50 ಡಿಗ್ರಿಗೆ ತಲುಪಲಿದೆ ಪಾಕ್‌ನ ತಾಪಮಾನ, ಇದು ಜಗತ್ತಿನಲ್ಲೇ ಹೆಚ್ಚು!

Published : May 01, 2025, 06:16 AM ISTUpdated : May 01, 2025, 06:19 AM IST
 50 ಡಿಗ್ರಿಗೆ ತಲುಪಲಿದೆ ಪಾಕ್‌ನ ತಾಪಮಾನ, ಇದು ಜಗತ್ತಿನಲ್ಲೇ ಹೆಚ್ಚು!

ಸಾರಾಂಶ

ಈಗಾಗಲೇ ಬಡತನ, ಸಾಲ, ಉದ್ವಿಗ್ನತೆ, ಭಾರತದ ಭಯದಿಂದ ಕಂಗೆಟ್ಟಿರುವ ಪಾಕಿಸ್ತಾನ ಈ ಬೇಸಿಗೆಯಲ್ಲಿ ಮತ್ತಷ್ಟು ಬಳಲಲಿದೆ. ಈ ವಾರ ಪಾಕಿಸ್ತಾನದ ತಾಪಮಾನ 50 ಡಿ.ಸೆ. ತಲುಪುವ ನಿರೀಕ್ಷೆಯಿದ್ದು, ಹೀಗಾದಲ್ಲಿ, ಇದು ಜಗತ್ತಿನಲ್ಲೇ ಏಪ್ರಿಲ್‌ ತಿಂಗಳಲ್ಲಿ ದಾಖಲಾದ ಗರಿಷ್ಠ ತಾಪವಾಗಿರಲಿದೆ. 

ಇಸ್ಲಾಮಾಬಾದ್‌ (ಮೇ.1): ಈಗಾಗಲೇ ಬಡತನ, ಸಾಲ, ಉದ್ವಿಗ್ನತೆ, ಭಾರತದ ಭಯದಿಂದ ಕಂಗೆಟ್ಟಿರುವ ಪಾಕಿಸ್ತಾನ ಈ ಬೇಸಿಗೆಯಲ್ಲಿ ಮತ್ತಷ್ಟು ಬಳಲಲಿದೆ. ಈ ವಾರ ಪಾಕಿಸ್ತಾನದ ತಾಪಮಾನ 50 ಡಿ.ಸೆ. ತಲುಪುವ ನಿರೀಕ್ಷೆಯಿದ್ದು, ಹೀಗಾದಲ್ಲಿ, ಇದು ಜಗತ್ತಿನಲ್ಲೇ ಏಪ್ರಿಲ್‌ ತಿಂಗಳಲ್ಲಿ ದಾಖಲಾದ ಗರಿಷ್ಠ ತಾಪವಾಗಿರಲಿದೆ. 

ಈಗಾಗಲೇ ದೇಶದ ಮಧ್ಯ ಹಾಗೂ ದಕ್ಷಿಣ ಭಾಗದಲ್ಲಿ ತಾಪಮಾನ 48 ಡಿ.ಸೆ. ತಲುಪಿದ್ದು, ಇದು ಇನ್ನೂ ಅಧಿಕವಾಗಲಿದೆ. 2018ರಲ್ಲಿ ನವಾಬ್‌ಶಾ ಪ್ರದೇಶದಲ್ಲಿ 50 ಡಿ.ಸೆ. ಉಷ್ಣಾಂಶ ದಾಖಲಾಗಿದ್ದು, ಈ ವರ್ಷ ಈ ದಾಖಲೆಯನ್ನು ಮುರಿಯುವಷ್ಟು ಬಿಸಿಲಿರಲಿದೆ ಎನ್ನಲಾಗಿದೆ. 

ಪಾಕಿಸ್ತಾನದ ಹವಾಮಾನ ಇಲಾಖೆಯು ಏ.26ರಿಂದ 30ರ ನಡುವೆ ಉಷ್ಣ ಗಾಳಿ ಸಂಭವಿಸುವ ಎಚ್ಚರಿಕೆ ನೀಡಿದ್ದು, ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವಂತೆ ಜನರಿಗೆ ಎಚ್ಚರಿಸಿತ್ತು.

ಇದನ್ನೂ ಓದಿ: ಪಾಕಿಸ್ತಾನ ಪ್ರಜೆ ಬಳಿ ಭಾರತದ ಆಧಾರ್, ವೋಟಿಂಗ್ ಮತ್ತು ರೇಷನ್ ಕಾರ್ಡ್!

ಗಾಯದ ಮೇಲೆ ಬರೆ ಎಂಬಂತೆ, ಕಾಶ್ಮೀರದಲ್ಲಿ ನಡೆದ ಪಹಲ್ಗಾಂ ಉಗ್ರದಾಳಿಯ ಬೆನ್ನಲ್ಲೇ, ಭಾರತದಿಂದ ಪಾಕಿಸ್ತಾನಕ್ಕೆ ಹರಿಯುತ್ತಿದ್ದ ಸಿಂಧೂ ಉಪನದಿಗಳ ನೀರಿನ ಹರಿವನ್ನು ತಡೆಹಿಡಿಯುವ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಮರಾಲ ಪ್ರದೇಶದಲ್ಲಿ ಚಿನಾಬ್‌ ನದಿ ನೀರಿನ ಪ್ರಮಾಣದಲ್ಲಿ ಅರ್ಧದಷ್ಟು ಇಳಿಕೆಯಾಗಿದೆ. ಇದು ಪಾಕಿಸ್ತಾನವನ್ನು ಇನ್ನಷ್ಟು ಬಾಯಾರುವಂತೆ ಮಾಡಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..