ಅಂಗವಿಕಲರಿಗೆ KYC ನಿಯಮ ಬದಲಿಸಿ : ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

Published : May 01, 2025, 05:24 AM ISTUpdated : May 01, 2025, 05:27 AM IST
ಅಂಗವಿಕಲರಿಗೆ KYC ನಿಯಮ ಬದಲಿಸಿ : ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಸಾರಾಂಶ

ಅಂಗವಿಕಲರು ಮತ್ತು ಆ್ಯಸಿಡ್‌ ದಾಳಿಗೊಳಗಾದವರು ಎದುರಿಸುತ್ತಿರುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ) ನಿಯಮಾವಳಿಗಳಲ್ಲಿ ಕೆಲ ಬದಲಾವಣೆ ಮಾಡುವಂತೆ ಸುಪ್ರೀಂ ಕೋರ್ಟ್‌ ಬುಧವಾರ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಅಲ್ಲದೆ ಡಿಟಿಟಲ್‌ ಸೌಲಭ್ಯ ಕೂಡಾ ಮೂಲಭೂತ ಹಕ್ಕು ಎಂದು ಐತಿಹಾಸಿಕ ಆದೇಶ ನೀಡಿದೆ.

ನವದೆಹಲಿ (ಮೇ.1): ಅಂಗವಿಕಲರು ಮತ್ತು ಆ್ಯಸಿಡ್‌ ದಾಳಿಗೊಳಗಾದವರು ಎದುರಿಸುತ್ತಿರುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ) ನಿಯಮಾವಳಿಗಳಲ್ಲಿ ಕೆಲ ಬದಲಾವಣೆ ಮಾಡುವಂತೆ ಸುಪ್ರೀಂ ಕೋರ್ಟ್‌ ಬುಧವಾರ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಅಲ್ಲದೆ ಡಿಟಿಟಲ್‌ ಸೌಲಭ್ಯ ಕೂಡಾ ಮೂಲಭೂತ ಹಕ್ಕು ಎಂದು ಐತಿಹಾಸಿಕ ಆದೇಶ ನೀಡಿದೆ.

ಅಂಧರು ಮತ್ತು ಆ್ಯಸಿಡ್‌ ದಾಳಿಗೊಳಗಾದವರು ಕೆವೈಸಿ ಪೂರ್ಣಗೊಳಿಸಲು ಸಮಸ್ಯೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಇಂಥದ್ದೊಂದು ಸೂಚನೆ ನೀಡಲಾಗಿದೆ. ಸಂವಿಧಾನದ 21ನೇ ವಿಧಿ ಪ್ರಕಾರ ನೀಡಲಾದ ಬದುಕಿನ ಹಕ್ಕಿನಲ್ಲಿ ಡಿಜಿಟಲ್‌ ಸೌಲಭ್ಯ ಪಡೆಯುವುದು ಕೂಡ ಪ್ರಮುಖ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ, ಎಲ್ಲರನ್ನೂ ಒಳಗೊಳ್ಳುವ ಕೆವೈಸಿ ನಿಯಮಗಳನ್ನು ರೂಪಿಸಲು 20 ನಿರ್ದೇಶನಗಳನ್ನೂ ಈ ವೇಳೆ ಹೊರಡಿಸಿದೆ.

ಇದನ್ನೂ ಓದಿ: ಉಗ್ರರ ವಿರುದ್ಧ ಸ್ಪೈವೇರ್‌ ಬಳಸಿದ್ರೆ ಅದರಲ್ಲಿ ತಪ್ಪೇನು:? ಸುಪ್ರೀಂ ಪ್ರಶ್ನೆ?

ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ವೇಳೆ ನ್ಯಾ.ಜೆ.ಬಿ.ಪರ್ದಿವಾಲ ಮತ್ತು ಆರ್‌.ಮಹದೇವನ್‌ ಅವರಿದ್ದ ಪೀಠ, ಅಂಗವಿಕಲರು ಅದರಲ್ಲೂ ಮುಖ್ಯವಾಗಿ ಅಂಧರು ಮತ್ತು ವಿರೂಪಗೊಂಡ ಮುಖ ಹೊಂದಿರುವವರು ಕೆವೈಸಿ ಪ್ರಕ್ರಿಯೆ ವೇಳೆ ಮುಖದ ಸರಿಹೊಂದಾಣಿಕೆ ಅಥವಾ ಕಣ್ಣು ಮಿಟುಕಿಸುವ ವೇಳೆ ಅನುಭವಿಸುವ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಇಂಥದ್ದೊಂದು ನಿರ್ದೇಶನ ನೀಡಿದೆ.

ಇದನ್ನೂ ಓದಿ: ನ್ಯಾಯಮೂರ್ತಿ ಬಿ.ಆರ್. ಗವಾಯಿ ಭಾರತದ ಹೊಸ ಸಿಜೆಐ, ಮೇ.14ಕ್ಕೆ ಪ್ರಮಾಣವಚನ

ಯಾವುದೇ ಬ್ಯಾಂಕ್‌ ಖಾತೆ ತೆರೆಯಲು ಮತ್ತು ಸರ್ಕಾರಿ ಯೋಜನೆಗಳ ಲಾಭಪಡೆಯಲು ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸುವುದು ಕಡ್ಡಾಯ. ಆದರೆ, ಆನ್‌ಲೈನ್‌ ಕೈವಿಸಿಯಿಂದ ಅಂಧರು ಮತ್ತು ಆ್ಯಸಿಡ್‌ ದಾಳಿಗೊಳಗಾದವರು ತೀವ್ರ ಸಮಸ್ಯೆ ಎದುರಿಸಬೇಕಾಗುತ್ತದೆ. ಹಾಲಿ ಇರುವ ಕೆವೈಸಿ ನಿಯಮವಾಳಿಯಿಂದ ಇಂಥವರು ಡಿಜಿಟಲ್ ವ್ಯವಸ್ಥೆಯಿಂದಲೇ ದೂರವುಳಿಯುವ ಸಾಧ್ಯತೆ ಇದೆ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ. ಹೀಗಾಗಿ ಕೈವಿಸಿ ವಿನ್ಯಾಸವನ್ನು ಎಲ್ಲರಿಗೂ ಸರಿಹೊಂದುವಂತೆ ಬದಲಾಯಿಸುವ ಅಗತ್ಯವನ್ನು ನ್ಯಾಯಾಲಯ ಮನಗಂಡಿದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..