ಮುಸ್ಲಿಮರಿಗೆ ಪ್ರತ್ಯೇಕ ಐಟಿ ಪಾರ್ಕ್, ವಿವಾದದ ಕಿಡಿ ಹೊತ್ತಿಸಿದ ಕೆಸಿಆರ್ ಘೋಷಣೆ!

By Suvarna NewsFirst Published Nov 24, 2023, 7:45 PM IST
Highlights

ನಾವು ಈ ಚುನಾವಣೆಯಲ್ಲಿ ಮತ್ತೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾದರೆ ಮುಸ್ಲಿಮರಿಗೆ ಪ್ರತ್ಯೇಕ ಐಟಿ ಪಾರ್ಕ್ ಸ್ಥಾಪಿಸಲಾಗುವುದು ಎಂದು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಘೋಷಿಸಿದ್ದಾರೆ. ಆದರೆ ಈ ಘೋಷಣೆ ವಿವಾದದ ಕಿಡಿ ಹೊತ್ತಿಸಿದೆ.

ಹೈದರಾಬಾದ್(ನ.24) ಒಲೈಕೆ ರಾಜಕಾರಣ, ಉಚಿತ ಭರವಸೆ ಇದೀಗ ಚುನಾವಣೆಯಲ್ಲಿ ಪ್ರಮುಖ ಅಸ್ತ್ರಗಳಾಗುತ್ತಿದೆ. ಸಮುದಾಯ, ಜಾತಿಗಳ ಒಲೈಕೆಗೆ ಯಾವ ಮಟ್ಟಕ್ಕೂ ಇಳಿಯಲು ರಾಜಾಕಾರಣಿಗಳು ಸಿದ್ಧರಿರುತ್ತಾರೆ. ಇದೀಗ ಪಂಚ ರಾಜ್ಯಗಳ ಚುನಾವಣೆಯಲ್ಲಿ ಮಾಡಿರುವ ಘೋಷಣೆ ಭಾರಿ ಸದ್ದು ಮಾಡುತ್ತಿದೆ. ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಇದೀಗ ಮಹತ್ವದ ಭರವಸೆ ನೀಡಿದ್ದಾರೆ. ಈ ಬಾರಿ ಮತ್ತೆ ನಮ್ಮನ್ನು ಗೆಲ್ಲಿಸಿದರೆ ಮುಸ್ಲಿಮರಿಗೆ ಪ್ರತ್ಯೇಕ ಐಟಿ ಪಾರ್ಕ್ ನಿರ್ಮಿಸಲಾಗುತ್ತದೆ ಎಂದಿದ್ದಾರೆ.

ಮಹೇಶ್ವರಂ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡ ಬಿಆರ್‌ಸ್ ಪಕ್ಷದ ಮುಖ್ಯಸ್ಥ ಕೆ ಚಂದ್ರಶೇಖರ್ ರಾವ್ ಭರ್ಜರಿ ಪ್ರಚಾರ ನಡೆಸಿದ್ದಾರೆ. ತೆಲಂಗಾಣ ಶಿಕ್ಷಣ ಸಚಿವೆ ಸಬಿತಾ ಇಂದ್ರ ರೆಡ್ಡಿ ಈ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಸಬಿತಾ ಪರ ಪ್ರಚಾರದಲ್ಲಿ ತೊಡಗಿದ ಕೆಸಿಆರ್, ಮುಸ್ಲಿಮರಿಗೆ ಹಲವು ಭರವಸೆ ನೀಡಿದ್ದಾರೆ.

Latest Videos

 

ತೆಲಂಗಾಣ ಚುನಾವಣಾ ಪ್ರಚಾರದಲ್ಲಿ ಮುಸ್ಲಿಂ ಸ್ಪೀಕರ್‌ ಬಗ್ಗೆ ಮಾತನಾಡಿ ವಿವಾದದಲ್ಲಿ ಸಿಲುಕಿದ ಜಮೀರ್‌ ಖಾನ್

ನಮ್ಮ ಸರ್ಕಾರ ಯುವ ಮುಸ್ಲಿಮರಿಗೆ ಪ್ರತ್ಯೇಕ ಟೆಕ್ನಾಲಜಿ ಪಾರ್ಕ್ ನಿರ್ಮಿಸಲು ಚಿಂತನೆ ನಡೆಸಿದ್ದೇವೆ. ಹೈದರಾಬಾದ್‌ನ ಪಹಡಿ ಶರೀಫ್ ಬಳಿ ಈ ಐಟಿ ಪಾರ್ಕ್ ನಿರ್ಮಾಣ ಮಾಡಲಾಗುತ್ತದೆ. ಈ ಬಾರಿ ಮತ್ತೆ ನಮಗೆ ಮತ ನೀಡಿ ಅಧಿಕಾರಕ್ಕೆ ತನ್ನಿ, ನಿಮ್ಮ ಎಲ್ಲಾ ಬೇಡಿಕೆಯನ್ನು ಈಡೇರಿಸಲಾಗುತ್ತದೆ ಎಂದು ಕೆಸಿಆರ್ ಹೇಳಿದ್ದಾರೆ. ಇದೇ ವೇಳೆ ಮುಸ್ಲಿಮರಿಗೆ ನಾವು ಪಿಂಚಣಿ ನೀಡತ್ತಿದ್ದೇವೆ. ಮುಸ್ಲಿಮ್ ಮಕ್ಕಳಿಗೆ ರೆಸೆಡೆನ್ಶಿಯಲ್ ಶಾಲೆ ತೆರೆದಿದ್ದೇವೆ. ಮುಸ್ಲಿಮ್ ಸಮುದಾಯದ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಕೆಸಿಆರ್ ಹೇಳಿದ್ದಾರೆ.

ಕೆಸಿಆರ್ ಹಾಗೂ ಬಿಆರ್‌ಎಸ್ ಸರ್ಕಾರ ತೆಲಂಗಾಣದ ಪ್ರತಿ ಪ್ರಾಂತ್ಯ, ಪ್ರತಿ ಕ್ಷೇತ್ರದಲ್ಲಿ ಈ ರೀತಿಯ ಒಲೈಕೆ ರಾಜಕಾರಣ ಮಾಡುತ್ತಲೇ ಬಂದಿದ್ದಾರೆ. ಕಳೆದ 10  ವರ್ಷದಲ್ಲಿ ಕೆಸಿಆರ್ ತೆಲಂಗಾಣದ ಅಭಿವೃದ್ಧಿಗೆ ನೀಡಿದ ಕೊಡುಗೆ ಶೂನ್ಯ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಕೆಸಿಆರ್ ಒಲೈಕೆ ರಾಜಕಾರಣವನ್ನು ಬಿಜೆಪಿ ಸೇರಿದಂತೆ ಕೆಲವರು ಟೀಕಿಸಿದ್ದಾರೆ. 

ರಾಜ್ಯದಲ್ಲಿ ಭೀಕರ ಬರ ಮಧ್ಯೆ ತೆಲಂಗಾಣದ ಚುನಾವಣಾ ಪ್ರಚಾರಕ್ಕೆ ಹೋದ ಜನಪ್ರತಿನಿಧಿಗಳು: ಸಂಕಷ್ಟದಲ್ಲಿ ಜನತೆ..!

ಮುಸ್ಲಿಮರಿಗೆ ಪ್ರತ್ಯೇಕ ಪಾರ್ಕ್ ನಿರ್ಮಾಣ ಮಟ್ಟಕ್ಕೆ ಬಿಆರ್‌ಎಸ್ ಇಳಿದಿದೆ. ಈ ಮಟ್ಟದ ಒಲೈಕೆ ರಾಜಕಾರಣದಿಂದ ಅಬಿವೃದ್ಧಿ ಹೇಗೆ ಸಾಧ್ಯ ಎಂದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಚರ್ಚೆಯಾಗುತ್ತಿದೆ.
 

click me!