ಟೊಮೆಟೋ ಬೆಲೆ ಏರಿಕೆಯಿಂದ ಖುಷಿ ಪಡಬೇಕು ಅಳಬೇಕೋ ಎಂಬ ಸ್ಥಿತಿ ಬೆಳೆಗಾರರದ್ದಾಗಿದೆ. ಇದಕ್ಕೆ ಕಾರಣ ಕಳ್ಳರ ಹಾವಳಿ. ಬೆಲೆ ಏರಿಕೆಯಿಂದಾಗಿ ರೈತರ ಹೊಲಗಳಿಗೆ ನೇರವಾಗಿ ಕಳ್ಳರು ಬಲೆ ಬೀಸಿದ್ದು, ಹೊಲದಿಂದಲೇ ನೇರವಾಗಿ ಟೊಮೆಟೋ ಬೆಳೆ ಎಗ್ಗರಿಸಿ ಪರಾರಿಯಾಗುತ್ತಿದ್ದು, ಇದರಿಂದ ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದಾರೆ.
ಮೆಹಬೂಬ್‌ನಗರ: ಟೊಮೆಟೋ ಬೆಲೆ ಏರಿಕೆಯಿಂದ ಖುಷಿ ಪಡಬೇಕು ಅಳಬೇಕೋ ಎಂಬ ಸ್ಥಿತಿ ಬೆಳೆಗಾರರದ್ದಾಗಿದೆ. ಇದಕ್ಕೆ ಕಾರಣ ಕಳ್ಳರ ಹಾವಳಿ. ಬೆಲೆ ಏರಿಕೆಯಿಂದಾಗಿ ರೈತರ ಹೊಲಗಳಿಗೆ ನೇರವಾಗಿ ಕಳ್ಳರು ಬಲೆ ಬೀಸಿದ್ದು, ಹೊಲದಿಂದಲೇ ನೇರವಾಗಿ ಟೊಮೆಟೋ ಬೆಳೆ ಎಗ್ಗರಿಸಿ ಪರಾರಿಯಾಗುತ್ತಿದ್ದು, ಇದರಿಂದ ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದಾರೆ. ಒಂದೆಡೆ ಟೊಮೆಟೋ ಬೆಲೆ ಏರಿಕೆಯಿಂದ ಜನಸಾಮಾನ್ಯರು ಕೊಳ್ಳಲಾಗದೇ ಸಂಕಷ್ಟಕ್ಕೀಡಾಗಿದ್ದರೆ ಮತ್ತೊಂದೆಡೆ ರೈತರು ಕಳ್ಳ ಕಾಕರಿಂದ ಬೆಳೆ ರಕ್ಷಿಸಲು ಪರದಾಡುವಂತಾಗಿದೆ. ಮೊನ್ನೆ ಮಂಗಳವಾರ ರಾಜ್ಯ ಹಾಸನ ಜಿಲ್ಲೆಯಲ್ಲಿ ಹಳೇಬೀಡು ಸಮೀಪದ ಗೋಣಿಸೋಮನಹಳ್ಳಿ ಗ್ರಾಮದಲ್ಲಿ ರೈತರೊಬ್ಬರ ಹೊಲಕ್ಕೆ ನುಗ್ಗಿದ ಕಳ್ಳರು ಸುಮಾರು 90 ಬಾಕ್ಸ್ ಟೊಮ್ಯಾಟೋ ಹಣ್ಣನ್ನು ಕಳ್ಳತನ ಮಾಡಿದ್ದರು. ಈ ಘಟನೆ ಮಾಸುವ ಮೊದಲೇ ಈಗ ಪಕ್ಕದ ರಾಜ್ಯದಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ.
ನೆರೆಯ ತೆಲಂಗಾಣದ (Telangana) ಮೆಹಬೂಬ್‌ನಗರ (Mahbubnagar) ಜಿಲ್ಲೆಯಲ್ಲಿಯೂ ರೈತರ ಹೊಲಕ್ಕೆ ನುಗಿದ್ದ ಕಳ್ಳರು 150 ಕೆಜಿಗೂ ಅಧಿಕ ಟೊಮೆಟೋ ಕದ್ದಿದ್ದಾರೆ. ಮತ್ತೊಂದೆಡೆ ಮೆಹಬೂಬ್‌ನಗರ ಜಿಲ್ಲೆಯ ದೊರ್ನಕಲ್ ಗ್ರಾಮದ ತರಕಾರಿ ಅಂಗಡಿಗೆ ಕನ್ನ ಹಾಕಿದ ಕಳ್ಳರು 5 ಕೆಜಿ ಹಸಿರು ಮೆಣಸು, 20 ಕೆಜಿ ಟೊಮೆಟೋವನ್ನು ಕದ್ದು ಪರಾರಿಯಾಗಿದ್ದಾರೆ. ಪೊಲೀಸರ ಪ್ರಕಾರ, ಬಿ. ಪ್ರಕಾಶ್ (B. Prakash) ಎಂಬ ವ್ಯಾಪಾರಿಯೊಬ್ಬರು ಗಾಂಧಿ ಚೌಕ್ ತರಕಾರಿ ಮಾರುಕಟ್ಟೆಯಲ್ಲಿರುವ (vegetable market)ತನ್ನ ಗೂಡಂಗಡಿಯಿಂದ ಬುಧವಾರ ಮಧ್ಯಾಹ್ನ ಹೊರಡುವ ಮೊದಲು 2,400 ರೂಪಾಯಿ ಮೌಲ್ಯದ ಟೊಮೆಟೊ (tomatoes) ಮತ್ತು 490 ರೂಪಾಯಿ ಮೌಲ್ಯದ ಹಸಿರು ಮೆಣಸಿನಕಾಯಿಯನ್ನು ಪ್ಲಾಸ್ಟಿಕ್ ಚೀಲದಿಂದ ಮುಚ್ಚಿ ಹೊರಗಿಟ್ಟು ಹೋಗಿದ್ದರು. ಆದರೆ ವಾಪಸ್ ಬರುವ ವೇಳೆ ಟೊಮೆಟೊ ಹಾಗೂ ಮೆಣಸು ಎರಡು ಕಳ್ಳತನವಾಗಿದೆ. ಈ ಬಗ್ಗೆ ಪ್ರಕಾಶ್ ಪೊಲೀಸರಿಗೆ ದೂರು ನೀಡಿದ್ದಾರೆ.
ಹಾಗೆಯೇ ನಮ್ಮ ರಾಜ್ಯದ ಹಾವೇರಿ ಜಿಲ್ಲೆಯ ಹೊಂಗಲ್ ಗ್ರಾಮದಲ್ಲಿಯೂ ಕಳ್ಳರು ಟೊಮೆಟೋ ಕದ್ದಿದ್ದಾರೆ. ಹೊಂಗಲ್ ಗ್ರಾಮದಲ್ಲಿ ರೈತ ಮಲ್ಲಪ್ಪ ಎಂಬುವವರು ಬೆಳೆದಿದ್ದ 2 ಲಕ್ಷ ಮೌಲ್ಯದ ಟೊಮೆಟೋ ಬೆಳೆಯನ್ನು ಹೊಲದಿಂದಲೇ ಕದ್ದೊಯ್ದಿದ್ದು, ಇದರಿಂದ ಬೆಳೆ ಬೆಳೆದ ಬೆಳೆಗಾರ ಸಂಕಷ್ಟಕ್ಕೀಡಾಗಿದ್ದಾನೆ. ಘಟನೆ ನಂತರ ಟೊಮೆಟೋ ಬೆಳೆ ಕಾಯುವುದಕ್ಕಾಗಿ ರೈತ ಮಲ್ಲಪ್ಪ ತನ್ನ ಜಮೀನಿನಲ್ಲಿ ಆರು ಸಿಸಿ ಕ್ಯಾಮರಾಗಳನ್ನು ಅಳವಡಿಸಿದ್ದಾರೆ.
ಒಂದೇ ತಿಂಗಳಲ್ಲಿ ದೇಶದಲ್ಲಿ ಟೊಮ್ಯಾಟೋ ಬೆಲೆಯಲ್ಲಿ ಶೇ. 1900ರಷ್ಟು ಏರಿಕೆ, ಏನು ಕಾರಣ?