ಗೆಳತಿ ಕೈ ಕೊಟ್ಟ ಸೇಡಿಗೆ ಲ್ಯಾಪ್‌ಟಾಪ್‌ ಕದಿಯಲು ಶುರು ಮಾಡಿದ ಯುವಕ

Published : Apr 11, 2022, 09:42 PM IST
ಗೆಳತಿ ಕೈ ಕೊಟ್ಟ ಸೇಡಿಗೆ ಲ್ಯಾಪ್‌ಟಾಪ್‌ ಕದಿಯಲು ಶುರು ಮಾಡಿದ ಯುವಕ

ಸಾರಾಂಶ

ವೈದ್ಯಕೀಯ ಕಾಲೇಜಿನಿಂದ ಲ್ಯಾಪ್‌ಟಾಪ್‌ ಕದಿಯುತ್ತಿದ್ದ ಆರೋಪಿ ಗೆಳತಿ ಕೈ ಕೊಟ್ಟ ನಂತರ ಕದಿಯಲು ಶುರು ಮಾಡಿದೆ ಎಂದ ಕಳ್ಳ 25 ವರ್ಷದ ತಮಿಳ್‌ ಸೆಲ್ವನ್‌ ಬಂಧಿತ ಯುವಕ  

ಚೆನ್ನೈ: ವೈದ್ಯಕೀಯ ಕಾಲೇಜು ಹಾಸ್ಟೆಲ್‌ಗಳಿಂದ ಲ್ಯಾಪ್‌ಟಾಪ್‌ಗಳನ್ನು ಕದ್ದ ಆರೋಪದ ಮೇಲೆ 25 ವರ್ಷದ ಯುವಕನನ್ನು ಚೆನ್ನೈ (Chennai) ನಗರ ಪೊಲೀಸರು ಶನಿವಾರ ಸೆಮ್ಮಂಚೇರಿಯಲ್ಲಿ (Semmencherry) ಬಂಧಿಸಿದ್ದಾರೆ. ಮಾಜಿ ಗೆಳತಿಯ ಮೇಲೆ ಸೇಡು ತೀರಿಸಿಕೊಳ್ಳಲು 25 ವರ್ಷದ ಯುವಕನೋರ್ವ ಮೆಡಿಕಲ್ ಕಾಲೇಜು ಹಾಸ್ಟೆಲ್‌ನಿಂದ ಲ್ಯಾಪ್‌ಟಾಪ್ ಕದಿಯಲು ಶುರು ಮಾಡಿದ್ದು, ಈಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ತನ್ನ ಗೆಳತಿ ತನ್ನೊಂದಿಗೆ ಬ್ರೇಕ್‌ಅಪ್‌ ಮಾಡಿಕೊಂಡ ನಂತರ ವೈದ್ಯಕೀಯ ಕಾಲೇಜು ಹಾಸ್ಟೆಲ್‌ಗಳಲ್ಲಿ ಲ್ಯಾಪ್‌ಟಾಪ್‌ಗಳನ್ನು ಕದಿಯಲು ಪ್ರಾರಂಭಿಸಿದ್ದಾಗಿ ಆತ ಪೊಲೀಸರಿಗೆ ತಿಳಿಸಿದ್ದಾನೆ. 

ಎಚ್ 1 ವಾಷರ್‌ಮನ್‌ಪೇಟೆ ಪೊಲೀಸರ (Washermanpet police) ಪ್ರಕಾರ, ಅವರು ಏಪ್ರಿಲ್ 8 ರಂದು ಎರಡನೇ ವರ್ಷದ ವೈದ್ಯಕೀಯ ವಿದ್ಯಾರ್ಥಿ ರುತ್ರೇಶ್(Ruthresh), ತಾವು ವ್ಯಾಸಂಗ ಮಾಡುತ್ತಿರುವ ಸ್ಟಾನ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ (Stanley Medical College Hospital) ಹಾಸ್ಟೆಲ್ ಕೊಠಡಿಯಿಂದ ಲ್ಯಾಪ್‌ಟಾಪ್ ಕಳುವಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು ಹಾಸ್ಟೆಲ್ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಇತರೆ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ದೃಶ್ಯಾವಳಿಗಳನ್ನು ವಿಶ್ಲೇಷಿಸುವಾಗ ಪೊಲೀಸರು ಯುವಕ ಬ್ಯಾಗ್‌ನೊಂದಿಗೆ ಹಾಸ್ಟೆಲ್‌ನಿಂದ ಆಟೋರಿಕ್ಷಾವನ್ನು ಹತ್ತುತ್ತಿರುವುದು ಕಂಡುಬಂದಿದೆ. ಬಳಿಕ ಪೊಲೀಸರು ಶನಿವಾರ ರಿಕ್ಷಾವನ್ನು ಪತ್ತೆ ಹಚ್ಚಿ ಆರೋಪಿಯನ್ನು ಪತ್ತೆ ಮಾಡಿ ಸೆಮ್ಮೆಂಚೇರಿಯಿಂದ ಬಂಧಿಸಿ ಕರೆ ತಂದಿದ್ದಾರೆ. 

ಟ್ರಾವೆಲ್‌ಬ್ಯಾಗ್‌ನಲ್ಲಿ ಗೆಳತಿ ತುಂಬಿ ಹಾಸ್ಟೆಲ್‌ ಒಳಕ್ಕೆ ಕರೆದೊಯ್ದ ಸುಂದರಾಂಗ! ಉಡುಪಿಯ ವಿಡಿಯೋ

ಬಂಧಿತ ಆರೋಪಿಯನ್ನು ತಮಿಳ್ ಸೆಲ್ವನ್ (Tamil Selvan) ಎಂದು ಗುರುತಿಸಲಾಗಿದೆ. ಆರೋಪಿಯು 31 ಅತ್ಯಾಧುನಿಕ ಲ್ಯಾಪ್‌ಟಾಪ್‌ಗಳನ್ನು (laptop) ಕದ್ದು ಕಾಳಸಂತೆಯಲ್ಲಿ ಮಾರಾಟ ಮಾಡಿ ಜೀವನ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ನಕಲಿ ಗುರುತಿನ ಚೀಟಿಗಳನ್ನು ಹೊಂದಿದ್ದ ತಮಿಳು ಸೆಲ್ವನ್ (Tamil Selvan), ಕೇರಳ (Kerala), ದೆಹಲಿ (Delhi) ಮತ್ತು ಗುಜರಾತ್ (Gujarat) ಸೇರಿದಂತೆ ದೇಶದ ಇತರ ವೈದ್ಯಕೀಯ ಕಾಲೇಜು ಹಾಸ್ಟೆಲ್‌ಗಳಲ್ಲಿ ಇದೇ ರೀತಿಯ ಕೃತ್ಯಗಳಲ್ಲಿ ತೊಡಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Shocking News : ಬಾಯ್ ಫ್ರೆಂಡ್ ಖಾಸಗಿ ಅಂಗ ಕತ್ತರಿಸಿ ಮಹಿಳೆ ಮಾಡಿದ್ದೇನು?

ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 380 (ಕಳ್ಳತನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ವಾಷರ್‌ಮನ್‌ಪೇಟೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎಸ್ ಯಮುನಾ (S Yamuna) ತಿಳಿಸಿದ್ದಾರೆ.  ವಿಚಾರಣೆ ವೇಳೆ ಆರೋಪಿ ತಮಿಳು ಸೆಲ್ವನ್ ತನ್ನ ಗೆಳತಿ ತನಗೆ ಕೈ ಕೊಟ್ಟ ನಂತರ ವೈದ್ಯಕೀಯ ಕಾಲೇಜು ಹಾಸ್ಟೆಲ್‌ಗಳಿಂದ ಲ್ಯಾಪ್‌ಟಾಪ್‌ಗಳನ್ನು ಕದಿಯಲು ಪ್ರಾರಂಭಿಸಿದೆ ಎಂದು ಹೇಳಿದ್ದಾನೆ. ಆದರೆ ಇದೊಂದೇ ಕಾರಣವಾಗಿರಲಾರದು ಎಂದು ನಾವು ನಂಬುತ್ತೇವೆ. ಈತನ ವಿರುದ್ಧ ಹಲವು ಪ್ರಕರಣಗಳು ಬಾಕಿ ಇದ್ದು, ಚಿಕ್ಕಂದಿನಿಂದಲೂ ಈತನಿಗೆ ಕಳ್ಳತನ ಮಾಡುವ ಅಭ್ಯಾಸವಿತ್ತು. ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಆತ ಚಿಕ್ಕಂದಿನಿಂದಲೇ ದಾರಿ ತಪ್ಪಿದ್ದ ಎಂದು ಇನ್ಸ್‌ಪೆಕ್ಟರ್ ಹೇಳಿದ್ದರು.

ಕಳ್ಳತನದ ವಿಚಿತ್ರ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಿದೆ. ಇತ್ತೀಚೆಗೆ ಬಿಹಾರದಲ್ಲಿ ನಂಬಲು ಅಸಾಧ್ಯವಾಗಿರುವಂಥ ಘಟನೆಯೊಂದು ನಡೆದಿತ್ತು. ನೀರಾವರಿ ಇಲಾಖೆ ಅಧಿಕಾರಿಗಳಂತೆ ನಟಿಸಿ, ಗ್ರಾಮವೊಂದರ 60 ಅಡಿ ಕಬ್ಬಿಣದ ಸೇತುವೆಯನ್ನೇ ಕಳ್ಳರು ಮಾಯವಾಗಿಸಿದ್ದರು. ಬಿಹಾರದ (Bihar) ರೋಹ್ತಾಸ್ (Rohtas ) ಜಿಲ್ಲೆಯಲ್ಲಿ ಹಾಡಹಗಲೇ 60 ಅಡಿ ಉದ್ದದ ಕಬ್ಬಿಣದ ಸೇತುವೆಯನ್ನು (60 feet long iron bridge ) ಖದೀಮರ ತಂಡ ಲಪಟಾಯಿಸಿದೆ. ವಿಶೇಷವೆಂದರೆ, ಈ ದರೋಡೆಗೆ (Loot)ಸ್ಥಳೀಯ ಅಧಿಕಾರಿಗಳು (local officials) ಹಾಗೂ ಗ್ರಾಮಸ್ಥರ (villagers ) ಸಹಾಯವನ್ನೂ ಖದೀಮರು ಪಡೆದುಕೊಂಡಿದ್ದಾರೆ ಎನ್ನುವುದು. ನೀರಾವರಿ ಇಲಾಖೆಯ ಅಧಿಕಾರಿಗಳ (state’s irrigation department) ಸೋಗಿನಲ್ಲಿದ್ದ ಕಳ್ಳರು, ಸ್ಥಳೀಯ ಅಧಿಕಾರಿಗಳು ಹಾಗೂ ಗ್ರಾಮಸ್ಥರ ನೆರವಿನಿಂದ ಮೂರು ದಿನಗಳ ಸತತ ಕಾರ್ಯಾಚರಣೆಯ ಬಳಿಕ ಈ ದರೋಡೆಯನ್ನು ಪೂರ್ತಿ ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್