ಒಂದೇ ದಿನ, ಒಂದೇ ಸ್ಥಳ: 40 ಸಾವಿರ ಜನರಿಗೆ ಲಸಿಕೆ!

By Kannadaprabha NewsFirst Published Jun 7, 2021, 8:23 AM IST
Highlights

* 300 ಲಸಿಕಾ ಕೇಂದ್ರದಲ್ಲಿ ಲಸಿಕಾಕರಣ

* ಒಂದೇ ದಿನ, ಒಂದೇ ಸ್ಥಳ: 40 ಸಾವಿರ ಜನರಿಗೆ ಲಸಿಕೆ

* ಜನಸಂದಣಿ ಸೃಷ್ಟಿಆಗದಂತೆ ಅಭಿಯಾನ

ಹೈದರಾಬಾದ್‌(ಜೂ.07): ದಿನಕ್ಕೆ 40,000 ಜನರಿಗೆ ಲಸಿಕೆ ನೀಡುವ ಬೃಹತ್‌ ಗುರಿ ಹೊಂದಿರುವ ಮೆಗಾ ಲಸಿಕಾ ಅಭಿಯಾನವನ್ನು ತೆಲಂಗಾಣದಲ್ಲಿ ಭಾನುವಾರ ನಡೆಸಲಾಯಿತು.

ರಾಜ್ಯದ ಮಾಧಪುರ ಹೈಟೆಕ್ಸ್‌ ಪ್ರದರ್ಶನ ಮೈದಾನದಲ್ಲಿ ಕೋವ್ಯಾಕ್ಸಿನ್‌ ಲಸಿಕಾ ಅಭಿಯಾನಕ್ಕೆಂದೇ ಮೂರು ಹಾಲ್‌ಗಳಲ್ಲಿ ತಲಾ 100 ಲಸಿಕಾ ಕೌಂಟರ್‌ಗಳನ್ನು ಸ್ಥಾಪಿಸಲಾಗಿತ್ತು. ಇಲ್ಲಿ ಸುಮಾರು 40 ಸಾವಿರ ಜನರು ಆಗಮಿಸಿ ಲಸಿಕೆ ಪಡೆದಿದ್ದು ವಿಶೇಷವಾಗಿತ್ತು.

ಚೀನಾ ಲ್ಯಾಬ್‌ನಲ್ಲೇ ಕೊರೋನಾ ಹುಟ್ಟು, ಅಮೆರಿಕಾದ ಫಂಡಿಂಗ್: ಮೋಸ ಮಾಡಿದ್ದ ಡ್ರ್ಯಾಗನ್!

ಮೆಡಿಕವರ್‌, ಸೈಬರಾಬಾದ್‌ ಭದ್ರತಾ ಮಂಡಳಿ ಮತ್ತು ಸೈಬರಾಬಾದ್‌ ಪೊಲೀಸ್‌ ಸಹಯೋಗದಲ್ಲಿ ಈ ಅಭಿಯಾನ ಆಯೋಜಿಸಲಾಗಿತ್ತು. ‘ಸಾಕಷ್ಟುಜನರು ಲಸಿಕೆಗಾಗಿ ಕಾಯುತ್ತಿದ್ದಾರೆ. ಆದರೆ ಎಲ್ಲಿ, ಹೇಗೆಂದು ಅವರಿಗೆ ತಿಳಿದಿಲ್ಲ. ಹಾಗಾಗಿ ಈ ಅಭಿಯಾನ ನಡೆಸಲಾಯಿತು’ ಎಂದು ಮೆಡಿಕವರ್‌ ಆಸ್ಪತ್ರೆ ಮುಖ್ಯಸ್ಥ ಡಾ.ಅನಿಲ್‌ ಕೃಷ್ಣ ತಿಳಿಸಿದ್ದಾರೆ.

ಇಷ್ಟೊಂದು ಜನರು ಬಂದರೂ ಇಲ್ಲಿ ಯಾವುದೇ ನೂಕುನುಗ್ಗಲು, ಗದ್ದಲ ಇರಲಿಲ್ಲ. ಜನಸಂದಣಿ ಸೃಷ್ಟಿಯಾಗದಂತೆ ನೋಡಿಕೊಂಡು ಲಸಿಕಾ ಅಭಿಯಾನ ಆಯೋಜಿಸಿದ್ದು ಗಮನ ಸೆಳೆಯಿತು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!