40,000 ಕೋಟಿ ಸಾಲವಿದ್ದರೂ, ಅಧಿಕಾರಿಗಳಿಗೆ 32 ಐಷಾರಾಮಿ ಕಾರು ಖರೀದಿಸಿದ ರಾಜ್ಯ!

By Suvarna NewsFirst Published Jun 14, 2021, 12:55 PM IST
Highlights

* ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ತೆಲಂಗಾಣ ಸರ್ಕಾರದ ಶೋಕಿ

* ಸರ್ಕಾರದ ವತಿಯಿಂದ ಬೋನಸ್ ರೂಪದಲ್ಲಿ ಬಳಸಲು ಐಷಾರಾಮಿ ಕಾರುಗಳ ಖರೀದಿ

* ಪ್ರತಿ ಕಾರಿನ ಬೆಲೆ 25 ರಿಂದ 30 ಲಕ್ಷ ಅಂದಾಜು

ಹೈದರಾಬಾದ್(ಜೂ.14): ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ತೆಲಂಗಾಣವು 32 ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ ಸರ್ಕಾರದ ವತಿಯಿಂದ ಬೋನಸ್ ರೂಪದಲ್ಲಿ ಬಳಸಲು ಐಷಾರಾಮಿ ಕಾರುಗಳನ್ನು ಖರೀದಿಸಿದೆ. ಸದ್ಯ ಈ ವಿಚಾರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅಧಿಕಾರಿಗಳಿಗಾಗಿ 32 ಕಿಯಾ ಕಾರ್ನಿವಲ್ ಕಾರುಗಳನ್ನು ಖರೀದಿಸಿದ್ದಾರೆ. ಪ್ರತಿ ಕಾರಿನ ಬೆಲೆ 25 ರಿಂದ 30 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ. ಈ ಕಾರು ಖರೀದಿ ವಿಚಾರವಾಗಿ ಸಾವಾಲೆತ್ತಿರುವ ವಿಪಕ್ಷಗಳು ಇದು ಅನಗತ್ಯವಾಗಿತ್ತು. ರಾಜ್ಯವನ್ನು ಕೊರೋನಾ ಕಾಡುತ್ತಿದೆ, ಸುಮಾರು ನಲ್ವತ್ತು ಸಾವಿರ ಕೋಟಿ ಸಾಲವಿದೆ, ಇಂತಹ ಸಂದರ್ಭದಲ್ಲಿ ಈ ಶೋಕಿ ಬೇಕಿತ್ತಾ ಎಂದು ಪ್ರಶ್ನಿಸಿದ್ದಾರೆ.

400 ಬುಡಕಟ್ಟು ಕುಟುಂಬಗಳಿಗೆ ನೆರವಾದ ನಟ ರಾಣಾ ದಗ್ಗುಬಾಟಿ!

ಭಾನುವಾರದಂದು ತೆಲಂಗಾಣದ ಸಾರಿಗೆ ಸಚಿವ ಪುವ್ವಾಡಾ ಅಜಯ್ ಕುಮಾರ್, ಹೈದರಾಬಾದ್‌ನಲ್ಲಿರುವ ಮುಖ್ಯಮಂತ್ರಿ ನಿವಾಸದಿಂದ ಈ ಕಾರುಗಳಿಗೆ ಹಸಿರು ನಿಶಾನೆ ತೋರಿಸಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯ ಕಾರ್ಯದರ್ಶಿ ಸೇರಿ ಅನೇಕ ಅಧಿಕಾರಿಗಳಿದ್ದರು. ಈ ಹಿಂದೆ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರೇ ಈ ಕಾರುಗಳನ್ನು ಪರಿಶೀಲಿಸಿದ್ದರು. ಈ ವಿಷಯದಲ್ಲಿ ಬಿಜೆಪಿ ಆಕ್ರಮಣಕಾರಿ ನಿಲುವು ತೆಗೆದುಕೊಂಡಿದೆ. ಪಕ್ಷದ ವಕ್ತಾರ ಕೃಷ್ಣ ಸಾಗರ್ ರಾವ್ ಅವರು ಮುಖ್ಯಮಂತ್ರಿ ರಾವ್ ಅವರ ಕೃತ್ಯವನ್ನು "ಕ್ರಿಮಿನಲ್ ವಂಚನೆ" ಎಂದು ಬಣ್ಣಿಸಿದ್ದಾರೆ. ಅಲ್ಲದೇ ಇದು "ಅಧಿಕಾರಿಗಳನ್ನು ಮೆಚ್ಚಿಸುವ" ಕಾರ್ಯ ಎಂದೂ ಆರೋಪಿಸಿದ್ದಾರೆ. 

ಇಷ್ಟೇ ಅಲ್ಲದೇ 32 ಐಷಾರಾಮಿ ವಾಹನಗಳನ್ನು ಖರೀದಿಸಲು 11 ಕೋಟಿ ರೂ.ಗಿಂತ ಹೆಚ್ಚಿನ ಹಣವನ್ನು ಖರ್ಚು ಮಾಡುವುದನ್ನು ಮುಖ್ಯಮಂತ್ರಿ ಹೇಗೆ ಸಮರ್ಥಿಸಿಕೊಳ್ಳುತ್ತಾರೆ. ಯೋಚಿಸದೆ ತೆಗೆದುಕೊಂಡ ಇಂತಹ ನಿರ್ಧಾರಗಳು ಭಯ ಹುಟ್ಟಿಸುವಂತಿರುತ್ತವೆ ಎಂದೂ  ಕೃಷ್ಣ ಸಾಗರ್ ರಾವ್ ಹೇಳಿದ್ದಾರೆ.

ಕಿರುಕುಳ ಓಲ್ಡ್ ಫ್ಯಾಷನ್, ಸೊಸೆಯನ್ನು ಗಟ್ಟಿ ತಬ್ಬಿಕೊಂಡ ಸೋಂಕಿತ ಅತ್ತೆ..!

ರಾಜ್ಯವು ಕೊರೋನಾ ಎದುರಿಸುತ್ತಿದೆ, ಚಿಕಿತ್ಸೆಯಿಂದಾಗಿ ಬಡ ಜನರು ಭಾರಿ ಸಾಲದಲ್ಲಿದ್ದಾರೆ. ಹೀಗಿರುವಾಗ ರಾಜ್ಯ ನಾಯಕರು ಸಾರ್ವಜನಿಕ ಹಣವನ್ನು ವ್ಯರ್ಥ ಮಾಡುತ್ತಿದ್ದಾರೆ. ಕಾರು ಖರೀದಿಸುವ ನಿರ್ಧಾರವನ್ನು ತಕ್ಷಣ ಹಿಂತೆಗೆದುಕೊಳ್ಳಬೇಕೆಂದು ಬಿಜೆಪಿ ಒತ್ತಾಯಿಸಿದೆ. ಮತ್ತೊಂದೆಡೆ, ಸಿಎಂ ರಾವ್ ಅವರ ಈ ಕ್ರಮವನ್ನು ಕಾಂಗ್ರೆಸ್ ದುಸ್ಸಾಹಸ ಎಂದು ಬಣ್ಣಿಸಿದೆ. 

click me!