
ಕೊರೋನಾ ವೈರಸ್ ನಂತರ ಲಾಕ್‌ಡೌನ್‌ನಿಂದಾಗಿ ದೇಶದ ಬಹಳಷ್ಟು ಜನ ಆದಾಯ ಕಳೆದುಕೊಂಡಿದ್ಧಾರೆ. ಈ ಸಂದರ್ಭ ಜನರು ಪರಸ್ಪರ ನೆರವಾಗಿ ಬದುಕುವುದನ್ನೂ ಕಲಿತಿದ್ದಾರೆ. ನೆರವಾಗಲಯ ಹಣ ಬೇಡ, ಗುಣ ಸಾಕು ಎಂಬುದನ್ನು ಸಾಬೀತು ಪಡಿಸಿದ್ದಾರೆ ತಮಿಳುನಾಡಿನ ಈ ಟೀ ಮಾರಾಟಗಾರ.
ತಮಿಳುನಾಡಿದ ಮಧುರೈನಲ್ಲಿರುವ ಬಡ ಟೀ ಮಾರಾಟಗಾರರೊಬ್ಬರು ಕೊರೋನಾ ಸಂಕಷ್ಟ ಮಧ್ಯೆ ಬಡವರ ಪಾಲಿಗೆ ದೇವರಾಗಿದ್ದಾರೆ. ತಮಗೆ ಸಿಗುವ ಚೂರು ಪಾರು ಆದಾಯದಲ್ಲಿಯೂ ಒಂದಷ್ಟು ಮೊತ್ತವನ್ನು ಅನಾಥ ಬಡ ಜನರ ಹೊಟ್ಟೆ ತುಂಬಲು ವಿನಿಯೋಗಿಸುತ್ತಿದ್ದಾರೆ.
ರೋಗಿಯ ಶಸ್ತ್ರ ಚಿಕಿತ್ಸೆಗೆ ರಕ್ತ ನೀಡಿದ AIIMS ಜೂನಿಯರ್ ಡಾಕ್ಟರ್..!
ಮಧುಋಯನ ಅಲಂಗನಲ್ಲೂರಿನ ತಮಿಳರಸನ್ ಗುಣದಲ್ಲಿ ನಿಜಕ್ಕೂ ಅರಸ. ಕೊರೋನಾದಿಂದ ಜನ ಕಷ್ಟಪಡುತ್ತಿರುವ ಸಂದರ್ಭ ತಮಿಳರಸನ್ ನಿರ್ಗತಿಕರ ಪಾಲಿಗೆ ಬೆಳಕಾಗಿದ್ದಾರೆ.
ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ನಾನು ಸೈಕಲ್‌ನಲ್ಲಿ ಅಲಂಕನಲ್ಲೂರು, ಮೇಟುಪಟ್ಟಿ, ಪುದುಪಟ್ಟಿ ಸುತ್ತ ಮುತ್ತ ಟೀ ಮಾರುತ್ತೇನೆ. ಇದರಿಂದ ದಿನದ ಖರ್ಚು ನೋಡಿಕೊಳ್ಳುತ್ತೇನೆ ಎಂದಿದ್ದಾರೆ.
ಪ್ರತಿದಿನ ಟೀ ಮಾರುವಾಗಲೂ ಬಡ ಜನ, ದೇವಾಲಯದ ಬಾಗಿಲಲ್ಲಿರುವ ನಿರ್ಗತಿಕರಿಗೆ ಉಚಿತವಾಗಿ ಟೀ ಕೊಡುತ್ತೇನೆ. ನನ್ನ ಆದಾಯದ ಸ್ವಲ್ಪ ಭಾಗವನ್ನು ನಿರ್ಗತಿಕರ ಮೂರು ಹೊತ್ತಿನ ಊಟಕ್ಕೆಂದೇ ಮೀಸಲಿಡುತ್ತೇನೆ ಎಂದಿದ್ದಾರೆ.
ಸ್ವಂತ ಟೀ ಸ್ಟಾಲ್ ತೆರೆದು ಬಡಜನರಿಗೆ ನರವಾಗುವುದೇ ತಮ್ಮ ಕನಸು ಎಂದಿದ್ದಾರೆ ತಮಿಳರಸನ್. ಈ ಹಿಂದೆ ಸಾಲಕ್ಕಾಗಿ ಅರ್ಜಿ ಸಲ್ಲಿಸಿದರೂ ಲೋನ್ ರಿಜೆಕ್ಟ್ ಆಗಿತ್ತು ಎಂದಿದ್ದಾರೆ ಚಾಯ್‌ವಾಲ ತಮಿಳರಸನ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ