ರಾಹುಲ್‌ ಗಾಂಧಿಗೆ ಶಿಕ್ಷೆ ತಗ್ಗಿಸದ ಹೈಕೋರ್ಟ್‌: ಅನರ್ಹತೆ ತಡೆಯಾಜ್ಞೆ ಅರ್ಜಿ ತಿರಸ್ಕಾರ

By Sathish Kumar KH  |  First Published Jul 7, 2023, 11:16 AM IST

'ಮೋದಿ ಸರ್‌ನೇಮ್‌ ಕುರಿತು ಅವಹೇಳ ಮಾಡಿ ಶಿಕ್ಷೆಗೆ ಒಳಗಾಗಿ ಸಂಸತ್‌ ಸದಸ್ಯತ್ವದಿಂದ ಅನರ್ಹಗೊಂಡಿರುವ ರಾಹುಲ್‌ ಗಾಂಧಿ ಅವರ ಮೇಲ್ಮನವಿ ಅರ್ಜಿಯನ್ನು ಹೈಕೋರ್ಟ್‌ ತಿರಸ್ಕರಿಸಿದೆ.


ಗಾಂಧಿನಗರ (ಜು.07)): 'ಮೋದಿ ಸರ್‌ನೇಮ್‌ ಹೊಂದಿರುವವರೆಲ್ಲಾ ಏಕೆ ಕಳ್ಳರಾಗಿರ್ತಾರೆ' ಎಂದು ಹೇಳಿದ್ದಕ್ಕೆ ಶಿಕ್ಷೆಗೆ ಒಳಗಾಗಿ ಸಂಸತ್‌ ಸದಸ್ಯತ್ವದಿಂದ ಅನರ್ಹಗೊಂಡಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು, ತಮ್ಮ ಶಿಕ್ಷೆಗೆ ತಡೆಯಾಜ್ಞೆ ನೀಡುವಂತೆ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಗುಜರಾತ್‌ ಹೈಕೋರ್ಟ್‌ ತಿರಸ್ಕರಿಸಿದೆ. ಈ ಮೂಲಕ ರಾಹುಲ್‌ ಗಾಂಧಿ ಅವರಿಗೆ ಸಂಸತ್‌ ಸದಸ್ಯನ ಅನರ್ಹತೆಯನ್ನು ಮುಂದುರೆಸಿದೆ.

ಕಳೆದ ಲೋಕಸಭಾ ಚುನಾವಣೆ ವೇಳೆ 'ಮೋದಿ ಸರ್‌ನೇಮ್‌ ಹೊಂದಿರುವವರೆಲ್ಲಾ ಏಕೆ ಕಳ್ಳರಾಗಿರ್ತಾರೆ' ಎಂದು ರಾಹುಲ್‌ಗಾಂಧಿ ಹೇಳಿಕೆ ನೀಡಿದ್ದರು. ಈ ಬಗ್ಗೆ ಮಾನನಷ್ಟ ಮೊಕದ್ದಮೆ ಹಾಗೂ ಒಂದುಸಮುದಾಯದ ವಿರುದ್ಧ ಅವಹೇಳ ಮಾಡಿದ್ದಕ್ಕೆ ದೂರು ದಾಖಲಿಸಲಾಗಿತ್ತು. ಈ ಕುರಿತು ವಿಚಾರಣೆ ಮಾಡಿದ್ದ ಸೂರತ್‌ ಜಿಲ್ಲಾ ನ್ಯಾಯಾಧೀಶರು ಮಾ.23ರಂದು ರಾಹುಲ್‌ಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದ್ದರು. ಇದರಿಂದ ಸಂಸತ್‌ ಸದಸ್ಯ ಸ್ಥಾನ ರದ್ದಾಗಿತ್ತು. ಈಗ ಹೈಕೋರ್ಟ್‌ನಲ್ಲಿ ಶಿಕ್ಷೆಗೆ ತಡೆ ನೀಡಲು ನಿರಾಕರಣೆ ಮಾಡಿದ ಹಿನ್ನೆಲೆಯಲ್ಲಿ, ರಾಹುಲ್‌ ಗಾಂಧಿ ವಿಸ್ತೃತ ಪೀಠಕ್ಕೆ ಅರ್ಜಿ ಸಲ್ಲಿಸುವ ಅವಕಾಶ ಇದೆ.

Tap to resize

Latest Videos

ಮೋದಿ ಸರ್‌ನೇಮ್ ಹೇಳಿಕೆ ವಿವಾದ: ಶಿಕ್ಷೆ ವಿರುದ್ಧ ರಾಹುಲ್‌ ಮೇಲ್ಮನವಿ: ಇಂದು ಹೈಕೋರ್ಟ್ ತೀರ್ಪು

ಪ್ರಕರಣದ ಹಿನ್ನೆಲೆಯೇನು? : ಕೋಲಾರದಲ್ಲಿ 2019ರಲ್ಲಿ ಚುನಾವಣಾ ಭಾಷಣ ಮಾಡುವ ವೇಳೆ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದರು. ಹೇಳಿಕೆ ವಿರುದ್ಧ ಗುಜರಾತ್‌ನ ಸೂರತ್ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಅಲ್ಲಿನ ಕೋರ್ಟ್‌ನಲ್ಲಿ ರಾಹುಲ್ ವಿರುದ್ಧ ಕೇಸ್ ಹಾಕಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಸೂರತ್ ನ್ಯಾಯಾಲಯ ರಾಹುಲ್ ಗಾಂಧಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಇದರ ಬೆನ್ನಲ್ಲೇ ಅವರ ಸಂಸತ್ ಸದಸ್ಯತ್ವ ಅನರ್ಹಗೊಂಡಿತ್ತು. ಅಲ್ಲದೇ ಸಂಸತ್ ಸದಸ್ಯರಿಗೆ ನೀಡಲಾಗುವ ಬಂಗಲೆ ಖಾಲಿ ಮಾಡುವಂತೆ ಸಂಸತ್ ಕಾರ್ಯದರ್ಶಿ ಅವರಿಗೆ ನೋಟಿಸ್ ಕಳುಹಿಸಿದ್ದರು. ಹೀಗಾಗಿ ಅವರು ಮನೆ ಖಾಲಿ ಮಾಡಿ ತಾಯಿ ಸೋನಿಯಾ ಗಾಂಧಿ ಇದ್ದ ನಿವಾಸಕ್ಕೆ ಬಂದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಹೈಕೋರ್ಟ್ ಶಿಕ್ಷೆಗೆ ತಡೆಯಾಜ್ಞೆ ನೀಡಲು ನಿರಾಕರಣೆ ಮಾಡಿದೆ.

ಇಂದು ಪ್ರಜಾಪ್ರಭುತ್ವದ ಬ್ಲಾಕ್ ಡೇ: ರಾಹುಲ್ ಗಾಂಧಿ ಕುರಿತ ನ್ಯಾಯಾಲಯ ವಿಚಾರಣೆ ಕುರಿತು ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು, ರಾಹುಲ್ ಅನರ್ಹತೆ ವಿರುದ್ಧ ಹೈಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಕೆ ಮಾಡಿದ್ದರು. ಆ ಅರ್ಜಿಯನ್ನ ವಜಾ ಮಾಡಲಾಗಿದೆ. ಆದ್ದರಿಂದ ಇಂದು ಪ್ರಜಾಪ್ರಭುತ್ವದ ಬ್ಲಾಕ್‌ ಡೇ ಆಗಿದೆ ಎಂದು ಹೇಳಿದರು. ರಾಹುಲ್ ಅವರ ರಾಜಕೀಯ ಬೆಳವಣಿಗೆ ಬಿಜೆಪಿ ಕುತಂತ್ರ ಮಾಡಿದ್ದಾರೆ. ನ್ಯಾಯದ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಅದನ್ನು ಮೊಟಕುಗೊಳಿಸುವ ಹುನ್ನಾರ ಮಾಡ್ತಿದ್ದಾರೆ. ಇಡೀ ದೇಶದಲ್ಲಿ ವಿರೋಧ ಪಕ್ಷಗಳು ರಾಹುಲ್ ಜೊತೆಗಿದೆ.

ಮದುವೆ ಆಗದೇ ಯಾರೂ ಪ್ರಧಾನಿಯಾಗಿಲ್ಲ.. ರಾಹುಲ್‌ ಗಾಂಧಿಗೆ ಸಲಹೆ ನೀಡಿದ ಲಾಲು ಪ್ರಸಾದ್‌!

ಮಧ್ಯಾಹ್ನ 3.30ಕ್ಕೆ ಕಾಂಗ್ರೆಸ್ ‌ಶಾಸಕರ ಪ್ರತಿಭಟನೆ:  ಕಾಂಗ್ರೆಸ್ ಪಕ್ಷ‌ ರಾಹುಲ್ ಜೊತೆಗಿದೆ. ಭಾರತ್‌ ಜೋಡೋ ಯಾತ್ರೆ ಮೂಲಕ ಅನ್ಯಾಯ ವಿರುದ್ಧ ಹೋರಾಟ ಮಾಡಿದ್ದರು. ಇನ್ನು ಕರ್ನಾಟಕದ ಬೆಂಗಳೂರಿನಲ್ಲಿ ಮಧ್ಯಾಹ್ನ 3.30ಕ್ಕೆ ಕಾಂಗ್ರೆಸ್ ‌ಶಾಸಕರು ಮಹಾತ್ಮ ಗಾಂಧಿ ಪ್ರತಿಮೆ‌ ಎದುರು ಪ್ರತಿಭಟನೆ ಮಾಡುತ್ತೇವೆ. ಜೊತೆಗೆ, ಎಲ್ಲಾ ವಿಭಾಗೀಯ ಕೇಂದ್ರಗಳಲ್ಲೂ ಕೂಡ ಪ್ರತಿಭಟನೆಗೆ ಸೂಚನೆ ನೀಡಿದ್ದೇವೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

click me!