ಸೋಂಕು-ಸಾವು: ಎರಡರಲ್ಲೂ ದಾಖಲೆ ಇಳಿಕೆ: ಪಾಸಿಟಿವಿಟಿ ದರ 5.62%ಗೆ ಇಳಿಕೆ!

By Suvarna NewsFirst Published Jun 7, 2021, 7:51 AM IST
Highlights

* ಸೋಂಕು-ಸಾವು: ಎರಡರಲ್ಲೂ ದಾಖಲೆ ಇಳಿಕೆ

* ಭಾನುವಾರ 1.14 ಲಕ್ಷ ಕೇಸ್‌: 60 ದಿನದ ಕನಿಷ್ಠ

* 2,677 ಸಾವು: 42 ದಿನದ ಕನಿಷ್ಠ

* ಪಾಸಿಟಿವಿಟಿ ದರ 5.62%ಗೆ ಇಳಿಕೆ

* ಸಕ್ರಿಯ ಕೇಸ್‌ 15 ಲಕ್ಷಕ್ಕಿಂತ ಕಡಿಮೆ

ನವದೆಹಲಿ(ಜೂ.07): ಭಾನುವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ 1,14,460 ಕೊರೋನಾ ಪ್ರಕರಣಗಳು ದೃಢಪಟ್ಟಿವೆ. ಇದು ಕಳೆದ 60 ದಿನಗಳಲ್ಲೇ ಕನಿಷ್ಠ ಸಂಖ್ಯೆ. ಕಳೆದ ಏ.6ರಂದು ದೇಶದಲ್ಲಿ 96,982 ಕೇಸುಗಳು ಪತ್ತೆಯಾಗಿದ್ದವು. ಅದಾದ ಬಳಿಕ ಇಷ್ಟುಕಡಿಮೆ ಕೋವಿಡ್‌ ಕೇಸ್‌ ದೃಢಪಟ್ಟಿರುವುದು ಇದೇ ಮೊದಲು.

ಇನ್ನು ಇದೇ ಅವಧಿಯಲ್ಲಿ 2677 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದೂ ಸಹ ಕಳೆದ 42 ದಿನಗಳ ಕನಿಷ್ಠ ಸಂಖ್ಯೆಯಾಗಿದೆ.

ಚೀನಾ ಲ್ಯಾಬ್‌ನಲ್ಲೇ ಕೊರೋನಾ ಹುಟ್ಟು, ಅಮೆರಿಕಾದ ಫಂಡಿಂಗ್: ಮೋಸ ಮಾಡಿದ್ದ ಡ್ರ್ಯಾಗನ್!

ಕೋವಿಡ್‌ ಎರಡನೇ ಅಲೆ ಆರ್ಭಟ ಸತತವಾಗಿ ಇಳಿಮುಖವಾಗಿರುವುದರಿಂದ ಒಟ್ಟು ಸಕ್ರಿಯ ಕೇಸುಗಳ ಸಂಖ್ಯೆ 14.77 ಲಕ್ಷಕ್ಕೆ ಇಳಿಕೆಯಾಗಿದೆ. ಚೇತರಿಕೆ ಪ್ರಮಾಣ ಶೇ.93.67ರಷ್ಟಿದೆ. ದೈನಂದಿನ ಪಾಸಿಟಿವಿಟಿ ದರ ಶೇ.5.62ಕ್ಕೆ ಇಳಿಕೆಯಾಗಿದೆ. ಒಟ್ಟು ಸೋಂಕಿತರ ಪೈಕಿ 2.69 ಕೋಟಿ ಮಂದಿ ಗುಣಮುಖರಾಗಿದ್ದಾರೆ.

ಜಪಾ​ನ್‌​ನಲ್ಲಿ 12-15 ವರ್ಷ​ದ ಮಕ್ಕ​ಳಿಗೆ ಫೈಝರ್‌ ಲಸಿಕೆ!

ಭಾನುವಾರ ಮೃತಪಟ್ಟವರ ಪೈಕಿ ಮಹಾರಾಷ್ಟ್ರದಲ್ಲಿ 741, ತಮಿಳುನಾಡಿನಲ್ಲಿ 443, ಕರ್ನಾಟಕದಲ್ಲಿ 365, ಕೇರಳದಲ್ಲಿ 260, ಉತ್ತರ ಪ್ರದೇಶದಲ್ಲಿ 120, ಬಂಗಾಳದಲ್ಲಿ 118 ಮಂದಿ ಸಾವಿಗೀಡಾಗಿದ್ದಾರೆ.

ಈ ಮೂಲಕ ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 2.88 ಕೋಟಿಗೆ ಏರಿಕೆಯಾಗಿದೆ. ಒಟ್ಟು ಸಾವಿಗೀಡಾದವರ ಸಂಖ್ಯೆ 3,46,759ಕ್ಕೆ ತಲುಪಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!