ಹೇಮಂತ್‌ ಸೊರೆನ್‌ ಬಂಧನದ ಬಳಿಕ ಚಂಪೈ ಸೊರೆನ್‌ ಜಾರ್ಖಂಡ್‌ ಮುಖ್ಯಮಂತ್ರಿಯಾಗಿ ಪದಗ್ರಹಣ

By Santosh NaikFirst Published Feb 2, 2024, 1:18 PM IST
Highlights

ಭೂ ಹಗರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಹೇಮಂತ್ ಸೋರೆನ್ ಅವರನ್ನು ಬಂಧಿಸಿದ ನಂತರ ಜಾರ್ಖಂಡ್ ಮುಕ್ತಿ ಮೋರ್ಚಾದ ಅನುಭವಿ ರಾಜಕಾರಣಿ ಚಂಪೈ ಸೊರೆನ್ ಶುಕ್ರವಾರ ಜಾರ್ಖಂಡ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
 

ರಾಂಚಿ (ಫೆ.2): ಜಾರ್ಖಂಡ್ ಮುಖ್ಯಮಂತ್ರಿಯಾಗಿ ಜಾರ್ಖಂಡ್ ಮುಕ್ತಿ ಮೋರ್ಚಾದ ಹಿರಿಯ ನಾಯಕ ಚಂಪೈ ಸೊರೆನ್ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದರು. ಭೂ ಹಗರಣದಲ್ಲಿ ಜಾರಿ ನಿರ್ದೇಶನಾಲಯವು ಹೇಮಂತ್ ಸೊರೆನ್ ಅವರನ್ನು ಬಂಧಿಸಿದ ನಂತರ ರಾಜ್ಯದ ಮುಖ್ಯಮಂತ್ರಿಯಾಗಿ ಹಾಗೂ ಜಾರ್ಖಂಡ್‌ ಮುಕ್ತಿ ಮೋರ್ಚಾದ ಶಾಸಕಾಂಗ ಪಕ್ಷದ ನಾಯಕರಾಗಿ ಚಂಪೈ ಸೊರೆನ್‌ ಅವರನ್ನು ಆಯ್ಕೆ ಮಾಡಲಾಗಿತ್ತು. ಕಾಂಗ್ರೆಸ್ ನಾಯಕ ಅಲಂಗೀರ್ ಅಲನ್ ಮತ್ತು ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) ಸತ್ಯಾನಂದ್ ಭೋಗ್ತಾ ಕೂಡ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರಮಾಣವಚನ ಸ್ವೀಕಾರ ಮಾಡಿರುವ ಚಂಪೈ ಸೊರೆನ್‌ ಈಗ ಪ್ರಮುಖವಾದ ವಿಶ್ವಾಸ ಮತವನ್ನು ಸಾಬೀತು ಮಾಡಬೇಕಿದ್ದು, 10 ದಿನಗಳ ಒಳಗಾಗಿ ಈ ಕಾರ್ಯ ಮಾಡಬೇಕಿದೆ. 43 ಶಾಸಕರು ತಮ್ಮ ಬೆಂಬಲಕ್ಕೆ ಇದ್ದಾರೆ ಎಂದು ಜಾರ್ಖಂಡ್ ಮುಕ್ತಿ ಮೋರ್ಚಾ ನಾಯಕ ಹೇಳಿದ್ದಾರೆ.

ಚಂಪೈ ಸೊರೆನ್ ನೇತೃತ್ವದ ಸರ್ಕಾರವು ಬಹುಮತಕ್ಕಾಗಿ 41 ಶಾಸಕರ ಬೆಂಬಲ ಪಡೆಯಬೇಕಿದೆ ಮತ್ತು ಪ್ರಸ್ತುತ 43 ಶಾಸಕರು ತಮ್ಮ ಬೆಂಬಲದಲ್ಲಿದ್ದಾರೆ ಎಂದು ಜಾರ್ಖಂಡ್ ಮುಕ್ತಿ ಮೋರ್ಚಾ ನಾಯಕ ಹೇಳಿದ್ದಾರೆ. ಭೂ ಹಗರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಕೆಲವೇ ಗಂಟೆಗಳ ಮೊದಲು ಹೇಮಂತ್ ಸೊರೆನ್ ಬುಧವಾರ ಚಂಪೈ ಸೊರೆನ್ ಅವರನ್ನು ಉತ್ತರಾಧಿಕಾರಿ ಎಂದು ಹೆಸರಿಸಿದ್ದರು.

Hemant Soren: ಜಾರ್ಖಾಂಡ್‌ನಲ್ಲಿ ಆಪರೇಷನ್ ಪಾಲಿಟಿಕ್ಸ್: ಚಂಪಾಯ್ ಸೊರೇನ್ ನೂತನ ಸಿಎಂ..?

ಹೇಮಂತ್ ಸೋರೆನ್ ಅವರ ಸಹೋದರ ಮತ್ತು ಶಾಸಕ ಬಸಂತ್ ಸೊರೆನ್ ಸೇರಿದಂತೆ ಒಟ್ಟು 39 ಆಡಳಿತಾರೂಢ ಸಮ್ಮಿಶ್ರ ಶಾಸಕರು ಹೈದರಾಬಾದ್‌ಗೆ ತೆರಳುವ ಸಾಧ್ಯತೆಯಿದೆ. ಅವರು ಗುರುವಾರ ತೆಲಂಗಾಣದ ರಾಜಧಾನಿಗೆ ಆಗಮಿಸಬೇಕಿತ್ತು, ಮತ್ತು ಎರಡು ಚಾರ್ಟರ್ಡ್ ವಿಮಾನಗಳು ಸಹ ಇದಕ್ಕಾಗಿ ಸಿದ್ಧವಾಗಿವೆ ಆದರೆ ಕೆಟ್ಟ ಹವಾಮಾನ ಮತ್ತು ಕಡಿಮೆ ಗೋಚರತೆಯಿಂದಾಗಿ ವಿಮಾನ ಟೇಕ್ ಆಫ್ ಆಗಲು ವಿಫಲವಾಗಿದೆ.

ಜಾರ್ಖಂಡ್‌ನಲ್ಲಿ ಆಪರೇಶನ್ ಭೀತಿ, ಜೆಎಂಎಂ-ಕಾಂಗ್ರೆಸ್ ಪಕ್ಷದ 43 ಶಾಸಕರು ಹೈದರಾಬಾದ್ ಶಿಫ್ಟ್!

click me!