ಮಕ್ಕಳ ಮೇಲೆ ಕೋವಾಕ್ಸಿನ್ ಪ್ರಯೋಗಕ್ಕೆ ಮುಂದಾದ ದೆಹಲಿ ಏಮ್ಸ್!

By Suvarna NewsFirst Published Jun 6, 2021, 10:21 PM IST
Highlights
  • ದೆಹಲಿ ಏಮ್ಸ್ ಆಸ್ಪತ್ರೆಯಿಂದ ಮಹತ್ವದ ಹೆಜ್ಜೆ
  • 3ನೇ ಅಲೆಯಿಂದ ಮಕ್ಕಳನ್ನು ರಕ್ಷಿಸಲು ಮುಂದಾದ ಏಮ್ಸ್
  • 2 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ನೀಡುವ ಕಾಲ ಮತ್ತಷ್ಟು ಸನ್ನಿಹಿತ

ದೆಹಲಿ(ಜೂ.06): ಕೊರೋನಾ ವಿರುದ್ಧದ ಹೋರಾಟಕ್ಕೆ ಮತ್ತಷ್ಟು ಬಲಬಂದಿದೆ. ಇದೀಗ ಮಕ್ಕಳಿಗೂ ಲಸಿಕೆ ನೀಡುವಿಕೆ ಪ್ರಯೋಗ ಮತ್ತೊಂದು ಹಂತ ತಲುಪಿದೆ. ಪಾಟ್ನಾ ಏಮ್ಸ್ ಮಕ್ಕಳ ಮೇಲೆ ಕೋವಾಕ್ಸಿನ್ ಲಸಿಕೆ ಪ್ರಯೋಗಿಸಿ ಯಶಸ್ವಿಯಾದ ಬೆನ್ನಲ್ಲೇ ಇದೀಗ ದೆಹಲಿ ಏಮ್ಸ್ ನಾಳೆಯಿಂದ(ಜೂ.07) ರಿಂದ ಮಕ್ಕಳ ಮೇಲೆ ದೇಸಿ ಲಸಿಕೆ ಕೋವಾಕ್ಸಿನ್ ಪ್ರಯೋಗ ಮಾಡುತ್ತಿದೆ.

ಮೈಸೂರಿನಲ್ಲಿ 60 ಮಕ್ಕಳ ಮೇಲೆ ಕೊವ್ಯಾಕ್ಸಿನ್ ಪ್ರಯೋಗಕ್ಕೆ ನಿರ್ಧಾರ

ಕೊರೋನಾ ಮೂರನೇ ಅಲೆ ಮಕ್ಕಳನ್ನು ಹೆಚ್ಚು ಕಾಡಲಿದೆ ಅನ್ನೋ ತಜ್ಞರ ವರದಿ ಪೋಷಕರನ್ನು ಮತ್ತಷ್ಟು ಆತಂಕಕ್ಕೀಡು ಮಾಡಿದೆ. ಆದರೆ ಇದೀಗ ಏಮ್ಸ್ ನಿರ್ಧಾರ ಕೊಂಚ ಸಮಾಧಾನ ತಂದಿದೆ. 3ನೇ ಅಲೆಯಿಂದ ಮಕ್ಕಳನ್ನು ರಕ್ಷಿಸಲು  ಇದೀಗ ಲಸಿಕೆ ಪ್ರಯೋಗ ನಡೆಯುತ್ತಿದೆ.

ಕಳೆದ ಪಾರ ಪಾಟ್ನಾ ಏಮ್ಸ್ ಆಸ್ಪತ್ರೆ 2 ರಿಂದ 18 ವರ್ಷ ಮಕ್ಕಳ ಮೇಲೆ ಕೋವಾಕ್ಸಿನ್ ಲಸಿಕೆ ಪ್ರಯೋಗ ಮಾಡಿತ್ತು. ಮಕ್ಕಳ ಮೇಲೆ ಲಸಿಕೆ ಪ್ರಯೋಗ ಮಾಡಲು ಡ್ರಗ್ ಕಂಟ್ರೋಲ್ ಆಫ್ ಇಂಡಿಯಾ(DGCI) ಅನುಮತಿ ನೀಡಿದ ಬಳಿಕ ಈ ಸಾಹಸಕ್ಕೆ ಏಮ್ಸ್ ಮುಂದಾಗಿದೆ. 

ಭಾರತದಲ್ಲಿ ನೀಡಲು ಉದ್ದೇಶಿಸಿರುವ 8 ಲಸಿಕೆ ಕುರಿತು ತಿಳಿಯಬೇಕು ಒಂದಿಷ್ಟು!.

2 ರಿಂದ 3 ಕ್ಲಿನಿಕಲ್ ಟ್ರಯಲ್ ನಡೆಸಲು ಅನುಮತಿ ನೀಡಿದ ಬಳಿಕ ಏಮ್ಸ್ ಪಾಟ್ನಾ ಮಕ್ಕಳ ಮೇಲೆ ಪ್ರಯೋಗ ಮಾಡಿತ್ತು. ಇದೀಗ ದೆಹಲಿ ಏಮ್ಸ್ , ಪಾಟ್ನಾ ಏಮ್ಸ್ ಹಾಗೂ ಮೆಡಿಟ್ರಿನಾ ಮೆಡಿಕಲ್ ಸೈನ್ಸ್ ನಾಗ್ಪುರ ಜೊತೆಗಿನ ಸಹಯೋಗದಲ್ಲಿ ಈ ಮಹತ್ವದ ಹೆಜ್ಜೆ ಇಟ್ಟಿದೆ.

ಭಾರತದಲ್ಲಿ ದೇಶಿಯ ಕೋವಾಕ್ಸಿನ್, ಸೀರಂ ಸಂಸ್ಥೆಯ ಕೋವೀಶೀಲ್ಡ್ ಹಾಗೂ ರಷ್ಯಾದ ಸ್ಪುಟ್ನಿಕ್ ಲಸಿಕೆ ಲಭ್ಯವಿದೆ. ಆದರೆ 2 ರಿಂದ 18 ವರ್ಷದ ಮಕ್ಕಳ ಮೇಲಿನ ಲಸಿಕೆ ಪ್ರಯೋಗಕ್ಕೆ DGCI ಕೇವಲ ಕೋವಾಕ್ಸಿನ್‌ ಲಸಿಕೆಗೆ ಮಾತ್ರ ಅನುಮತಿ ನೀಡಿದೆ.

ಶುಭ ಸುದ್ದಿ : ರಾಜ್ಯದಲ್ಲೇ ಕೋವಿಡ್ ಲಸಿಕೆ ತಯಾರಿಕೆ

ಅಮೆರಿಕ ಮತ್ತು ಕೆನಡಾ ಮಕ್ಕಳಿಗೆ ಫೈಜರ್ ಲಸಿಕೆಯನ್ನು ನಿಗದಿತ ವಯಸ್ಸಿನ ಮಕ್ಕಳ ಮೇಲೆ ನೀಡಲು ಅನುಮೋದನೆ ನೀಡಿದೆ. ಇನ್ನು  3 ರಿಂದ 17 ವರ್ಷದೊಳಗಿನ ಮಕ್ಕಳಿಗೆ ಚೀನಾದ ಸಂಸ್ಥೆ ಸಿನೋವಾಕ್ ತಯಾರಿಸಿದ  ಲಸಿಕೆಯ ಕೊರೊನಾವಾಕ್ ತುರ್ತು ಬಳಕೆಗೆ ಅನುಮತಿ ನೀಡಿದೆ.

click me!