ರೋಗಿಯ ಶಸ್ತ್ರ ಚಿಕಿತ್ಸೆಗೆ ರಕ್ತ ನೀಡಿದ AIIMS ಜೂನಿಯರ್ ಡಾಕ್ಟರ್..!

By Suvarna News  |  First Published Jul 23, 2020, 2:33 PM IST

ರೋಗಿಯೊಬ್ಬರ ಶಸ್ತ್ರ ಚಿಕಿತ್ಸೆಗೆ ಅಮೆರ್ಜೆನ್ಸಿ ಸಂದರ್ಭ ರಕ್ತ ನೀಡುವ ಮೂಲಕ ದೆಹಲಿ ಏಮ್ಸ್‌ನ ಯುವ ವೈದ್ಯ ಮಾದರಿಯಾಗಿದ್ದಾರೆ. 24 ವರ್ಷದ ಜೂನಿಯರ್ ವೈದ್ಯ ಡಾ. ಮೊಹಮ್ಮದ್ ಫವಾಜ್ ಈ ಮಾನವೀಯ ಕೆಲಸ ಮಾಡಿದ ವೈದ್ಯ.


ರೋಗಿಯೊಬ್ಬರ ಶಸ್ತ್ರ ಚಿಕಿತ್ಸೆಗೆ ಅಮೆರ್ಜೆನ್ಸಿ ಸಂದರ್ಭ ರಕ್ತ ನೀಡುವ ಮೂಲಕ ದೆಹಲಿ ಏಮ್ಸ್‌ನ ಯುವ ವೈದ್ಯ ಮಾದರಿಯಾಗಿದ್ದಾರೆ. 24 ವರ್ಷದ ಜೂನಿಯರ್ ವೈದ್ಯ ಡಾ. ಮೊಹಮ್ಮದ್ ಫವಾಜ್ ಈ ಮಾನವೀಯ ಕೆಲಸ ಮಾಡಿದ ವೈದ್ಯ.

ಸೆಪ್ಟಿಕ್ ಶಾಕ್‌ನಿಂದ ಬಳಲುತ್ತಿದ್ದ ರೋಗಿಗೆ ವೈದ್ಯ ಫವಾಜ್ ಚಿಕಿತ್ಸೆ ನೀಡುತ್ತಿದ್ದರು. ಈ ಸಂದರ್ಭ ರೋಗಿಗೆ ಅಗತ್ಯ ತರ್ತು ಚಿಕಿತ್ಸೆ ಮಾಡಬೇಕಾಗಿಬಂದಿತ್ತು. ಈ ಸಂದರ್ಭ ಸ್ವತಃ ವೈದ್ಯ ತಾವೇ ರಕ್ತ ನೀಡಿದ್ದಾರೆ.

Latest Videos

undefined

ಹೆಣ್ಣು ಮಗಳು ಜನಿಸಿದ್ದಕ್ಕೆ ತಂದೆ ಆತ್ಮಹತ್ಯೆ, ಹೃದಯಾಘಾತದಲ್ಲಿ ತಾಯಿಯೂ ಸಾವು..!

ಆರಂಭದಲ್ಲಿ ರೋಗಿಗಾಗಿ ರಕ್ತ ಸಂಗ್ರಹಿಸಲು ಪ್ರಯತ್ನಿಸಲಾಗಿತ್ತದರೂ ಅಷ್ಟು ತುರ್ತಾಗಿ ರಕ್ತ ಲಭ್ಯವಾಗಿರಲಿಲ್ಲ. ಹಾಗಾಗಿ ತಕ್ಷಣ ಎಚ್ಚೆತ್ತ ವೈದ್ಯ ರಕ್ತ ದಾನ ಮಾಡುವ ಮೂಲಕ ಶಸ್ತ್ರ ಚಿಕಿತ್ಸೆ ಮಾಡಲು ಅನುವು ಮಾಡಿದ್ದಾರೆ.

ಫವಾಜ್ ದೆಹಲಿ ಏಮ್ಸ್‌ನ ಸರ್ಜರಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು, ಮಂಗಳವಾರ ಒಬ್ಬ ರೋಗಿ ಪತ್ನಿಯೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ಕಾಲಿನಲ್ಲಿ ಆಳವಾದ ಗಾಯದಿಂದ ಸೆಪ್ಟಿಕ್ ಆಗಿ ಬಳಲುತ್ತಿದ್ದ ರೋಗಿಗೇ ಫವಾಜ್ ಚಿಕಿತ್ಸೆ ನೀಡುತ್ತಿದ್ದರು.

ಗಣಿ ನಾಡಿನಲ್ಲಿ ವೈದ್ಯರಿಂದಲೇ ಕೊರೋನಾ ಆಸ್ಪತ್ರೆ!

ನಾನು ವೈದ್ಯನಾಗಿ ನನ್ನ ಕರ್ತವ್ಯ ಮಾಡಿದ್ದೇನೆ ಅಷ್ಟೆ. ಕೊರೋನಾ ವೈರಸ್‌ ಹಬ್ಬಿರುವ ಕಾರಣ ರಕ್ತ ಸಂಗ್ರಹ ಕಡಿಮೆ ಇದೆ. ಆದರೆ ಇಲ್ಲಿ ರಕ್ತ ತುರ್ತಾಗಿ ಬೇಕಾಗಿತ್ತು. ರೋಗಿಯ ಕುಟುಂಬಸ್ಥರು ರಕ್ತ ಸಂಗ್ರಹಿಸಲು ಸಮಯ ತೆಗೆದುಕೊಂಡರು. ಹಾಗಾಗಿ ನಾನೇ ರಕ್ತದಾನ ಮಾಡುವುದಾಗಿ ಹೇಳಿದೆ ಎಂದಿದ್ದಾರೆ ಫವಾಜ್.

click me!