From The India Gate ತ್ಯಾಜ್ಯ ಹೊಗೆಯಲ್ಲಿ ಭ್ರಷ್ಟಾಚಾರದ ದುರ್ವಾಸನೆ, ಕೇಸರಿ ಪಡೆಯಲ್ಲಿ ಕುರ್ಚಿ ಕದನ!

By Suvarna NewsFirst Published Mar 12, 2023, 6:58 PM IST
Highlights

ದೇಶದಲ್ಲಿ ರಾಜಕೀಯ ವಿದ್ಯಮಾನ ಪ್ರತಿ ರಾಜ್ಯದಲ್ಲಿ ನಡೆಯುತ್ತಲೇ ಇರುತ್ತದೆ. ಪ್ರತಿ ದಿನ ಒಂದೊಂದು ರಾಜ್ಯ ಭಾರಿ ಸದ್ದು ಮಾಡುತ್ತದೆ. ಹೀಗೆ ಈ ವಾರದಲ್ಲಿ ಹಲವು ಬೆಳವಣಿಗೆಗಳು ದೇಶದ ಗಮನಸೆಳೆದಿದೆ. ಕೇರಳದ ತಾಜ್ಯ, ರಾಜಸ್ಥಾನದ ಎನ್‌ಕೌಂಟರ್, ತಮಿಳುನಾಡಿನ ಬೀದಿ ಬದಿಯ ಆಹಾರ ಪಾಲಿಟಿಕ್ಸ್ ಸೇರಿ ಇಂಡಿಯಾ ಗೇಟ್ ಅಂಕಣ ಇಲ್ಲಿದೆ.

ಸಿಪಿಎಂ ಸುತ್ತಿಕೊಂಡ ಕೊಚ್ಚಿ ತ್ಯಾಜ್ಯ
ಕೇರಳದ ಬ್ರಹ್ಮಪುರಂ ಯಾರ್ಡ್‌ನ ತ್ಯಾಜ್ಯಕ್ಕೆ ಬೆಂಕಿ ಬಿದ್ದ ಘಟನೆ ದೇಶಾದ್ಯಂತ ಭಾರಿ ಸದ್ದು ಮಾಡಿದೆ. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ದಟ್ಟ ಹೊಗೆಯಿಂದ ಎರ್ನಾಕುಲಂ ಜಿಲ್ಲೆಯ ಬ್ರಹ್ಮಪುರಂ ಲಾಕ್‌ಡೌನ್ ಪರಿಸ್ಥಿತಿ ಎದುರಿಸಿತ್ತು. ಈ ಹೊಗೆಯಲ್ಲಿ ಬ್ರಷ್ಟಾಚಾರದ ವಾಸನೆ  ಎಲ್ಲರ ಮೂಗಿಗೆ ಬಡಿದಿತ್ತು. ಕಳೆದ 11 ದಿನಗಳಿಂದ ಕೇರಳದ ವಾಣಿಜ್ಯ ನಗರದ ಪಕ್ಕದಲ್ಲಿರುವ ತ್ಯಾಜ್ಯ ಪ್ರದೇಶದ ಗುಡ್ಡ ಸುಡುತ್ತಿದೆ. ಇಷ್ಟು ದಿನ  ಕೇರಳ ಸರ್ಕಾರ ಹಲವು ಕಾರಣಗಳನ್ನು ನೀಡುತ್ತಾ ದಿನದೂಡಿದೆ. ಆದರೆ ಈ ತ್ಯಾಜ್ಯ ಗುಡ್ಡದೊಳಗೂ ಭ್ರಷ್ಟಾಚಾರ ನಡೆದಿದೆ ಅನ್ನೋ ಆರೋಪಗಳೀಗ ಬಲವಾಗುತ್ತಿದೆ. ತಾಜ್ಯ ನಿರ್ವಹಣೆ ಹಾಗೂ ಸ್ಥಾವರ ನಿರ್ಮಾಣಕ್ಕೆ ಖಾಸಗಿ ಕಂಪನಿಯೊಂದು ಸರ್ಕಾರದ ಜೊತೆ ಒಪ್ಪಂದ ಮಾಡಿಕೊಂಡಿದೆ. ಇದರ ಉಪಗುತ್ತಿಗೆ ಪಡೆದ ಸಂಸ್ಥೆ ಮೇಲೆ ಕೇರಳ ಸರ್ಕಾರದ ಹಾಗೂ ಎಡಪಕ್ಷದ ಆಶೀರ್ವಾದವಿರುವುದು ಕಣ್ಣಿಗೆ ರಾಚುತ್ತಿದೆ. 

ತ್ಯಾಜ್ಯ ಸುಡಲು ಆರಂಭಿಸಿದ ಬಳಿಕ ಕೇರಳದ ಸಿಪಿಎಂ ಸರ್ಕಾರದ ಒಂದೊಂದೇ ಭ್ರಷ್ಟಾಚಾರಗಳು ಈ ಹೊಗೆಯ ಮೂಲಕ ಹೊರ ಬರುತ್ತಿದೆ. ತ್ಯಾಜ್ಯ ನಿರ್ವಹಣೆ ಹಾಗೂ ಸ್ಥಾವರ ನಿರ್ಮಾಣ ಒಪ್ಪಂದದಲ್ಲಿ ಉಪಗುತ್ತಿದೆ ಪಡೆದ ಸಂಸ್ಥೆ ನಿರ್ದೇಶಕರು ಸಿಪಿಎಂ ನಾಯಕನ ಆಪ್ತ ಸಂಬಂಧಿ. ಉಪಗುತ್ತಿಗೆ ಪಡೆದ ಸಂಸ್ಥೆ, ಸಿಪಿಎಂ ನಾಯಕನ ಜೊತೆ ನಿಕಟ ಸಂಪರ್ಕವನ್ನೂ ಹೊಂದಿದೆ. ಹೀಗಾಗಿ ತ್ಯಾಜ್ಯ ಸುಟ್ಟು ಬೂದಿಯಾದರೂ ಸಮಸ್ಯೆಗೆ ಪರಿಹಾರ ಸಿಗುವ ಲಕ್ಷಣಗಳು ಗೋಚರಿಸುತ್ತಿಲ್ಲ.  

Latest Videos

From the India Gate: ಬಿಎಸ್‌ವೈ ಚೀಟಿ ಅಭ್ಯಾಸದ ಬಗ್ಗೆ ನಿಮಗೆಷ್ಟು ಗೊತ್ತು..? ಯುಪಿ ಸಿಎಂ ಎದುರು ರಾಜಿಯಾದ ಅಖಿಲೇಶ್‌..!

ದೇಶಾದ್ಯಂತ ಪೊಲೀಸರ ಎನ್‌ಕೌಂಟರ್ ಸದ್ದು
ದೇಶದ ಹಲವು ಭಾಗದಲ್ಲಿ ಇದೀಗ ಎನ್‌ಕೌಂಟರ್ ಭಾರಿ ಸದ್ದು ಮಾಡುತ್ತಿದೆ. ಗ್ಯಾಂಗ್‌ಸ್ಟರ್, ಕ್ರಿಮಿನಲ್ಸ್ ವಿರುದ್ದ ಪೊಲೀಸರು ನೇರಾನೇರ ಹೋರಾಟ ಆರಂಭಿಸಿದ್ದಾರೆ. ಉತ್ತರ ಪ್ರದೇಶದ ಬಳಿಕ ಇದೀಗ ರಾಜಸ್ಥಾನದ ಪೊಲೀಸರು ಗುಂಡಿನ ಮಳೆ ಸುರಿಸಿದ್ದಾರೆ. ರಾಜಸ್ಥಾನದ ಜೈಪುರ, ಧೂಲ್‌ಪುರ್, ಭರತ್‌ಪುರ್ ಸೇರಿ ಹಲವು ಭಾಗದಲ್ಲಿ ದುಷ್ಕರ್ಮಿಗಳಿಗೆ ಪೊಲೀಸರು ಗುಂಡಿನ ರುಚಿ ತೋರಿಸಿದ್ದಾರೆ. ಆದರೆ ಈ ದಾಳಿಗಳ ಬಳಿಕವೂ ಗ್ಯಾಂಗ್‌ಸ್ಟರ್ ಕಾರ್ಯಪ್ರವೃತ್ತರಾಗಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಹೀಗಾಗಿ ರಾಜಸ್ಥಾನದಲ್ಲಿ ಮತ್ತಷ್ಟು ದೊಡ್ಡ ಮಟ್ಟದ ಕಾರ್ಯಾಚರಣೆಗೆ ಪೊಲೀಸರು ಸಜ್ಜಾಗಿದ್ದಾರೆ. 

ವಸುಂದರಾ ರಾಜೆ ಅರಸ್ ಶಕ್ತಿ ಪ್ರದರ್ಶನ
ರಾಜಸ್ಥಾನದಲ್ಲಿ ಕಾಂಗ್ರೆಸ್ ಮಣಿಸಿ ಅಧಿಕಾರ ಹಿಡಿಯಲು ಬಿಜೆಪಿ ಸಜ್ಜಾಗಿದೆ. ಈ ಬಾರಿ ಬಿಜೆಪಿ ಗೆಲುವು ಪಕ್ಕಾ ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ ಬಿಜೆಪಿ ಪಾಳಯದಲ್ಲಿ ಸಿಎಂ ಕುರ್ಚಿಗಾಗಿ ಹೋರಾಟ ಶುರುವಾಗಿದೆ. ಮಾಜಿ ಸಿಎಂ ವಸುಂದರಾ ರಾಜೆ ಇತ್ತೀಚೆಗೆ ಹುಟ್ಟು ಹಬ್ಬ ಆಚರಿಸಿ ಕೊಂಡಿದ್ದಾರೆ. ಈ ವೇಳೆ ಬಿಜೆಪಿ ಹೈಕಮಾಂಡ್‌ಗೆ ಸ್ಪಷ್ಟ ಸಂದೇಶ ನೀಡುವ ಕೆಲಸವಾಗಿದೆ. ಅಬ್ ಕಿ ಬಾರ್ ರಾಜೇ ಸರ್ಕಾರ್ ಅನ್ನೋ ಘೋಷಣೆಗಳು ಮೊಳಗಿವೆ. ರಾಜಸ್ಥಾನದಲ್ಲಿ ಮತ್ತೆ ವಸುಂದರಾ ರಾಜೆ ಮುಖ್ಯಮಂತ್ರಿಯಾಗಬೇಕು ಎಂದು ಬೆಂಬಲಿಗರು ಘೋಷಣೆ ಕೂಗಿದ್ದಾರೆ.

ಹಲವರು ಜ್ಯೋತಿರಾದಿತ್ಯ ಸಿಂಧಿಯಾ ಮುಖ್ಯಮಂತ್ರಿಯಾಗಬೇಕು ಅನ್ನೋ ಒಲವು ವ್ಯಕ್ತಪಡಿಸಿದ ಬೆನ್ನಲ್ಲೇ ಈ ಬೆಳವಣಿಗೆಯಾಗಿದೆ. ರಾಜೆ ಬೆಂಬಲಿಗರು ಸಿಎಂ ಪಟ್ಟ ಯಾರಿಗೂ ಬಿಟ್ಟುಕೊಡುವುದಿಲ್ಲ ಅನ್ನೋ ಸೂಚನೆ ನೀಡಿದ್ದಾರೆ. ಇದು ಬಿಜೆಪಿ ಹೈಕಮಾಂಡ್‌ಗೆ ತಲೆನೋವಾಗಿದೆ.

From the India Gate: ಕಾಂಗ್ರೆಸ್‌ ಒಗ್ಗಟ್ಟಿನ ಮಂತ್ರದ ವಾಸ್ತವ ಹೀಗಿದೆ; ‘ಭಜರಂಗಿ’ಗೆ ನೋಟಿಸ್‌ ಕಳಿಸಿದ ಸರ್ಕಾರ..!

ಹೊಸ ಜಿಲ್ಲೆ ತಲೆನೋವು
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಲವು ವೇದಿಕೆಗಳಲ್ಲಿ ಹೊಸ ಜಿಲ್ಲೆಗಳ ಘೋಷಣೆ ಮಾಡಿ,ಅಲ್ಲಿಯೇ ಮರೆತಿದ್ದಾರೆ. ಆದರೆ ಜನ ಮರೆತಿಲ್ಲ. ಮತ್ತೆ ಅದೇ ಜಿಲ್ಲೆಗೆ ತೆರಳಿದಾಗ ಜನ ಪ್ರಶ್ನಿಸಿದ್ದಾರೆ. ಇದು ಗೆಹ್ಲೋಟ್ ತಲೆನೋವಿಗೆ ಕಾರಣವಾಗಿದೆ. ಇದರ ಪರಿಣಾಮ ಹೊಸ ಜಿಲ್ಲೆ ಸ್ಥಾಪನೆಗೆ ರಚಿಸಿದ ಕಮಿಟಿ ಮುಂದಿನ 6 ತಿಂಗಳಲ್ಲಿ ವರದಿ ನೀಡುವಂತೆ ಸೂಚಿಸಿದ್ದಾರೆ. ಮೂರು ವಿಭಾಗಗಳಲ್ಲಿ 10 ಹೊಸ ಜಿಲ್ಲೆಗಳ ಸ್ಥಾಪನೆಗೆ ಬೇಡಿಕೆ ಹೆಚ್ಚಾಗುತ್ತಿದೆ. ಮಾರ್ಚ್ 13ಕ್ಕೆ  ಸಮಿತಿಯ ಅವಧಿ ಅಂತ್ಯಗೊಳ್ಳಲಿದೆ. ಹೀಗಾಗಿ ಮುಂದಿನ 6 ತಿಂಗಳಿಗೆ ಕಮಿಟಿಯನ್ನು ವಿಸ್ತರಿಸಲಾಗಿದೆ. ಆದರೆ ಅಶೋಕ್ ಗೆಹ್ಲೋಟ್ ಘೋಷಣೆ, ಕೇವಲ ಘೋಷಣೆಯಾಗಿ ಮಾತ್ರ ಉಳಿದಿಕೊಂಡಿದೆ. ಸಾಕಾರಗೊಂಡಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ತಮಿಳುನಾಡು ರಾಜಕೀಯದಲ್ಲಿ ಪನ್ನೀರ್
ತಮಿಳುನಾಡು ರಾಜಕೀಯದಲ್ಲಿ ಇದೀಗ ಬೀದಿ ಬದಿ ಆಹಾರ ಬಾರಿ ಸದ್ದು ಮಾಡುತ್ತಿದೆ. ಥೇಣಿ ವಲಯದಲ್ಲಿ ಕೆಲ ನಾಯಕರು ಬೀದಿ ಬದಿ ಆಹಾರ ತಯಾರಿಸಿ ಬಿಜೆಪಿ ನಾಯಕರಿಗೆ ನೀಡುವ ಕುಹಕವಾಡಿದ್ದಾರೆ. ಕುನಗೋಡು ಆಹಾರ ಸವಿಯಲು ಬಯಸುವ ಕೇಸರಿ ನಾಯಕರಿಗೆ ಥೇಣಿ ಫುಡ್ ಆಫರ್ ನೀಡುವ ಮೂಲಕ ತಮಿಳುನಾಡು ರಾಜಕೀಯದಲ್ಲಿ ಹೊಸ ಅಲೆಯೊಂದು ಶುರುವಾಗಿದೆ.

click me!