
ಭರೂಚ್(ಮೇ.13): ‘ಎರಡು ಬಾರಿ ಪ್ರಧಾನಿಯಾಗಿದ್ದು ಸಾಕಲ್ಲವೇ ಎಂದ ಹಿರಿಯ ವಿಪಕ್ಷ ನಾಯಕನಿಗೆ, ನಾನು ಇಲ್ಲಿಗೇ ರಾಜಕೀಯ ಪಯಣವನ್ನು ನಿಲ್ಲಿಸುವುದಿಲ್ಲ’ ಎಂದು ಹೇಳಿದ ಘಟನೆಯನ್ನು ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ನೆನಪಿಸಿಕೊಂಡಿದ್ದಾರೆ. ಈ ಮೂಲಕ ಮತ್ತೆ ಬಿಜೆಪಿ ಸರ್ಕಾರ ಬರುವ ಸುಳಿವನ್ನು ಅವರು ನೀಡಿದ್ದಾರೆ.
ಗುಜರಾತ್ ಸರ್ಕಾರದ ಆರ್ಥಿಕ ನೆರವು ಯೋಜನೆಗಳಿಗೆ ಚಾಲನೆ ನೀಡಿ ಗುರುವಾರ ಮಾತನಾಡಿದ ಮೋದಿ, ‘ಹಿರಿಯ ವಿಪಕ್ಷ ನಾಯಕರು ಒಮ್ಮೆ ಭೇಟಿಯಾಗಿದ್ದರು. ಅವರು ಮೋದಿಯವರೇ ನಿಮ್ಮನ್ನು ಜನರು 2 ಬಾರಿ ಪ್ರಧಾನಿಯಾಗಿ ಆಯ್ಕೆ ಮಾಡಿದ್ದಾರೆ. ನಿಮಗಿನ್ನೇನು ಬೇಕು ಎಂದರು. ಅವರ ಪ್ರಕಾರ ಒಬ್ಬ ವ್ಯಕ್ತಿ 2 ಬಾರಿ ಪ್ರಧಾನಿಯಾದರೆ ಎಲ್ಲವನ್ನೂ ಸಾಧಿಸಿದಂತೆ. ಆದರೆ ಗುಜರಾತಿನ ಮಣ್ಣಿನಲ್ಲಿ ಜನಿಸಿದ ನನಗೆ ಇದೇ ದೊಡ್ಡ ಸಾಧನೆ, ಇದರ ನಂತರ ವಿಶ್ರಾಂತಿ ಪಡೆಯಬೇಕು ಎಂದೆನಿಸುವುದಿಲ್ಲ. ಶೇ. 100 ರಷ್ಟುಜನರಿಗೆ ಕಲ್ಯಾಣ ಯೋಜನೆಗಳು ತಲುಪುವವರೆಗೆ ನಾನು ವಿಶ್ರಾಂತಿ ತೆಗೆದುಕೊಳ್ಳಲ್ಲ’ ಎಂದರು.
'ಉತ್ಕರ್ಷ್ ಸಮಾರೋಹ್'ನಲ್ಲಿ ದೃಷ್ಟಿಹೀನ ಯುವಕನ ಮಾತಿಗೆ ಭಾವುಕರಾದ ಪ್ರಧಾನಿ ಮೋದಿ!
ಮೋದಿ ತಮ್ಮ ಭಾಷಣದಲ್ಲಿ ಯಾವುದೇ ವಿಪಕ್ಷ ನಾಯಕನ ಹೆಸರನ್ನು ಸೂಚಿಸದಿದ್ದರೂ, ಕಳೆದ ತಿಂಗಳು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ದೆಹಲಿಯಲ್ಲಿ ಭೇಟಿಯಾಗಿದ್ದರು. ಮೋದಿ ಆ ಭೇಟಿಯನ್ನೇ ಇಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
WHO ಸುಧಾರಣೆಗೆ ಮೋದಿ ಕರೆ
ಕೋವಿಡ್ ಸಾಂಕ್ರಾಮಿಕ ತಡೆಗಟ್ಟಲು ಲಸಿಕೆಗಳು ಮತ್ತು ಚಿಕಿತ್ಸಕಗಳಿಗೆ ಅನುಮೋದನೆ ನೀಡುವ ವಿಶ್ವ ಆರೋಗ್ಯ ಸಂಸ್ಥೆಯ ಪ್ರಕ್ರಿಯೆಯನ್ನು ಸರಳೀಕರಿಸಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ Üರೆ ನೀಡಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಆಯೋಜಿಸಿದ್ದ 2ನೇ ಜಾಗತಿಕ ಕೋವಿಡ್ ವರ್ಚುವಲ್ ಶೃಂಗಸಭೆಯಲ್ಲಿ ಅವರು ಗುರುವಾರ ರಾತ್ರಿ ಮಾತನಾಡಿದರು.
‘ಸಾಂಕ್ರಾಮಿಕದ ವಿರುದ್ಧ ಹೋರಾಡಲು ಲಸಿಕೆ ಮತ್ತು ಔಷಧಗಳ ಜಾಗತಿಕ ಪೂರೈಕೆ ಸರಪಳಿಯನ್ನು ನಿರ್ಮಾಣ ಮಾಡುವುದು ಮತ್ತು ಇವುಗಳಿಗೆ ಸಮಾನ ಪ್ರವೇಶವನ್ನು ಸಕ್ರಿಯಗೊಳಿಸುವುದು ಅಗತ್ಯವಾಗಿದೆ. ಹೆಚ್ಚು ಸುಧಾರಿತವಾದ ಆರೋಗ್ಯ ವ್ಯವಸ್ಥೆಯನ್ನು ನಿರ್ಮಿಸಲು ವಿಶ್ವ ಆರೋಗ್ಯ ಸಂಸ್ಥೆ ಸುಧಾರಿಸಬೇಕು ಮತ್ತು ಬಲಗೊಳ್ಳಬೇಕು’ ಎಂದು ಅವರು ಹೇಳಿದರು.
ಮೋದಿ ಪ್ರಧಾನಿಯಾಗಿ ಮೇ 26ಕ್ಕೆ 8 ವರ್ಷ: ಬಿಜೆಪಿ ಅದ್ಧೂರಿ ಆಚರಣೆ
ಈ ವೇಳೆ ಭಾರತವು ಸಾಂಕ್ರಾಮಿಕವನ್ನು ನಿಭಾಯಿಸುತ್ತಿರುವುದನ್ನು ಉಲ್ಲೇಖಿಸಿದ ಮೋದಿ, ‘ದೇಶದ ಲಸಿಕಾ ಕಾರ್ಯಕ್ರಮವು ವಿಶ್ವದಲ್ಲೇ ಅತಿದೊಡ್ಡ ಲಸಿಕಾಕರಣವಾಗಿದೆ. ಕೋವಿಡ್ ವಿರುದ್ಧ ಹೋರಾಡಲು ನಾವು ಜನಕೇಂದ್ರಿತವಾದ ಕಾರ್ಯತಂತ್ರಗಳನ್ನು ಅಳವಡಿಸಿಕೊಂಡಿದ್ದೇವೆ. ಅದೇ ರೀತಿ ಭವಿಷ್ಯದ ಆರೋಗ್ಯ ತುರ್ತುಪರಿಸ್ಥಿತಿಗಳನ್ನು ಎದುರಿಸಲು ಸಂಘಟಿತ ಜಾಗತಿಕ ಪ್ರತ್ರಿಕ್ರಿಯೆಯ ಅಗತ್ಯವಿದೆ’ ಎಂದು ಅವರು ಹೇಳಿದರು.
ಈಗಲೂ ಸಹ ಜನರು ಸಾಂಕ್ರಾಮಿಕದಿಂದ ತೊಂದರೆ ಅನುಭವಿಸುತ್ತಿದ್ದಾರೆ. ಹಾಗಾಗಿ ಔಷಧಗಳ ಪೂರೈಕೆ ಮತ್ತು ಕೋವಿಡ್ ಪರೀಕ್ಷೆಯನ್ನು ಹೆಚ್ಚು ಮಾಡಬೇಕು. ಅಲ್ಲದೇ ಬೌದ್ಧಿಕ ಆಸ್ತಿ ಹಕ್ಕುಗಳ ವ್ಯಾಪಾರ (ಟ್ರಿಫ್ಸ್) ಕುರಿತಾಗಿ ಜಾಗತಿಕವಾಗಿ ಹೆಚ್ಚು ಹೊಂದಿಕೊಳ್ಳುವ ಅಗತ್ಯ ಇದೆ ಎಂದು ಅವರು ಹೇಳಿದರು.
ಕಳೆದ ವರ್ಷ ಸೆ.22ರಂದು ಆಯೋಜಿಸಿದ್ದ ಮೊದಲ ಕೋವಿಡ್ ಶೃಂಗಸಭೆಯಲ್ಲೂ ಸಹ ಮೋದಿ ಅವರು ವರ್ಚುವಲ್ ಆಗಿ ಭಾಗಿಯಾಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ