
ಊಟಿ: ನೀಲಗಿರಿ ಪರ್ವತ ಶ್ರೇಣಿಯಲ್ಲಿರುವ ಪ್ರಸಿದ್ಧ ಗಿರಿಧಾಮ ತಮಿಳುನಾಡಿನ ಉದಕಮಂಡಲದಲ್ಲಿ(ಊಟಿ) ತಾಪಮಾನ ತೀವ್ರವಾಗಿ ಕುಸಿದಿದ್ದು ಗುರುವಾರ 1 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಷ ದಾಖಲಾಗಿದೆ. ಮತ್ತೊಂದೆಡೆ ಉತ್ತರ ಭಾರತದ ಹಲವೆಡೆ ಮೈ ಕೊರೆವ ಚಳಿ ಆವರಿಸಿದೆ.
ಜಮ್ಮು ಕಾಶ್ಮೀರದಲ್ಲಿ ಹಲವು ಕಡೆ ತಾಪಮಾನ ಶೂನ್ಯಕ್ಕಿಂತ ಕೆಳಮಟ್ಟಕ್ಕೆ ಕುಸಿದಿದ್ದು, ಪಹಲ್ಗಾಂನಲ್ಲಿ -5.8 ಡಿ.ಸೆ., ಶ್ರೀನಗರ, ಗುಲ್ಮಾರ್ಗ್, ಕುಪ್ವಾರಾ ಮುಂತಾದೆಡೆ -4.5 ಡಿಗ್ರಿ ತಾಪಮಾನ ದಾಖಲಾಗಿದೆ. ಹಿಮಾಚಲದಲ್ಲಿ 5 ಸೆಂ.ಮೀಗೂ ದಪ್ಪನಾದ ಮಂಜು ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿದೆ. ಹಾಗೆಯೇ ಹರ್ಯಾಣ, ಪಂಜಾಬ್, ರಾಜಸ್ಥಾನ, ದೆಹಲಿ ಮತ್ತು ಜಾರ್ಖಂಡ್‌ನ ಹಲವು ನಗರಗಳಲ್ಲೂ ದಟ್ಟ ಮಂಜು ಆವರಿಸಿದೆ.
ಈ ನಡುವೆ ದೆಹಲಿ ವಿಮಾನ ನಿಲ್ದಾಣದಲ್ಲಿ ದಟ್ಟ ಮಂಜು ಆವರಿಸಿದ ಪರಿಣಾಮ ಜೈಪುರಕ್ಕೆ ಎರಡು, ಮುಂಬೈ ಹಾಗೂ ಹೈದರಾಬಾದ್‌ಗೆ ತಲಾ 1 ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿತ್ತು. ಜಾರ್ಖಂಡ್ ರಾಜಧಾನಿ ರಾಂಚಿಯಲ್ಲೂ ಸಹ ದಟ್ಟ ಮಂಜು ಆವರಿಸಿದ ಪರಿಣಾಮ 14 ವಿಮಾನಗಳ ಸಂಚಾರವನ್ನು ರದ್ದುಪಡಿಸಲಾಗಿದೆ.
ವಾಹನ ಸವಾರರೇ ಎಚ್ಚರ: ಚಳಿಗಾಲದಲ್ಲೇ ರಸ್ತೆ ಅಪಘಾತ ಹೆಚ್ಚು..!
ಊಟಿಯಲ್ಲಿ ದಟ್ಟ ಮಂಜು ಆವರಿಸಿದ ಪರಿಣಾಮ ಶೂನ್ಯದತ್ತ ತಾಪಮಾನ ಇಳಿದಿದೆ. ಉತ್ತರ ಭಾರತದಲ್ಲೂ ದಟ್ಟ ಮಂಜು ಆವರಿಸಿದೆ. ಈ ನಡುವೆ ದೆಹಲಿಯಲ್ಲಿ ಹಲವು ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಜಾರ್ಖಂಡ್‌ನಲ್ಲಿ ಹಲವು ವಿಮಾನಗಳ ಸಂಚಾರ ರದ್ದುಪಡಿಸಲಾಗಿದೆ.
ಉತ್ತರದಲ್ಲಿ ತೀವ್ರ ಚಳಿ: ಕೆಲವೆಡೆ ಶೂನ್ಯ ತಾಪಮಾನ, ಜಮ್ಮುನಲ್ಲಿ 2.2 ಡಿಗ್ರಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ