ಸೋಷಲಿಸಂ-ಮಮತಾ ಬ್ಯಾನರ್ಜಿ ಮದುವೆ!

By Suvarna News  |  First Published Jun 14, 2021, 12:05 PM IST

* ತಮಿಳುನಾಡಿನ ಸೇಲಂನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಸೋಷಲಿಸಂ-ಮಮತಾ ಬ್ಯಾನರ್ಜಿ

 * ವಧು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಲ್ಲ

 * ದೀದಿ ಈ ಹಿಂದೆ ಕಾಂಗ್ರೆಸ್‌ ಪಕ್ಷದಲ್ಲಿ ಇದ್ದ ಸಂದರ್ಭದಲ್ಲಿ ಅವರ ದಿಟ್ಟತನದಿಂದ ಪ್ರೇರಿತರಾಗಿ ವಧುವಿನ ಪೋಷಕರು ತಮ್ಮ ಮಗಳಿಗೂ ಪಿ.ಮಮತಾ ಬ್ಯಾನರ್ಜಿ ಎಂದು ಹೆಸರಿಟ್ಟಿದ್ದರು


ಚೆನ್ನೈ(ಜೂ.14): ಪಶ್ಚಿಮ ಬಂಗಾಳ ಸಿಎಂ ಹಾಗೂ ಕಮ್ಯೂನಿಸ್ಟರು ಅಪ್ಪಟ ವಿರೋಧಿಗಳು. ಇವರಿಬ್ಬರು ಹಾವು ಮುಂಗುಸಿಗಳೆಂಬ ಸತ್ಯ ಇಡೀ ಜಗತ್ತಿಗೇ ತಿಳಿದಿದೆ. ಆದರೆ ತಮಿಳುನಾಡಿನಲ್ಲಿ ಇದಕ್ಕೆ ತದ್ವಿರುದ್ಧವಾದ ಘಟನೆ ನಡೆದಿದ್ದು, ಇಲ್ಲಿ ಮಮತಾ ಬ್ಯಾನರ್ಜಿ ಹಾಗೂ ಸೋಶಿಯಲಿಸಂ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಾಗಂತ ವಧು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಲ್ಲ. ಆದರೆ ದೀದಿಗೂ ವಧುವಿನ ಹೆಸರಿಗೂ ಸಂಬಂಧ ಇದೆ.

15 ಜನರ ನಡುವೆ ನಡೆದ ಮದುವೆ, ಎಲ್ಲಾ ಕೆಲಸ ನಮ್ಮದೆ: ಡ್ಯಾನಿಶ್ ಸೇಠ್

Tap to resize

Latest Videos

ದೀದಿ ಈ ಹಿಂದೆ ಕಾಂಗ್ರೆಸ್‌ ಪಕ್ಷದಲ್ಲಿ ಇದ್ದ ಸಂದರ್ಭದಲ್ಲಿ ಅವರ ದಿಟ್ಟತನದಿಂದ ಪ್ರೇರಿತರಾಗಿ ವಧುವಿನ ಪೋಷಕರು ತಮ್ಮ ಮಗಳಿಗೂ ಪಿ.ಮಮತಾ ಬ್ಯಾನರ್ಜಿ ಎಂದು ಹೆಸರಿಟ್ಟಿದ್ದರು. ವಧು, ಪಿ. ಮಮತಾ ಬ್ಯಾನರ್ಜಿ, ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಕುಟುಂಬದಿಂದ ಬಂದವರು.

ಇನ್ನು ಅತ್ತ 29 ವರ್ಷದ ಮದುಮಗ ಸೋಶಿಯಲಿಸಂ ವಧುವಿನ ಸಂಬಂಧಿಯೇ ಆಗಿದ್ದಾನೆ. ಬಿಕಾಂ ಪದವಿ ಪಡೆದಿರುವ ಆತ ಬೆಳ್ಳಿ ಚೈನ್ ಮಾರುವ ವ್ಯವಹಾರ ನಡೆಸುತ್ತಿದ್ದಾನೆ.  ತಂದೆ ಮೋಹನ್‌ ಪ್ರಸ್ತುತ ಸೇಲಂನ ಸಿಪಿಐ ಜಿಲ್ಲಾ ಕಾರ್ಯದರ್ಶಿ. ಕಮ್ಯೂನಿಸ್ಟ್‌ ಸಿದ್ಧಾಂತ ನಂಬಿಕೊಂಡು ಬಂದ ಹಿನ್ನೆಲೆಯಲ್ಲಿ ಅವರು ತಮ್ಮ ಮೂವರು ಗಂಡು ಮಕ್ಕಳಿಗೂ ಕಮ್ಯೂನಿಸಂ, ಲೆನಿನಿಸಂ ಮತ್ತು ಸೋಶಿಯಲಿಸಂ ಎಂದು ಹೆಸರಿಟ್ಟಿದ್ದರು. ಮೋಹನ್ ಅವರು ಮದುವೆಗೂ ಮೊದಲೇ ತಮ್ಮ ಮಕ್ಕಳಿಗೆ ಈ ರೀತಿ ಹೆಸರಿಸಲು ನಿರ್ಧರಿಸಿದ್ದಾರೆ ಎಂದು ಹೇಳಿದ್ದಾರೆ.

15 ಜನರ ನಡುವೆ ನಡೆದ ಮದುವೆ, ಎಲ್ಲಾ ಕೆಲಸ ನಮ್ಮದೆ: ಡ್ಯಾನಿಶ್ ಸೇಠ್

 ಇವರಿಬ್ಬರು ಭಾನುವಾರ ವಿವಾಹವಾಗಿದ್ದಾರೆ. ವಧುವರರ ಹೆಸರನ ವಿಶಿಷ್ಟತೆಯಿಂದಾಗಿ ಈ ಮದುವೆಯ ಆಮಂತ್ರಣ ಪತ್ರಿಕೆ ವೈರಲ್‌ ಆಗಿತ್ತು.

click me!