ಮುಂಬೈ(ಮೇ.13):: ಕ್ಯಾಂಪ್‌ಬೆಲ್ ವಿಲ್ಸನ್ ಅವರು ಏರ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕವಾಗಿದ್ದಾರೆ. ಟಾಟಾ ಸನ್ಸ್ ಒಡೆತನದ ಏರ್ ಇಂಡಿಯಾದ ಬೋರ್ಡ್ ಕ್ಯಾಂಪ್‌ಬೆಲ್ ವಿಲ್ಸನ್ ಅವರ ನೇಮಕಾತಿಯ ಬಗ್ಗೆ ಘೋಷಣೆ ಮಾಡಿದೆ.
ವಿಲ್ಸನ್ (50) ಸಿಂಗಾಪುರ್ ಏರಲೈನ್ಸ್ ಒಡೆತನದ ಅಂಗಸಂಸ್ಥೆಯಾದ ಸ್ಕೂಟ್‌ನ ಸಿಇಒ ಆಗಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ವಾಯುಯಾನ ಉದ್ಯಮದಲ್ಲಿ ಸುಮಾರು 26 ವರ್ಷಗಳ ಸುದೀರ್ಘ ಅನುಭವವನ್ನು ಹೊಂದಿದ್ದಾರೆ. ಫೆಬ್ರವರಿಯಲ್ಲಿ ಟರ್ಕಿಶ್ ಏರ್‌ಲೈನ್ಸ್‌ನ ಇಲ್ಕರ್ ಐಸಿ ಅವರನ್ನು ಏರ್ ಇಂಡಿಯಾದ ಸಿಇಒ ಹಾಗೂ ಎಂಡಿಯಾಗಿ ಟಾಟಾ ಸನ್ಸ್ ಘೋಷಣೆ ಮಾಡಿತ್ತು, ಆದರೆ ಭಾರತಕ್ಕೆ ಸಂಬಂಧಿಸಿದಂತೆ ಅವರ ಅಭಿಪ್ರಾಯಗಳು ವಿವಾದಾತ್ಮಕವಾಗಿದ್ದ ಹಿನ್ನೆಲೆಯಲ್ಲಿ ಅವರು ಹುದ್ದೆಯನ್ನು ಸ್ವೀಕರಿಸಲು ನಿರಾಕರಿಸಿದ್ದರು.
ಟಾಟಾ ಮಾಲೀಕತ್ವದಲ್ಲಿ ಲಾಭದತ್ತ ಏರ್ ಇಂಡಿಯಾ, ಏರ್ ಏಷಿಯಾದ ಶೇ.100 ಪಾಲು ಖರೀದಿಗೆ ರೆಡಿ!
ಏರ್ ಇಂಡಿಯಾದ ನೂತನ ಅಧ್ಯಕ್ಷರನ್ನಾಗಿ ಟಾಟಾ ಸನ್ಸ್ ಅಧ್ಯಕ್ಷ ಎನ್.ಚಂದ್ರಶೇಖರನ್ ಅವರನ್ನು ನೇಮಿಸಲಾಗಿದೆ. ಸರ್ಕಾರದ ಒಡೆತನದಲ್ಲಿದ್ದ ಏರ್ ಇಂಡಿಯಾ ಕಂಪನಿಯನ್ನು ಟಾಟಾ ಸಮೂಹವು 18000 ಕೋಟಿ ರು. ಬಿಡ್ ಸಲ್ಲಿಸುವ ಮೂಲಕ ಕಳೆದ ವರ್ಷದ ಅ.8ರಂದು ಗೆದ್ದುಕೊಂಡಿತ್ತು. ಇತ್ತೀಚೆಗೆ ಸರ್ಕಾರ, ಕಂಪನಿಯನ್ನು ಅಧಿಕೃತವಾಗಿ ಟಾಟಾ ಸಮೂಹಕ್ಕೆ ಹಸ್ತಾಂತರ ಮಾಡಿತ್ತು. ಅದರ ಬೆನ್ನಲ್ಲೇ ನೂತನ ಅಧ್ಯಕ್ಷರ ಮಾಡಲಾಗಿದೆ.
ಆದರೆ ಏರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅವರನ್ನು ಇನ್ನೂ ನೇಮಕ ಮಾಡಲಾಗಿಲ್ಲ. ಈ ಹಿಂದೆ ಟರ್ಕಿಷ್ ಏರ್‌ಲೈನ್ಸ್‌ನ ಮಾಜಿ ಇಸಿಒ ಇಲ್ಕರ್ ಐಸಿ ಅವರನ್ನು ಈ ಹುದ್ದೆಗೆ ನೇಮಕ ಮಾಡಲಾಗಿತ್ತಾದರೂ, ನೇಮಕಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ವತಃ ಇಲ್ಕರ್ ಐಸಿ ಹುದ್ದೆಯನ್ನು ನಿರಾಕರಿಸಿದ್ದರು.
ಟಾಟಾ ಗ್ರೂಪ್ ತೆಕ್ಕೆಗೆ ಜಾರುತ್ತಿದ್ದಂತೆಯೇ ಬದಲಾಯ್ತು ಸಿಬ್ಬಂದಿಯ ಅದೃಷ್ಟ!
ಏರ್ ಏಷ್ಯಾ ಇಂಡಿಯಾ ಸ್ವಾಧೀನಕ್ಕೆ ಏರಿಂಡಿಯಾ ಸಜ್ಜು
‘ಏರ್ ಏಷ್ಯಾ ಇಂಡಿಯಾ’ ವಿಮಾನಯಾನ ಕಂಪನಿಯನ್ನು ಸಂಪೂರ್ಣವಾಗಿ ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳಲು ಟಾಟಾ ಒಡೆತನದ ಏರ್ ಇಂಡಿಯಾ ಪ್ರಸ್ತಾಪ ಸಲ್ಲಿಸಿದೆ. ಇದರಿಂದಾಗಿ ಏರ್ ಇಂಡಿಯಾ ಇನ್ನಷ್ಟುದೊಡ್ಡ ಕಂಪನಿಯಾಗಿ ಹೊರಹೊಮ್ಮುವ ಸಾಧ್ಯತೆ ಇದೆ.
ಕಳೆದ ವರ್ಷ ಏರ್ ಇಂಡಿಯಾವನ್ನು ಸಂಪೂರ್ಣವಾಗಿ ತನ್ನ ತೆಕ್ಕೆಗೆ ತೆಗೆದುಕೊಂಡ ಟಾಟಾ ಸನ್ಸ್ ಕಂಪನಿ, ಈಗಾಗಲೇ ಏರ್‌ಏಷ್ಯಾ ಇಂಡಿಯಾ ಕಂಪನಿಯಲ್ಲಿ ಶೇ. 83.67 ಷೇರು ಹೊಂದಿದೆ. ಉಳಿದ ಷೇರು ಮಲೇಷ್ಯಾ ಮೂಲದ ಏರ್ ಏಷ್ಯಾ ಬಳಿ ಇವೆ. ಆದರೆ ಇದೀಗ ಟಾಟಾ ಒಡೆತನದಲ್ಲಿ ಇರುವ ಏರ್ ಇಂಡಿಯಾ, ಟಾಟಾ ಸನ್ಸ್‌ನ ಷೇರುಗಳು ಸೇರಿದಂತೆ ಏರ್ ಏಷ್ಯಾದ ಎಲ್ಲ ಷೇರು ಖರೀದಿಗೆ ಮುಂದಾಗಿದೆ. ಈ ಬಗ್ಗೆ ಭಾರತೀಯ ಸ್ಪರ್ಧಾ ಆಯೋಗಕ್ಕೆ ನೋಟಿಸ್ ಸಲ್ಲಿಸಲಾಗಿದೆ.
18000 ಕೋಟಿ ರು.ಗೆ ಖರೀದಿ
ಕಳೆದ ವರ್ಷ ನಡೆದ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಟಾಟಾ ಸಮೂಹವು ಏರ್ ಇಂಡಿಯಾವನ್ನು 18 ಸಾವಿರ ಕೋಟಿಗೆ ಖರೀದಿಸಿತ್ತು. ಈ ಒಪ್ಪಂದದ ಅನ್ವಯ ಟಾಟಾ ಸಮೂಹವು ಕೇಂದ್ರ ಸರ್ಕಾರಕ್ಕೆ 2700 ಕೋಟಿ ರು. ನಗದು ಪಾವತಿಸಿದ್ದು, ಕಂಪನಿಯ 15300 ಕೋಟಿ ರು. ಸಾಲವನ್ನು ತೀರಿಸಿದೆ. ಈ ಎಲ್ಲಾ ಪ್ರಕ್ರಿಯೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕಂಪನಿಯ ಆಡಳಿತವನ್ನು ಗುರುವಾರ ಟಾಟಾ ಸಮೂಹಕ್ಕೆ ಹಸ್ತಾಂತರಿಸಲಾಯಿತು.