ತಾಜ್‌ಮಹಲ್ ವೀಕ್ಷಣೆ ವೇಳೆ ತಂದೆಗೆ ಹೃದಯಾಘಾತ: ಸಿಪಿಆರ್ ಮಾಡಿ ಜೀವ ಉಳಿಸಿದ ಮಗ: ವೀಡಿಯೋ

By Anusha Kb  |  First Published Nov 17, 2023, 11:42 AM IST

ಕುಟುಂಬದೊಂದಿಗೆ ತಾಜ್‌ ಮಹಲ್ ವೀಕ್ಷಣೆಗೆ ಬಂದಿದ್ದ ವೇಳೆ ಹಿರಿಯ ನಾಗರಿಕರೊಬ್ಬರಿಗೆ ಹೃದಯಾಘಾತವಾಗಿದ್ದು, ಕೂಡಲೇ ಅವರ ಜೊತೆ ಇದ್ದ ಪುತ್ರ ಸಿಪಿಆರ್ ಮಾಡಿ ತಂದೆಯನ್ನು ಉಳಿಸಿಕೊಂಡಿದ್ದಾರೆ. ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಆಗ್ರಾ: ಕುಟುಂಬದೊಂದಿಗೆ ತಾಜ್‌ ಮಹಲ್ ವೀಕ್ಷಣೆಗೆ ಬಂದಿದ್ದ ವೇಳೆ ಹಿರಿಯ ನಾಗರಿಕರೊಬ್ಬರಿಗೆ ಹೃದಯಾಘಾತವಾಗಿದ್ದು, ಕೂಡಲೇ ಅವರ ಜೊತೆ ಇದ್ದ ಪುತ್ರ ಸಿಪಿಆರ್ ಮಾಡಿ ತಂದೆಯನ್ನು ಉಳಿಸಿಕೊಂಡಿದ್ದಾರೆ. ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೃದ್ಧರೊಬ್ಬರು ತಮ್ಮ ಕುಟುಂಬದೊಂದಿಗೆ ವಿಶ್ವ ಪ್ರಸಿದ್ಧ ಪ್ರೇಮ ಸೌಧ ತಾಜ್‌ ಮಹಲ್ ವೀಕ್ಷಣೆಗೆ ಆಗಮಿಸಿದ್ದರು. ಅಲ್ಲಿ ತಾಜ್ ಮಹಲ್ ಕಟ್ಟಡದೊಳಗೆ ಅವರಿಗೆ ಹೃದಯಾಘಾತವಾಗಿದ್ದು, ಕೂಡಲೇ ಮಗ ತಂದೆಗೆ ಪ್ರಥಮ ಚಿಕಿತ್ಸೆಯ ಭಾಗವಾಗಿ ಸಿಪಿಆರ್ ಮಾಡಿದ್ದಾರೆ. ಈ ದೃಶ್ಯವನ್ನು ಅಲ್ಲಿದ್ದ ಇತರ ಪ್ರವಾಸಿಗರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು ಈ ದೃಶ್ಯ ವೈರಲ್ ಆಗಿದೆ. 

ಮಗ ಮಾಡಿದ ಸಿಪಿಆರ್‌ನಿಂದಾಗಿ ತಂದೆ (Father) ಸ್ವಲ್ಪ ಹೊತ್ತಿನಲ್ಲೇ ಎಚ್ಚರಗೊಂಡಿದ್ದು, ಕೂಡಲೇ ಅವರನ್ನು ಕುಟುಂಬದವರು ಆಸ್ಪತ್ರೆಗೆ ದಾಖಲಿಸಿದ್ದಾರೆ.  ಸಿಪಿಆರ್‌  ಮಾಡಿದರೆ ವೈದ್ಯಕೀಯ ಪರಿಣಿತರು ರೋಗಿಯ ಸಹಾಯಕ್ಕೆ ಬರುವವರೆಗೂ ಅವರಲ್ಲಿ ರಕ್ತ ಸುಗಮವಾಗಿ ಚಲನೆಯಾಗುವಂತೆ ಮಾಡಬಹುದಾಗಿದೆ.  ಪ್ರಥಮ ಚಿಕಿತ್ಸಾ ತರಬೇತಿ ಇಲ್ಲದ ಜನರು ಸಹ ಸಿಪಿಆರ್ ಮಾಡುವ ಮೂಲಕ ತುರ್ತು ವೈದ್ಯಕೀಯ ಅಗತ್ಯದ ಸ್ಥಿತಿಯಲ್ಲಿರುವ ಜನರ ಜೀವ ಉಳಿಸಿಕೊಳ್ಳಬಹುದಾಗಿದೆ.  ಹೃದಯ ಬಡಿತ ಕಡಿಮೆಯಾಗಿ  ಬಡಿತ ನಿಲ್ಲಿಸಿದ ಸಂದರ್ಭದಲ್ಲಿ ಈ ಸಿಪಿಆರ್ (CPR) ಮಾಡುವುದರಿಂದ ವ್ಯಕ್ತಿಯೂ ಬದುಕುಳಿಯುವ ಸಾಧ್ಯತೆ ಎರಡು ಮೂರು ಪಾಲು ಹೆಚ್ಚಿದೆ. 

Latest Videos

undefined

ಹಾವಿಗೆ ಸಿಪಿಆರ್ ಮಾಡಿ ಜೀವ ಉಳಿಸಿದ ಪೊಲೀಸ್‌ : ಭಯಾನಕ ವೀಡಿಯೋ ವೈರಲ್‌

ಆದರೆ ಇವರು ಯಾರು ಎಲ್ಲಿಂದ ಬಂದವರು ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಹೃದಯಾಘಾತಕ್ಕೆ (Heart Attack)ಒಳಗಾದ ವ್ಯಕ್ತಿಯನ್ನು ನೆಲದ ಮೇಲೆ ಮಲಗಿಸಿ ಅವರ ಕತ್ತನ್ನು ಸ್ವಲ್ಪ ಎತ್ತಿ ಅವರ ಬಾಯಿ ತೆರೆದು ಬಾಯಲ್ಲಿ ಏನಾದರೂ  ಆಹಾರ ಗಂಟಲಿನಲ್ಲಿ ಸಿಲುಕಿದೆಯೋ ಎಂದು ಗಮನಿಸಬೇಕು. ನಂತರ ಅವರ ಬಾಯಿಗೆ ಕಿವಿ ಇಟ್ಟು ಉಸಿರಾಟವಿದೆಯೋ ಎಂದು ಗಮನಿಸಬೇಕು. ಉಸಿರಾಡುವುದು ಕೆಳದೇ ಹೋದಲ್ಲಿ ಕೂಡಲೇ ಸಿಪಿಆರ್ ಮಾಡಬೇಕು.  ನಂತರ ನಿಮ್ಮ ಎರಡು ಕೈಗಳನ್ನು ಅವರ ಹೃದಯದ  ಮೇಲೆ ಇರಿಸಿ ಗಟ್ಟಿಯಾಗಿ ವೇಗವಾಗಿ ಫುಶ್ ಮಾಡಬೇಕು. 

ಬೆಂಗಳೂರು ಐಕಿಯಾದಲ್ಲಿ ಹೃದಯಾಘಾತ: ಶಾಪಿಂಗ್ ಬಂದ ವೈದ್ಯರಿಂದ ವ್ಯಕ್ತಿಯ ರಕ್ಷಣೆ

ಹೃದಯ ಯಾವುದೇ ಕಾರಣಕ್ಕೆ ನಿಂತು ಹೋಗಿಬಿಟ್ಟರೆ ದೇಹಕ್ಕೆ ರಕ್ತ ಸಂಚಾರ ಇರುವುದಿಲ್ಲ. ಮೆದುಳಿಗೂ ರಕ್ತ ಸಂಚಾರ ಪೂರೈಕೆಯಾಗುವುದಿಲ್ಲ. ಇಂಥಾ ಸಂದರ್ಭದಲ್ಲಿ ಆರ್ಟಿಫಿಶಿಯಲ್‌ ಆಗಿ ಚೆಸ್ಟ್‌ ಕಂಪ್ರೆಶನ್ ಮಾಡಿ ಹೃದಯ ಪಂಪ್ ಮಾಡುವ ತರ ಮಾಡಬಹುದು. ನಾವು ಹೊರಗಿನಿಂದ ಪ್ರೆಸ್ ಮಾಡಿದಾಗ ಹಾರ್ಟ್‌ ಪಂಪ್ ಆಗಿ ಬ್ಲಡ್ ಇಜೆಕ್ಟ್ ಆಗುತ್ತೆ, ಫಿಲ್ ಆಗುತ್ತೆ ಇದನ್ನು ಸಿಪಿಆರ್ ಎನ್ನುತ್ತಾರೆ. 

 

click me!