4 ರಾಜ್ಯ, 2000 ಕಿ.ಮಿ ನಡೆದು ಒಡಿಶಾ ತಲುಪಿದ ಮಹಾರಾಷ್ಟ್ರ ಹುಲಿ, ಇದು 2ನೇ ಮಹಾ ಪ್ರಯಾಣ!

By Suvarna NewsFirst Published Nov 24, 2023, 6:59 PM IST
Highlights

ವನ್ಯಜೀವಿಳಿಗೆ ಗಡಿಗಳ ಹಂಗಿಲ್ಲ, ಸ್ವಚ್ಚಂದವಾಗಿ ತಮ್ಮ ಆವಾಸಸ್ಥಾನದಲ್ಲಿ ಸಂಚರಿಸುತ್ತದೆ. ಇದೀಗ ಮಹಾರಾಷ್ಟ್ರ ಸಂರಕ್ಷಿತ ಅರಣ್ಯದಲ್ಲಿದ್ದ ಹುಲಿಯೊಂದು  4 ರಾಜ್ಯಗಳ ಮೂಲಕ ಬರೋಬ್ಬರಿ 2,000 ಕಿಲೋಮೀಟರ್ ನಡೆದು ಒಡಿಶಾ ತಲುಪಿದೆ.

ಮುಂಬೈ(ನ.24) ಕಾಡು ಪ್ರಾಣಿಗಳು, ಪಕ್ಷಿಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ವಲಸೆ ಹೋಗುವುದು ಸಾಮಾನ್ಯ. ಆದರೆ ಆಧುನಿಕತೆ, ಮಾನವನ ದುರಾಸೆಗಳಿಂದ ಇದೀಗ ಕಾಡು ಪ್ರಾಣಿಗಳು ಕೂಡ ತಮ್ಮ ಜೀವನ ಪದ್ಧತಿ ಬದಲಿಸಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿದೆ. ಆದರೆ ದಟ್ಟ ಕಾಡುಗಳಿರುವಲ್ಲಿ ವನ್ಯ ಜೀವಗಳ ವಲಸೆ ಈಗಲೂ ಕಾಣಬಹುದು. ಇದೀಗ ಮಹಾರಾಷ್ಟ್ರದ ಅರಣ್ಯದಿಂದ ಹುಲಿ ನಾಲ್ಕು ರಾಜ್ಯಗಳ ಮೂಲಕ ಬರೋಬ್ಬರಿ 2,000 ಕಿಲೋಮೀಟರ್ ಸಂಚರಿಸಿ ಒಡಿಶಾ ತಲುಪಿದೆ. ಈ ವಲಸೆಯಲ್ಲಿ ಹುಲಿ, ದಟ್ಟ ಕಾಡು, ಹಲವು ಗ್ರಾಮ, ರಸ್ತೆ, ನದಿ ಸೇರಿದಂತೆ ಹಲವು ಸವಾಲುಗಳನ್ನು ಎದುರಿಸಿದೆ.

ಮಹಾರಾಷ್ಟ್ರದ ಬಹ್ಮಪುರಿ ಕಾಡಿನಲ್ಲಿದ್ದ ಗಂಡು ಹುಲಿ ಒಡಿಶಾದ ಸಂರಕ್ಷಿತ ಅರಣ್ಯ ತಲುಪಿದೆ. ಇದು ಭಾರತದಲ್ಲಿ 2ನೇ ಅತೀ ದೂರದ ಹುಲಿ ವಲಸೆ ಎಂದು ಹೇಳಲಾಗುತ್ತಿದೆ. ಮಹಾರಾಷ್ಟ್ರದ ವಿದರ್ಭದಿಂದ ಆಂಧ್ರಪ್ರದೇಶದ ಶ್ರೀಕಾಕುಳಂ ಮೂಲಕ ಒಡಿಶದ ಮಹೇಂದ್ರಗಿರಿಗೆ ತಲುಪಿದೆ. ಕಾಡು, ನದಿ, ಬೆಟ್ಟ, ಗ್ರಾಮ, ಸಣ್ಣ ಪಟ್ಟಣ, ರಸ್ತೆ ಮೂಲಕ ಈ ಹುಲಿ ಹಾದೋ ಹೋಗಿದೆ. ಆದರೆ ಈ ಹುಲಿಯಿಂದ ಯಾವುದೇ ಮಾನವ ಸಂಘರ್ಷದ ವರದಿಯಾಗಿಲ್ಲ.

Latest Videos

ಹುಲಿ ಉಗುರು ಪ್ರಕರಣ ಎಫೆಕ್ಟ್‌: ಆತಂಕದಲ್ಲಿ ಮಲೆನಾಡಿಗರು!

ಒಡಿಶಾದಲ್ಲಿರುವ ಹುಲಿಗಳ ಸಂಖ್ಯೆ ಕೇವಲ 20 ಮಾತ್ರ. ಒಡಿಶಾ ಹಾಗೂ ಚತ್ತೀಸಘಡ ನಡುವೆ ಹುಲಿಗಳು ಸಂಚರಿಸುತ್ತದೆ. ಆದರೆ ಮಹಾರಾಷ್ಟ್ರದಿಂದ ಒಡಿಶಾಗೆ ಹುಲಿ ಆಗಮಿಸಿರುವುದು ಇದೇ ಮೊದಲು ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ. ಈ ಹುಲಿಗೆ ಯಾವುದೇ ರೇಡಿಯೋ ಕಾಲರ್ ಐಡಿ  ಹಾಕಿಲ್ಲ. ಹುಲಿಯ ಮೇಲಿರುವ ಗೆರೆಗಳ ಆಧಾರದಲ್ಲಿ 2,000 ಕಿಲೋಮೀಟರ್ ಪ್ರಯಾಣ ಪತ್ತೆ ಹಚ್ಚಲಾಗಿದೆ. ಪ್ರತಿ ಭಾಗದ ಹುಲಿಗಳಿಗೆ ಪ್ರತ್ಯೇಕ ಗೆರೆಗಳಿರುತ್ತದೆ. ಈ ಗೆರೆಗಳಿಂದ ಯಾವ ಭಾಗದ ಹುಲಿಗಳು ಅನ್ನೋದು ಪತ್ತೆ ಹಚ್ಚಲು ಸಾಧ್ಯವಿದೆ.

ಆಂಧ್ರಪ್ರದೇಶದಿಂದ ಒಡಿಶಾ ತಲುಪಲು 6 ತಿಂಗಳ ಸಮಯ ತೆಗೆದುಕೊಂಡಿದೆ. ಇನ್ನು ಮಹಾರಾಷ್ಟ್ರದ ಬ್ರಹ್ಮಪುರಿಯಲ್ಲಿ ಈ ಹುಲಿ 2021ರಲ್ಲಿ ಕಾಣಿಸಿಕೊಂಡಿದೆ. ಬಳಿಕ ಇದೀಗ ಒಡಿಶಾದಲ್ಲಿ  ಕಾಣಿಸಿಕೊಂಡಿದೆ. ಹೀಗಾಗಿ 2021ರಲ್ಲೇ ಹುಲಿ ಸಂಚಾರ ಆರಂಭಿಸಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಮಹಾರಾಷ್ಟ್ರ, ಚತ್ತೀಸಘಡ, ಆಂಧ್ರಪ್ರದೇಶದ ಮೂಲಕ ಒಡಿಶಾ ತಲುಪಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

 

ಸಫಾರಿಗರ ಮುಂದೆ ಭದ್ರಾ ಹುಲಿಗಳ ಮಿಲನೋತ್ಸವ! ವಿಡಿಯೋ ಹರಿಬಿಟ್ಟ ಪ್ರವಾಸಿಗರು

ಮಹಾರಾಷ್ಟ್ರದ ಬ್ರಹ್ಮಪುರಿಯಿಂದ ಒಡಿಶಾಗಿರುವ ದೂರ ಸರಿಸುಮಾರು 650 ಕಿಲೋಮೀಟರ್. ಆದರೆ ಹುಲಿ ತನ್ನ ಕಾಡು ಮಾರ್ಗದ ಮೂಲಕ ಸಂಚರಿಸಿದೆ. ಹೀಗಾಗಿ ಇದು 2,000 ಕಿಲೋಮೀಟರ್ ದೂರವಾಗಿದೆ. ಇದರ ನಡುವೆ ಗ್ರಾಮಗಳು, ರಸ್ತೆಗಳು ಸಿಕ್ಕಿದೆ. ಇವೆಲ್ಲಾ ಹುಲಿ ಸೇರಿದಂತೆ ಇತರ ವನ್ಯ ಜೀವಿಗಳ ಆವಾಸಸ್ಥಾನವಾಗಿತ್ತು ಅನ್ನೋದು ಬಿಡಿಸಿ ಹೇಳಬೇಕಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
 

click me!