
ಹೈದಾರಾಬಾದ್(ಮಾ.12): ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಹೊಟ್ಟೆ ನೋವಿನಿಂದ ಆಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾರೆ. ಇಂದು ಬೆಳಗ್ಗೆ ತೀವ್ರ ಹೊಟ್ಟೆನೋವಿನಿಂದ ಬಳಲಿದ ಕೆಸಿಆರ್ ಅವರನ್ನು ಹೈದರಾಬಾದ್‌ನ ಎಐಜಿ ಆಸ್ಪತ್ರೆಗೆ ದಾಖಲಿಲಾಗಿದೆ. ಕೆ ಚಂದ್ರಶೇಖರ್ ರಾವ್ ಹೊಟ್ಟೆಯಲ್ಲಿ ಸಣ್ಣ ಗಾತ್ರದ ಅಲ್ಸರ್ ಕಾಣಿಸಿಕೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆ ಚೇರ್ಮೆನ್ ಡಾ.ಡಿ ನಾಗೇಶ್ವರ್ ರಾವ್ ರೆಡ್ಡಿ ನೇತೃತ್ವದ ತಂಡ ಮುಖ್ಯಮಂತ್ರಿಗಳಿಗೆ ಚಿಕಿತ್ಸೆ ನೀಡುತ್ತಿದೆ.
ಕೆ ಚಂದ್ರಶೇಖರ್ ರಾವ್ ಆಸ್ಪತ್ರೆ ಆರೋಗ್ಯ ಕುರಿತು ಆಸ್ಪತ್ರೆ ಆಡಳಿತ ಮಂಡಳಿ ಹೆಲ್ತ್ ಬೆಲೆಟಿನ್ ಬಿಡುಗಡೆ ಮಾಡಿದೆ. ಇಂದು ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಅವರು ತೀವ್ರ ಹೊಟ್ಟೆನೋವು ಕಾಣಿಸಿಕೊಂಡು ಎಐಜಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆ ಚಂದ್ರಶೇಖರ್ ರಾವ್ ಅವರಿಗೆ ಸಿಟಿ ಹಾಗೂ ಎಂಡೋಸ್ಕೋಪಿ ಮಾಡಲಾಗಿದೆ. ತಪಾಸಣೆಯಲ್ಲಿ ಸಣ್ಣ ಗಾತ್ರದ ಹುಣ್ಣು ಪತ್ತೆಯಾಗಿದೆ. ಆಸ್ಪತ್ರೆ ಚೇರ್ಮೆನ್ ಡಾ.ಡಿ ನಾಗೇಶ್ವರ್ ರೆಡ್ಡಿ ಚಿಕಿತ್ಸೆ ನೀಡುತ್ತಿದ್ದಾರೆ. ಕೆಸಿಆರ್ ಆರೋಗ್ಯವಾಗಿದ್ದು, ಇತರ ಯಾವುದೇ ಸಮಸ್ಯೆಗಳಿಲ್ಲ ಎಂದು ಹೆಲ್ತ್ ಬುಲೆಟಿನ್‌ನಲ್ಲಿ ಹೇಳಲಾಗಿದೆ.
ತೆಲಂಗಾಣ ಭಾರತದ ಅಫ್ಘಾನಿಸ್ತಾನ, ಕೆಸಿಆರ್ ತಾಲಿಬಾನ್: ವೈಎಸ್‌ಆರ್‌ಟಿಪಿ ಮುಖ್ಯಸ್ಥೆ ವೈಎಸ್ ಶರ್ಮಿಳಾ ಕಿಡಿ
69 ವರ್ಷದ ಕೆ ಚಂದ್ರಶೇಖರ್ ರಾವ್ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ತಮ್ಮ ಪಕ್ಷವನ್ನು ತೆಲಂಗಾಣ ರಾಷ್ಟ್ರ ಸಮಿತಿ ಅನ್ನೋ ಹೆಸರನ್ನು ಭಾರತ್ ರಾಷ್ಟ್ರ ಸಮತಿ ಎಂದು ನಾಮಕರಣ ಮಾಡಿದ್ದಾರೆ. ವಿಪಕ್ಷಗಳನ್ನು ಒಗ್ಗೂಡಿಸಿ ಬಿಜೆಪಿ ವಿರುದ್ದ ಅಖಾಡಕ್ಕಿಳಿಯಲು ಭಾರಿ ಕಸರತ್ತು ನಡೆಸುತ್ತಿದ್ದಾರೆ. ತೆಲಂಗಾಣ ರಾಜ್ಯ ಉಗಮಗೊಂಡ ಬಳಿಕ 2014ರ ಜೂನ್ ತಿಂಗಳಲ್ಲಿ ಕೆ ಚಂದ್ರಶೇಖರ್ ರಾವ್ ಮೊದಲ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. 2014ರಿಂದ ಇಲ್ಲೀವರೆಗೆ ತೆಲಂಗಾಣದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಫೆಡರ್ ಫ್ರಂಟ್ ಪಕ್ಷಗಳ ಒಕ್ಕೂಟದಲ್ಲಿ ಕೆಸಿಆರ್ ಪ್ರಮುಖ ಪಾತ್ರನಿರ್ವಹಿಸಿದ್ದರು. ಆದರೆ ಚುನಾವಣೆಯಲ್ಲಿ ಫೆಡರಲ್ ಫ್ರಂಟ್ ಪಕ್ಷಗಳಿಗೆ ನಿರೀಕ್ಷಿತ ಯಶಸ್ಸು ಸಿಕ್ಕಿರಲಿಲ್ಲ. 2022ರ ಜೂನ್ ತಿಂಗಳಲ್ಲಿ ಟಿಆರ್‌ಎಸ್ ಪಕ್ಷವನ್ನು ರಾಷ್ಟ್ರೀಯ ಪಕ್ಷವನ್ನಾಗಿ ಘೋಷಿಸಿದರು. ಇದೇ ವೇಳೆ ಬಿಆರ್‌ಎಸ್(ಭಾರತ ರಾಷ್ಟ್ರ ಸಮಿತಿ) ಎಂದು ಹೆಸರಿಸಿದರು.
ಜನರ ಸಮಸ್ಯೆ ತಿಳ್ಕೊಳ್ಳೋಕೆ ಪಾದಯಾತ್ರೆಗೆ ಬನ್ನಿ ಎಂದು ಶೂ ಕೊಡಿಸಿ ಕೆಸಿಆರ್‌ಗೆ ಸವಾಲು ಹಾಕಿದ ಜಗನ್ ಸೋದರಿ
ಕೆ ಚಂದ್ರಶೇಕರ್ ರಾವ್ ಪುತ್ರಿ ಕೆ ಕವಿತಾ ಇದೀಗ ಇಡಿ ಬಲೆಗೆ ಬಿದ್ದು ಒದ್ದಾಡುತ್ತಿದ್ದಾರೆ. ದೆಹಲಿ ಲಿಕ್ಕರ್ ಗೇಟ್ ಹಗರಣದಲ್ಲಿ ಕೆ ಕವಿತ ಹೆಸರು ಥಳುಕು ಹಾಕಿಕೊಂಡಿದೆ. ಇಡಿ ಸಮನ್ಸ್ ಪಡೆದು ಈಗಾಗಲೇ ವಿಚಾರಣೆ ಹಾಜರಾಗಿದ್ದಾರೆ. ಸತತ 9 ಗಂಟೆಗಳ ಕಾಲ ಕೆ ಕವಿತಾ ವಿಚಾರಣೆ ನಡೆಸಿದ್ದಾರೆ. ಇದು ಬಿಜೆಪಿ ದ್ವೇಷದ ರಾಜಕೀಯ. ಇಡಿ, ಸಿಬಿಐ ಸೇರಿದಂತೆ ತನಿಖಾ ಸಂಸ್ಥೆಗಳನ್ನು ತನ್ನ ದಾಳಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿದೆ ಅನ್ನೋ ಆರೋಪ ಮಾಡಿದೆ.
ಇತ್ತೀಚೆಗಷ್ಟೆ ಕವಿತಾ ಆಪ್ತ, ಮದ್ಯ ಉದ್ಯಮಿ ಅರುಣ್ ಪಿಳ್ಳೈ ಅವರನ್ನು ಇ.ಡಿ. ಬಂಧಿಸಿತ್ತು. ಪಿಳ್ಳೈ ಅವರು ಕವಿತಾಗೆ ಸಂಬಂಧಿಸಿದ ಕಂಪನಿಯಲ್ಲಿ ಲಾಬಿಗಾರನಂತೆ ಕೆಲಸ ಮಾಡುತ್ತಿದ್ದರು.ಪಿಳ್ಳೈ ಈ ಹಿಂದೆ ಇ.ಡಿ.ಗೆ ಹೇಳಿಕೆ ನೀಡಿ, ‘ಕವಿತಾ ಮತ್ತು ಆಮ… ಆದ್ಮಿ ಪಾರ್ಟಿ (ಎಎಪಿ) ನಡುವೆ ಒಪ್ಪಂದವಿತ್ತು. ಆಪ್‌ಗೆ 100 ಕೋಟಿ ರು. ಕಿಕ್‌ಬ್ಯಾಕ್‌ಗೆ ಸಂದಾಯ ಆಗಿತ್ತು. ಇದಕ್ಕೆ ಪ್ರತಿಯಾಗಿ ಕವಿತಾ ಅವರಿಗೆ ದಿಲ್ಲಿ ಮದ್ಯ ಉದ್ಯಮದಲ್ಲಿ ಪ್ರವೇಶ ಲಭಿಸಿತ್ತು. ಇಂಡೋ ಸ್ಪಿರಿಟ್ ಕಂಪನಿಯಲ್ಲಿ ಕವಿತಾ ಪಾಲು ಖರೀದಿಸಿದ್ದರು’ ಎಂದು ಮಾಹಿತಿ ನೀಡಿದ್ದ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ