬುಲೆಟ್ ಓಡಿಸುವ ವಿಡಿಯೋ ಹಾಕಿ ಪ್ರಶ್ನಿಸಿದ ಕಾಶ್ಮೀರಿ ಯುವತಿ!