ಹೈದರಾಬಾದ್: ಸ್ವತಃ ವೈದ್ಯರು ಆಗಿರುವ ತೆಲಂಗಾಣದ ರಾಜ್ಯಪಾಲರೂ ಆಗಿರುವ ತಮಿಳಿಸೈ ಸೌಂದರರಾಜನ್ ಅವರು ವಿಮಾನದಲ್ಲಿ ಐಎಎಸ್ ಅಧಿಕಾರಿಯೊಬ್ಬರಿಗೆ ತುರ್ತು ಚಿಕಿತ್ಸೆ ನೀಡುವ ಮೂಲಕ ಜೀವ ಉಳಿಸಿದ್ದಾರೆ. ಶನಿವಾರ ದೆಹಲಿಯಿಂದ ಹೈದರಾಬಾದ್‌ಗೆ ಇಂಡಿಗೋ ಏರ್‌ಲೈನ್ಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಶ್ರೇಣಿಯ ಐಪಿಎಸ್ ಅಧಿಕಾರಿಯೊಬ್ಬರ ಜೀವವನ್ನು ಉಳಿಸಿದ್ದಾರೆ.
ವೃತ್ತಿಯಲ್ಲಿ ವೈದ್ಯರಾಗಿರುವ ರಾಜ್ಯಪಾಲರು ಹಾಗೂ ಐಪಿಎಸ್ ಅಧಿಕಾರಿ ಒಂದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಐಪಿಎಸ್ ಅಧಿಕಾರಿ ಅಸ್ವಸ್ಥರಾಗಿದ್ದಾರೆ. ವಿಮಾನದ ಸಿಬ್ಬಂದಿ ವಿಮಾನದಲ್ಲಿ ಯಾರಾದರೂ ವೈದ್ಯರು ಇದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ತೆಲಂಗಾಣದ ರಾಜ್ಯಪಾಲರೂ ಆಗಿರುವ ತಮಿಳಿಸೈ ಸೌಂದರರಾಜನ್ ಅವರು ಸ್ವತಃ ಮುಂದೆ ಬಂದು ಆ ಅಧಿಕಾರಿಗೆ ಚಿಕಿತ್ಸೆ ನೀಡಿದ್ದಾರೆ.
ಈ ವಿಚಾರವನ್ನು ರವಿ ಚಂದರ್ ನಾಯ್ಕ್ ಮುದಾವತ್ ಅವರು ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಫೋಟೋಗಳನ್ನು ಪೋಸ್ಟ್ ಮಾಡಿ ಘಟನೆಯನ್ನು ಅವರು ವಿವರಿಸಿದ್ದಾರೆ. 1994ರ ಐಎಎಸ್ ಬ್ಯಾಚ್‌ನ ಕೃಪಾನಂದ ತ್ರಿಪಾಠಿ ಉಜೆಲಾ ಅವರೇ ರಾಜ್ಯಪಾಲರು ತುರ್ತು ಚಿಕಿತ್ಸೆ ನೀಡಿ ರಕ್ಷಿಸಿದ ಐಎಎಸ್ ಅಧಿಕಾರಿ. ಈ ಬಗ್ಗೆ ಕೃಪಾನಂದ ತ್ರಿಪಾಠಿ ಉಜೆಲಾ ಅವರು ಪ್ರತಿಕ್ರಿಯಿಸಿದ್ದು, ಮೇಡಂ ಗವರ್ನರ್ ನನ್ನ ಜೀವವನ್ನು ಉಳಿಸಿದ್ದಾರೆ. ಅವರು ನನಗೆ ತಾಯಿಯಂತೆ ಸಹಾಯ ಮಾಡಿದ್ದಾರೆ. ಅವರಿಲ್ಲದೇ ಹೋಗಿದ್ದಲ್ಲಿ ನಾನು ಇಂದು ಆಸ್ಪತ್ರೆಯಲ್ಲಿ ಇರಲು ಕೂಡ ಆಗುತ್ತಿರಲಿಲ್ಲ ಎಂದು ಅವರು ಸುದ್ದಿಸಂಸ್ಥೆ ಪಿಟಿಐಗೆ ಪೋನ್ ಮೂಲಕ ವಿವರಿಸಿ ರಾಜ್ಯಪಾಲರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಕೃಪಾನಂದ ತ್ರಿಪಾಠಿ ಉಜೇಲಾ ಅವರು ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು, ಪ್ರಸ್ತುತ ಹೈದರಾಬಾದ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಂಧ್ರಪ್ರದೇಶ ಕೇಡರ್‌ಗೆ ಸೇರಿದ ಉಜೇಲಾ ಅವರು ಪ್ರಸ್ತುತ ಹೆಚ್ಚುವರಿ ಡಿಜಿಪಿ (ರಸ್ತೆ ಸುರಕ್ಷತೆ) ಆಗಿ ನೇಮಕಗೊಂಡಿದ್ದಾರೆ. ಮುದವತ್ ಅವರೇ ತೆಲಂಗಾಣ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್( @DrTamilisaiGuv) ಅವರು ನಮ್ಮೊಂದಿಗೆ ಇದ್ದಿದ್ದು ನಮ್ಮ ಪುಣ್ಯ. ನಾವು ನಮ್ಮ ಸೂಪರ್ ಹೀರೋಗಳಿಗೆ ನಮಸ್ಕರಿಸುತ್ತೇವೆ ಮತ್ತು ಅವರ ನಿಸ್ವಾರ್ಥ ಕೊಡುಗೆಗೆ ಕೇವಲ ಧನ್ಯವಾದ ಹೇಳಿದರೆ ಸಾಲುವುದಿಲ್ಲ ಎಂದು ಎಂದು ಇಂಡಿಗೋ ಟ್ವೀಟ್ ಮಾಡಿದೆ.
ಬುಡಕಟ್ಟು ಪ್ರದೇಶದಲ್ಲಿ ರಾಜ್ಯಪಾಲರ ಗ್ರಾಮವಾಸ್ತವ್ಯ
ಇತ್ತ ಹೈದರಾಬಾದ್‌ನಲ್ಲಿ ವಿಮಾನ ಬಂದಿಳಿದ ಕೂಡಲೇ ಐಎಎಸ್ ಅಧಿಕಾರಿ ಕೃಪಾನಂದ ತ್ರಿಪಾಠಿ ಅವರನ್ನು ನೇರವಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರಿಗೆ ಸರಣಿ ಪರೀಕ್ಷೆಗಳನ್ನು ನಡೆಸಿದಾಗ ಅವರಿಗೆ ಡೆಂಗ್ಯೂ ಇರುವುದು ಪತ್ತೆಯಾಗಿತ್ತು. ಜೊತೆಗೆ ಅವರ ಬಿಳಿ ರಕ್ತ ಕಣಗಳ ಸಂಖ್ಯೆ 14,000 ಕ್ಕೆ ಇಳಿದಿತ್ತು ಎಂದು ತಿಳಿದು ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ