ದಕ್ಷಿಣ ಭಾರತದಲ್ಲಿ ಪ್ರಖ್ಯಾತರಾಗಿರುವ ತಮಿಳು ನಟ ದಳಪತಿ ವಿಜಯ್ ತಮ್ಮ ರಾಜಕೀಯ ಪಕ್ಷವನ್ನು ಘೋಷಣೆ ಮಾಡಿದ್ದು, ಅದಕ್ಕೆ 'ತಮಿಳಗ ವೆಟ್ರಿ ಕಳಗಂ' ಎಂದು ಹೆಸರಿಸಿದ್ದಾರೆ.
ಚೆನ್ನೈ (ಫೆ.2): ತಮಿಳು ಸೂಪರ್‌ಸ್ಟಾರ್ ದಳಪತಿ ವಿಜಯ್ ಅವರು ಪ್ರಮುಖ ಲೋಕಸಭೆ ಚುನಾವಣೆಗೆ ಕೆಲ ತಿಂಗಳು ಮೊದಲು 'ತಮಿಳಗ ವೆಟ್ರಿ ಕಳಗಂ' ಎಂಬ ಹೆಸರಿನ ತಮ್ಮ ರಾಜಕೀಯ ಪಕ್ಷವನ್ನು ಶುಕ್ರವಾರ ಘೋಷಣೆ ಮಾಡಿದ್ದಾರೆ. ಕಳೆದ ವಾರ ಚೆನ್ನೈನಲ್ಲಿ ನಡೆದ ಸಭೆಯಲ್ಲಿ ಅವರ ಅಭಿಮಾನಿಗಳ ಸಂಘ ವಿಜಯ್ ಮಕ್ಕಳ್ ಇಯಕ್ಕಂ ರಾಜಕೀಯ ಪಕ್ಷದ ರಚನೆಗೆ ಒಪ್ಪಿಗೆ ನೀಡಿದ ನಂತರ ದಳಪತಿ ವಿಜಯ್ ಈ ಘೋಷಣೆ ಮಾಡಿದ್ದಾರೆ. ಈ ಕುರಿತಾದ ಹೇಳಿಕೆ ಪ್ರಕಟ ಮಾಡಿರುವ ನಟ, "ನಾವು ನಮ್ಮ ಪಕ್ಷ 'ತಮಿಳಗ ವೆಟ್ರಿ ಕಳಗಂ' ಅನ್ನು ನೋಂದಾಯಿಸಲು ಚುನಾವಣಾ ಆಯೋಗಕ್ಕೆ ಇಂದು ಅರ್ಜಿ ಸಲ್ಲಿಸುತ್ತಿದ್ದೇವೆ, ಮುಂಬರುವ 2026 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವುದು ಮತ್ತು ಮೂಲಭೂತ ರಾಜಕೀಯ ಬದಲಾವಣೆ ತರುವುದು ನಮ್ಮ ಗುರಿಯಾಗಿದೆ. ಇದನ್ನೇ ಜನರು ಬಯಸಿದ್ದಾರೆ' ಎಂದು ತಿಳಿಸಿದ್ದಾರೆ.
ರಾಜಕಾರಣ ಎನ್ನುವುದು ನನ್ನ ಇನ್ನೊಂದು ವೃತ್ತಿಯಲ್ಲ. ಇದು ಜನರ ಪವಿತ್ರ ಕೆಲಸ ಎಂದು ಭಾವಿಸಿದ್ದೇನೆ. ನಾನು ಬಹಳ ಸಮಯದಲ್ಲಿ ರಾಜಕೀಯಕ್ಕೆ ಇಳಿಯುವ ನಿಟ್ಟಿನಲ್ಲಿ ಸಿದ್ಧತೆ ನಡೆಸುತ್ತಿದ್ದೆ. ರಾಜಕೀಯ ಎಂದಿಗೂ ನನಗೆ ಹವ್ಯಾಸವಲ್ಲ. ಇದು ನನ್ನಲ್ಲಿದ್ದ ಆಳವಾದ ಆಸೆಯಾಗಿದೆ. ನಾನು ನನ್ನನ್ನು ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಸಿಕೊಳ್ಳಲು ಬಯಸುತ್ತೇನೆ ಎಂದು ದಳಪತಿ ವಿಜಯ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
undefined
ತಮ್ಮ ರಾಜಕೀಯ ನಡೆಯ ಬಗ್ಗೆ ಮತ್ತಷ್ಟು ವಿವರಣೆ ನೀಡಿದ ವಿಜಯ್, "ಸದ್ಯದ ರಾಜಕೀಯ ವಾತಾವರಣದ ಬಗ್ಗೆ ನಿಮಗೆಲ್ಲರಿಗೂ ತಿಳಿದಿದೆ. ಆಡಳಿತದ ದುಷ್ಕೃತ್ಯಗಳು ಮತ್ತು ಭ್ರಷ್ಟ ರಾಜಕೀಯ ಸಂಸ್ಕೃತಿ ಒಂದೆಡೆಯಾಗಿದ್ದರೆ, ಇನ್ನೊಂದೆಡೆ, ನಮ್ಮ ಜನರನ್ನು ಧರ್ಮ ಹಾಗೂ ಜಾತಿಯ ಆಧಾರದ ಮೇಲೆ ವಿಭಜಿಸುವ ರಾಜಕೀಯ ಸಂಸ್ಕೃತಿ ಇದೆ. ಪ್ರತಿಯೊಬ್ಬರೂ, ವಿಶೇಷವಾಗಿ, ತಮಿಳುನಾಡಿನಲ್ಲಿ ನಿಸ್ವಾರ್ಥ, ಪಾರದರ್ಶಕ, ಜಾತಿ ಮುಕ್ತ, ದೂರದೃಷ್ಟಿ, ಭ್ರಷ್ಟಾಚಾರ ಮುಕ್ತ ಮತ್ತು ಸಮರ್ಥ ಆಡಳಿತಕ್ಕೆ ಕಾರಣವಾಗುವ ಮೂಲಭೂತ ರಾಜಕೀಯ ಬದಲಾವಣೆಗಾಗಿ ಹಂಬಲಿಸುತ್ತಿದ್ದಾರೆ' ಎಂದು ತಿಳಿಸಿದ್ದಾರೆ.
ನಟನೆಯಿಂದ ರಾಜಕಾರಣಕ್ಕಿಳಿದ ದಳಪತಿ ವಿಜಯ್, ಶೀಘ್ರದಲ್ಲೇ ಹೊಸ ಪಕ್ಷ ಸ್ಥಾಪನೆ!
ಚುನಾವಣಾ ಆಯೋಗದ ಅನುಮೋದನೆ ಪಡೆದ ನಂತರ, ಪಕ್ಷವು ಸಾರ್ವಜನಿಕ ಸಭೆಗಳು ಮತ್ತು ಕಾರ್ಯಕ್ರಮಗಳನ್ನು ನಡೆಸಲು ಯೋಜಿಸುತ್ತಿದೆ, ಅಲ್ಲಿ ಅವರು ಪಕ್ಷದ ನೀತಿಗಳು, ತತ್ವಗಳು ಮತ್ತು ಕ್ರಿಯಾ ಯೋಜನೆಗಳನ್ನು ಪ್ರಸ್ತುತಪಡಿಸಲಿದ್ದೇನೆ ಮತ್ತು ಧ್ವಜ ಮತ್ತು ಪಕ್ಷದ ಚಿಹ್ನೆಯನ್ನು ಜನರಿಗೆ ತಿಳಿಸುವುದಾಗಿ ಹೇಳಿದ್ದಾರೆ.
Dalpati Vijay: ನಟ ದಳಪತಿ ವಿಜಯ್ ದುಬಾರಿ ಕಾರು ಹೇಗಿದೆ ? ಇದರ ಬೆಲೆ ಎಷ್ಟು ಗೊತ್ತಾ ?
Tamil Nadu | Actor Vijay enters politics, announces the name of his party - Tamilaga Vetri Kazham pic.twitter.com/m1yMdNPK6x
— ANI (@ANI)